Crime News
ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:
ವಿರಾಜಪೇಟೆ ತಾಲೋಕು, ಬಿಳೂರು ಗ್ರಾಮದ ಪೊನ್ನಪ್ಪಸಂತೆಯ ನಿವಾಸಿ ಕಾಳಪ್ಪ @ ಜಿ.ಜಿ. ಜೀವನ್ ಎಂಬವರು ದಿನಾಂಕ 14-5-2019 ರಂದು ಕಾವಾಡಿ ಗ್ರಾಮದಲ್ಲಿರುವ ಭದ್ರಕಾಳಿ ದೇವಾಲಯದಲ್ಲಿ ಬೇಡು ಹಬ್ಬಕ್ಕೆ ಹೋಗುತ್ತಿದ್ದಾಗ ಕಾವಾಡಿ ಗ್ರಾಮದ ಮೊಣ್ಣಿಕಂಡ ಕರುಂಬಯ್ಯ ಎಂಬವರು ಕಾಳಪ್ಪನವರ ದಾರಿ ತಡೆದು ಹಳೆಯ ವಿಚಾರಕ್ಕೆ ಸಂಬಂಧಪಟ್ಟಂತೆ ಅವಾಚ್ಯ ಶಬ್ದಗಳಿಂದ ಬೈದು ದೇವಸ್ಥಾನದ ಬಳಿ ಬಂದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬೈಕ್ ಅಪಘಾತ ವ್ಯಕ್ತಿ ಸಾವು:
ಸೋಮವಾರಪೇಟೆ ತಾಲೋಕು ತೊರೆನೂರು ಗ್ರಾಮದ ನಿವಾಸಿ ಶ್ರೀಮತಿ ರಶ್ಮಿ ಎಂಬವರ ಪತಿ ಟಿ.ಕೆ. ಚಂದ್ರು ಎಂಬವರು ದಿನಾಂಕ 22-5-2019 ರಂದು ರಾತ್ರಿ ಮೋಟಾರ್ ಸೈಕಲಿಲ್ಲಿ ತಮ್ಮ ಮನೆಯ ಕಡೆಗೆ ಹೋಗುತ್ತಿದ್ದಾಗ ಹುಲುಸೆ ಗ್ರಾಮದಲ್ಲಿ ರಾಜ್ಯ ಹೆದ್ದಾರಿ 91 ರಸ್ತೆಯಲ್ಲಿ ರಸ್ತೆಬದಿಯಲ್ಲಿರುವ ಹೊಲಕ್ಕೆ ಹಾಕಿದ ತಂತಿ ಬೇಲಿಯ ತಂತಿ ಕಂಬಕ್ಕೆ ಮೋಟಾರ್ ಸೈಕಲ್ ಡಿಕ್ಕಿಯಾದ ಪರಿಣಾಮ ಸದರಿ ಟಿ.ಕೆ. ಚಂದ್ರುರವರು ಮೃತಪಟ್ಟಿದ್ದು ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಟ್ರಾಕ್ಟರ್ ಅಪಘಾತ ಮೃತಪಟ್ಟ ಚಾಲಕ:
ಸೋಮವಾರಪೇಟೆ ತಾಲೋಕು ಅಲೂರು ಸಿದ್ದಾಪುರ ಕಡ್ಲೆಮಕ್ಕಿ ನಿವಾಸಿ ನವೀನ್ ಎಂಬವರು ದಿನಾಂಕ 23-5-2019 ರಂದು ಭುವಂಗಾಲ ಗ್ರಾಮದಲ್ಲಿ ಹೊಲ ಊಳಲು ಟ್ರಾಕ್ಟರ್ ನ್ನು ಚಾಲನೆ ಮಾಡಿಕೊಂಡುತ್ತಿದ್ದಾಗ ಭುವಂಗಾಲ ದೊಡ್ಡಯ್ಯ ಎಂಬವರ ಬಾಪ್ತು ಹೊಲದ ಬಳಿ ನೀರು ಹರಿಯುವ ಕೊಲ್ಲಿಯಲ್ಲಿ ಟ್ರಾಕ್ಟರ್ ಮಗುಚಿ ಕೊಂಡು ಅದರಡಿಯಲ್ಲಿ ಚಾಲಕ ನವೀನ್ ರವರು ಸಿಕ್ಕಿ ಸ್ಥಳದಲ್ಲೇ ಮೃತಪಟ್ಟಿದ್ದು, ಈ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.