Crime News

ಕಳವು ಪ್ರಕರಣ

          ಮಡಿಕೇರಿ ನಗರದ ಪೆನ್ಸ್ ನ್ ಲೇನ್ ವಸತಿ ಗೃಹದಲ್ಲಿ ವಾಸವಿರುವ ಪೊಲೀಸ್ ಸಿಬ್ಬಂದಿಯಾದ ಧರ್ಮಪ್ಪ ಎಂಬುವವರ ಮನೆಗೆ ಬೀಗ ಹಾಕಿ ದಿನಾಂಕ 23-05-2019 ರಂದು ಸಂಸಾರದೊಂದಿಗೆ ಊರಿಗೆ ತೆರಳಿದ್ದು, ದಿನಾಂಕ 27-05-2019 ರಂದು ವಾಪಾಸ್ಸು ಬಂದು ನೋಡಿದಾಗ ಮನೆಗೆ ಯಾರೋ ಕಳ್ಳರು ನುಗ್ಗಿ ಮನೆಯಲ್ಲಿ ಇಟ್ಟಿದ್ದ 23,000 ರೂ ನಗದು ಹಣವನ್ನು ಕಳವು ಮಾಡಿರುವುದು ಕಂಡು ಬಂದಿದ್ದು, ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆಟೋ ರಿಕ್ಷಾ ಡಿಕ್ಕಿ, ವ್ಯಕ್ತಿಗೆ ಗಾಯ

             ದಿನಾಂಕ 26-05-2019 ರಂದು ಸಿದ್ದಾಪುರದ ಅರೆಕಾಡು ಗ್ರಾಮದ ನಿವಾಸಿಯಾದ ಮಂಜು ಎಂಬುವವರು ನೆಲ್ಲಿಹುದಿಕೇರಿಯಲ್ಲಿ ರಸ್ತೆ ದಾಟುತ್ತಿರುವಾಗ ಸಿದ್ದಾಪುರದ ಕಡೆಯಿಂದ ಬಂದ ಆಟೋವನ್ನು ಅದರ ಚಾಲಕ ಮಂಜುನಾಥರವರು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ಗಾಯಗೊಂಡಿದ್ದು, ಈ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪಾದಚಾರಿಗೆ ಕಾರು ಡಿಕ್ಕಿ

            ದಿನಾಂಕ 24-05-2019 ರಂದು ಪಿರಿಯಾಪಟ್ಟಣದ ನಿವಾಸಿ ಜಯರಾಮೇಗೌಡ ಎಂಬುವವರು ಮಡಿಕೇರಿ ನಗರದ ಸುದರ್ಶನ ವೃತ್ತದ ಹತ್ತಿರ ಮೈಸೂರು ಕಡೆಗೆ ಹೋಗುವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಬಂದ ಕಾರನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ಜಯರಾಮೇಗೌಡರು ಗಾಯಗೊಂಡಿದ್ದು, ಚಾಲಕನು ಡಿಕ್ಕಿಪಡಿಸಿ ಕಾರನ್ನು ನಿಲ್ಲಿಸದೇ ಹೊರಟು ಹೋಗಿದ್ದು, ಈ ಬಗ್ಗೆ ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

           ದಿನಾಂಕ 16-05-2019 ರಂದು ನಂಜರಾಯಪಟ್ಟಣದ ನಿವಾಸಿಯಾದ ಹರೀಶರವರು ಮೋಟಾರು ಸೈಕಲಿನಲ್ಲಿ ಕುಶಾಲನಗರದಿಂದ ಮನೆಗೆ ಹೋಗುತ್ತಿರುವಾಗ ಸಿದ್ದಾಪುರ ಕಡೆಯಿಂದ ಬರುತ್ತಿದ್ದ ಮಾರುತಿ ಆಲ್ಟೋ ಕಾರನ್ನು ಸುಜನ್ ಅಪ್ಪಯ್ಯ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಮೋಟಾರು ಸೈಕಲಿಗೆ ಡಿಕ್ಕಿಪಡಿಸಿದ ಪರಿಣಾಮ ಹರೀಶರವರಿಗೆ ಗಾಯಗಳಾಗಿದ್ದು, ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪರಿಚಿತ ವ್ಯಕ್ತಿಯ ಸಾವು

          ದಿನಾಂಕ 26-05-2019 ರಂದು ಕುಶಾಲನಗರದ ಬಸ್ಸು ನಿಲ್ದಾಣದ ಬಳಿಯ ಪಂಚಾಯಿತಿ ಮಳಿಗೆಯ ಮೆಟ್ಟಿಲಲ್ಲಿ ಅಂದಾಜು 55 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿ ಅಸ್ವಸ್ಥ ರಾಗಿ ಮಲಗಿದ್ದವರನ್ನು ಸಾರ್ವಜನಿಕರು ಕುಶಾಲನಗರದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದ ಅಪರಿಚಿತ ವ್ಯಕ್ತಿಯು ದಿನಾಂಕ 27-05-2019 ರಂದು ಮೃತಪಟ್ಟಿದ್ದು, ಈ ಬಗ್ಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವಾಹನ ಅಪಘಾತ

          ದಿನಾಂಕ 25-05-2019 ರಂದು ವಿರಾಜಪೇಟೆ ನಗರದ ಚಿಕ್ಕ ಪೇಟೆಯ ನಿವಾಸಿಯಾದ ಶಿವನಾಯಕ ಎಂಬುವವರು ತನ್ನ ಪತ್ನಿ ಮಕ್ಕಳೊಂದಿಗೆ ಗೂಡ್ಸ್ ಆಟೋ ರಿಕ್ಷಾದಲ್ಲಿ ಹುಣಸೂರುವಿಗೆ ಹೋಗುತ್ತಿರುವಾಗ ತಿತಿಮತಿ ಎಂಬಲ್ಲಿಗೆ ತಲುಪುವಾಗ ರಿಕ್ಷಾವನ್ನು ಅದರ ಚಾಲಕ ಶಿವನಾಯಕರವರು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಆಟೋ ರಿಕ್ಷಾ ಮಗುಚಿ ಬಿದ್ದು ಶಿವನಾಯಕರವರಿಗೆ ಗಾಯವಾಗಿದ್ದು, ಈ ಬಗ್ಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

         ದಿನಾಂಕ 27-05-2019 ರಂದು ವಿರಾಜಪೇಟೆ ತಾಲೋಕಿನ ಬಾಳಜಿ ಗ್ರಾಮದ ನಿವಾಸಿಯಾದ ಮಧುರವರು ಗೋಣಿಕೊಪ್ಪ ನಗರದ ಬಸ್ಸು ನಿಲ್ದಾಣದಲ್ಲಿ ಇರುವಾಗ, ಗೋಣಿಕೊಪ್ಪ ನಗರದ ನಿವಾಸಿ ಅಂಥೋಣಿ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ಹಲ್ಲೆ ನಡೆಸಿದ್ದು, ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.