Crime News

ಅಪಘಾತ ಪ್ರಕರಣ               

ದಿನಾಂಕ 22-05-2019 ರಂದು ಸೋಮವಾರಪೇಟೆ ತಾಲೋಕಿನ ಹುಲಸೆ ಗ್ರಾಮದ ನಿವಾಸಿ ಲೋಕೇಶ್ ಎಂಬುವವರು ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಮೋಟಾರು ಸೈಕಲ್ ಬಂದು ಡಿಕ್ಕಿಯಾಗಿ ಗಾಯಗೊಂಡಿದ್ದು, ಈ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕರ್ತವ್ಯಕ್ಕೆ ಅಡ್ಡಿ, ಪ್ರಕರಣ ದಾಖಲು

               ದಿನಾಂಕ 24-05-2019 ರಂದು ಕುಶಾಲನಗರದ ಸಂಚಾರಿ ಠಾಣೆಯ ಸಿಬ್ಬಂದಿಯವರಾದ ಸಂದೇಶ್ ಎಂಬುವವರು ಕರ್ತವ್ಯದಲ್ಲಿರುವಾಗ ರಾಧಕೃಷ್ಣ ಬಡಾವಣೆಯ ಸೂರ್ಯ ವೈನ್ಸ್ ಮುಂಭಾಗದಲ್ಲಿ ರಸ್ತೆ ಸಂಚಾರಕ್ಕೆ ಅಡಚಣೆ ಆಗುವಂತೆ ಗೊಂದಿಬಸವನ ಹಳ್ಳಿಯ ನಿವಾಸಿ ಸುನಿಲ್ ಎಂಬುವವನು ಆಟೋವನ್ನು ನಿಲ್ಲಿಸಿದ್ದನ್ನು ಪ್ರಶ್ನಿಸಿದಾಗ ಸುನಿಲ್ ಹಾಗೂ ಮತ್ತೊಬ್ಬ ಸುನಿಲ್ ಸಂದೇಶ್ ರವರ ಮೇಲೆ ಹಲ್ಲೆ ನಡೆಸಿದ್ದು, ಈ ಬಗ್ಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ದೇವಸ್ಥಾನದ ಹುಂಡಿಯಿಂದ ಹಣ ಕಳವು

              ವಿರಾಜಪೇಟೆ ತಾಲೋಕಿನ ದೇವರಪುರ ಗ್ರಾಮದ ಅಯ್ಯಪ್ಪ ಭದ್ರಕಾಳಿ ದೇವಸ್ಥಾನದ ಹುಂಡಿಯನ್ನು ಯಾರೋ ಒಡೆದು ಅದರಿಂದ ಅಂದಾಜು 10,000 ರೂಗಳನ್ನು ಕಳವು ಮಾಡಿರುವುದಾಗಿ ಗಣಪತಿಯವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಜೂಜಾಟ ಪ್ರಕರಣ

            ದಿನಾಂಕ 24-05-2019 ರಂದು ವಿರಾಜಪೇಟೆ ನಗರದ ದೊಡ್ಡಟ್ಟಿ ವೃತ್ತದ ಬಳಿ ಇರುವ ಶಬೀರ್ ರವರ ಬೀಡ ಅಂಗಡಿಯಲ್ಲಿ     ಕೇರಳ ರಾಜ್ಯದ ಲಾಟರಿ ಫಲಿತಾಂಶವನ್ನು ಆಧರಿಸಿ ಜೂಜಾಟ ನಡೆಸುತ್ತಿದ್ದಲ್ಲಿಗೆ ವಿರಾಜಪೇಟೆ ನಗರ ಠಾಣೆಯ ಪಿ.ಎಸ್.ಐ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಶಬೀರ್ ರವರನ್ನು ವಶಕ್ಕೆ ಪಡೆದುಕೊಂಡು ಆತನಿಂದ 2,440 ರೂ ನಗದು ಹಣವನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ವ್ಯಕ್ತಿಯ ಆತ್ಮ ಹತ್ಯೆ

            ಸೋಮವಾರಪೇಟೆ ತಾಲೋಕಿನ ಅಭ್ಯತ್ ಮಂಗಲ ಗ್ರಾಮದ ನಿವಾಸಿ ಕರ್ಪಯ್ಯನವರು ದಿನಾಂಕ 24-05-2019 ರಂದು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

            ದಿನಾಂಕ 24-05-2019 ರಂದು ಉಕ್ಕಡ ಗ್ರಾಮದ ನಿವಾಸಿ ಭರತ್ ರವರು ಕಾರಿನಲ್ಲಿ ಹೋಗುತ್ತಿರುವಾಗ ಮಡಿಕೇರಿ ನಗರದಲ್ಲಿರುವ ಆರ್ಮಿ ಕ್ಯಾಂಟೀನ್ ಹತ್ತಿರ ತಲುಪುವಾಗ ಆರ್ಮಿ ಕ್ಯಾಂಟೀನ್ ಹಿಂಭಾಗದ ರಸ್ತೆಯಿಂದ ಬಂದ ಕಾರನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಭರತ್ ರವರು ಚಾಲನೆ ಮಾಡುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದವರಿಗೆ ಗಾಯಗಳಾಗಿದ್ದು, ಈ ಬಗ್ಗೆ ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.