Crime News
ಹಳೆ ವೈಷಮ್ಯ ವ್ಯಕ್ತಿ ಮೇಲೆ ಹಲ್ಲೆ :
ಸೋಮವಾರಪೇಟೆ ಠಾಣಾ ಸರಹದ್ದಿನ ಹಾನಗಲ್ಲು ಗ್ರಾಮದ ಹೆಚ್.ಬಿ. ಅನಿಲ್ ಎಂಬವರು ದಿನಾಂಕ 27-5-2019 ರಂದು ಅವರ ಪಕ್ಕದ ಮನೆಯ ತಂಬಿ ಎಂಬವರ ಮನೆಯಲ್ಲಿ ಜರುಗಿದ ಬರ್ತ್ಡೇ ಸಮಾರಂಭಕ್ಕೆ ಹೋಗಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಜೀವನ್, ವಿಜಯ್, ಕುಮ್ಮಣಿ ಹಾಗು ಮಿಥುನ್ ರವರು ಸೇರಿ ಹಳೇ ವೈಷಮ್ಯದಿಂದ ಹಲ್ಲೆಗೆ ಯತ್ನಿಸಿದ್ದು, ನಂತರ ಸಮಾರಂಭದಿಂದ ಮನೆಗೆ ಬಂದು ಮನೆಯಲ್ಲಿದ್ದಾದ ಸದರಿ ವ್ಯಕ್ತಿಗಳು ಅಲ್ಲಿಗೆ ಬಂದು ಜಗಳ ಮಾಡಿ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೀರು ಬಾಟಲಿಯಿಂದ ಹಲ್ಲೆ ಮಾಡಿ ಕೊಲೆಗೆ ಯತ್ನ:
ದಿನಾಂಕ 28-5-2019 ರಂದು ಹಾನಗಲ್ಲು ಗ್ರಾಮದ ಹೆಚ್.ಬಿ. ಅಶ್ವಥ್ ಎಂಬವರು ತಮ್ಮ ಮನೆಯ ಅಂಗಳದಲ್ಲಿ ಹೆಚ್.ಬಿ. ಅನಿಲ್ ರವರ ಮೇಲೆ ಜೀವನ್, ವಿಜಯ್, ಕುಮ್ಮಣಿ ಹಾಗು ಮಿಥುನ್ ರವರು ಹಲ್ಲೆ ಮಾಡಿದ ವಿಚಾರ ಮಾತನಾಡುತ್ತಿರುವಾಗೆ ಅವರ ಪಕ್ಕದ ಮನೆಯ ವಾಸಿಯಾದ ಸರಸ್ವತಿ ಹಾಗು ವಿಜಯಾ ಎಂಬವರು ಅಲ್ಲಿಗೆ ಬಂದು ಅವಾಚ್ಯ ಶಬ್ದಗಳಿಂದ ಹೆಚ್.ಬಿ. ಅಶ್ವಥ್ ರವರನ್ನು ಬೈದು ಕೊಲೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಅಶ್ವಥ್ ರವರು ಪೊಲೀಸ್ ಠಾಣೆಗೆ ದೂರು ಕೊಡಲು ಹೋಗುತ್ತಿದ್ದಾಗ ವಿಜಯ ಹಾಗು ಕುಳ್ಳ ರವರುಗಳು ಹಿಂದಿನಿಂದ ಬಂದು ಕೊಲೆ ಮಾಡುವ ಉದ್ದೇಶದಿಂದ ಬಿಯರ್ ಬಾಟಲಿನಿಂದ ಹಲ್ಲೆ ನಡೆಸಿ ಗಾಯಪಡಿಸಿ ಕೊಲೆಗೆ ಯತ್ನಿಸಿದ್ದಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಹೋಂಸ್ಟೇಯಿಂದ ನಗದು ಕಳವು:
ದಿನಾಂಕ 28-5-2019 ರಂದು ಸೋಮವಾರಪೇಟೆ ತಾಲೋಕು ಐಗೂರು ಗ್ರಾಮದಲ್ಲಿರುವ ಸ್ಟ್ರಿಂಗ್ ವ್ಯಾಲಿ ಹೋಸ್ಟೇಗೆ ಯಾರೋ ಕಳ್ಳರು ನುಗ್ಗಿ ಟೇಬಲ್ ಡ್ರಾಯರ್ನಲ್ಲಿಟ್ಟಿದ ನಗದು ಹಣ ರೂ.9,500/- ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸ್ಕೂಟರಿಗೆ ಪಿಕ್ಅಪ್ ವಾಹನ ಡಿಕ್ಕಿ:
ದಿನಾಂಕ 28-5-2019 ರಂದು ಚೌಡ್ಲು ಗ್ರಾಮದ ಲವ ಹಾಗು ರಾಜು ರೈ ಎಂಬವರು ಸ್ಕೂಟರಿನಲ್ಲಿ ತಮ್ಮ ಮನೆಯ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಪಿಕ್ಅಪ್ವಾಹನವೊಂದು ಡಿಕ್ಕಿಯಾಗಿ ಸ್ಕೂಟರಿನಲ್ಲಿದ್ದ ಲವ ಹಾಗು ರಾಜು ರೈರವರು ಗಾಯಗೊಂಡಿದ್ದು, ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್- ಕಾರು ನಡುವೆ ಅಪಘಾತ:
ವಿರಾಜಪೇಟೆ, ಬೋಯಿಕೇರಿ ನಿವಾಸಿ ಮಾದೇಶ ಎಂಬುವವರು ವಿರಾಜಪೇಟೆ, ಗೋಣಿಕೊಪ್ಪ, ಪೊನ್ನಂಪೇಟೆ ಕಡೆಗೆ ಇ- ಕಾರ್ಟ್ ಪಾರ್ಸಲ್ ಕೆಲಸವನ್ನು 2 ವರ್ಷಗಳಿಂದ ಅವರ ಬಾಪ್ತು ಕೆಎ-12-ಆರ್-5203 ರ ಬೈಕಿನಲ್ಲಿ ಮಾಡುತ್ತಿದ್ದು ಅದರಂತೆ ದಿನಾಂಕ 28/05/2019 ರಂದು ವಿರಾಜಪೇಟೆಯಿಂದ ಗೋಣಿಕೊಪ್ಪ ಮಾರ್ಗವಾಗಿ ಪಾರ್ಸಲ್ ತೆಗೆದುಕೊಂಡು ಪೊನ್ನಂಪೇಟೆ ಕಡೆಗೆ ಹೋಗುತ್ತಿರುವಾಗ್ಗ ಗೋಣಿಕೊಪ್ಪ ಅರುವತೋಕ್ಲು ಗ್ರಾಮದ ಸರ್ವದೈವತಾ ಸ್ಕೂಲ್ ಪಕ್ಕದ ಸಾರ್ವಜನಿಕ ರಸ್ತೆಯಲ್ಲಿ ಬೈಕ್ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಸಮಯ ಬೆಳಿಗ್ಗೆ ಸುಮಾರು 10-30 ಗಂಟೆಗೆ ಪೊನ್ನಂಪೇಟೆ ಕಡೆಯಿಂದ ಗೋಣಿಕೊಪ್ಪದ ಕಡೆಗೆ ಬರುತ್ತಿದ್ದ ಕೆಎ-02-ಎಂಎ-2857 ರ ಕಾರ್ ಚಾಲಕನು ಕಾರನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಬೈಕ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಸವಾರ ಮಾದೇಶ ರವರು ಗಾಯಗೊಂಡಿದ್ದು, ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೋಟಾರ್ ಬೈಕ್ ಕಳವು:
ಗೋಣಿಕೊಪ್ಪ ಸಮೀಪದ ದೇವರಪುರ ಗ್ರಾಮದ ನಿವಾಸಿ ಪಿ.ಕೆ. ಶರೀಫ್ ರವರು ದಿನಾಂಕ 27-5-2019 ರಂದು ತಮ್ಮ ಬಾಪ್ತು ಮೋಟಾರ್ ಸೈಕಲನ್ನು ಗೋಣಿಕೊಪ್ಪ ನಗರದ ಪಾಂಚಾಯ್ತಿಗೆ ಸೇರಿದ ಹೊಸ ಅಂಗಡಿ ಮಳಿಗೆಯ ಮುಂದೆ ಎಂದಿನಂತೆ ನಿಲ್ಲಿಸಿ ತಾನು ಕೆಲಸ ನಿರ್ವಹಿಸುವ ಚಡ್ಖಾನ್ ಮೊಬೈಲ್ ಶಾಪ್ ಗೆ ಕೆಲಸಕ್ಕೆ ಹೋಗಿ ರಾತ್ರಿ ಮನೆಗೆ ಹೋಗಲು ಮೋಟಾರ್ ಸೈಕಲ್ ನಿಲ್ಲಿಸಿದ್ದಲ್ಲಿ ನೋಡಿದಾಗ ಯಾರೋ ಕಳ್ಳರು ಮೋಟಾರ್ ಸೈಕಲನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿದ್ದು, ಈ ಸಂಬಂಧ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.