Crime News

ಅಕ್ರಮ ಮರಳು ಶೇಖರಣೆ ಪ್ರರಕಣ

         ದಿನಾಂಕ 29-05-2019 ರಂದು ಯು ಚೆಂಬು ಗ್ರಾಮದ ಪಯಶ್ವಿನಿ ನದಿಯಿಂದ ಆನಂದ ಎಂಬುವವರು ಸರ್ಕಾರದ ಪರವಾನಿಗೆ ಇಲ್ಲದೇ ಅಕ್ರಮವಾಗಿ ಜೆ.ಸಿ.ಬಿ ಯಂತ್ರ ಬಳಸಿ ಮೂರು ಟಿಪ್ಪರ್ ಲಾರಿಯಷ್ಟು ಮರಳನ್ನು ಶೇಖರಣೆ ಮಾಡಿರುದನ್ನು ಮಡಿಕೇರಿ ಗ್ರಾಮಾಂತರ ಠಾಣೆಯ ಪಿಎಸ್ಐ ರವರು ಸಿಬ್ಬಂದಿಯವರೊಂದಿಗೆ ಪತ್ತೆಹಚ್ಚಿ ಜೆ.ಸಿ.ಬಿ ಯಂತ್ರವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಪಘಾತ ವ್ಯಕ್ತಿಯ ದುರ್ಮರಣ

         ದಿನಾಂಕ 28-05-2019 ರಂದು ವಿರಾಜಪೇಟೆ ತಾಲೋಕಿನ ಬಾಳುಗೋಡು ಗ್ರಾಮದ ನಿವಾಸಿಯಾದ ಶಶಿ ಎಂಬುವವರು ಮೋಟಾರು ಸೈಕಲಿನಲ್ಲಿ ಬಿಟ್ಟಂಗಾಲದ ಯಜ್ಞ ಬಾರ್ ಮತ್ತು ರೆಸ್ಟೋರೆಂಟ್ ನ ಮುಂದಿನ ರಸ್ತೆಯಲ್ಲಿ ಹೋಗುತ್ತಿರುವಾಗ ನಿಯಂತ್ರ ಕಳೆದುಕೊಂಡು ಬಿದ್ದು ಗಾಯಗೊಂಡವರು ಮೃತಪಟ್ಟಿದ್ದು, ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರರಕಣ ದಾಖಲಾಗಿರುತ್ತದೆ.

ಹಳೆ ದ್ವೇಷ ವ್ಯಕ್ತಿಯ ಮೇಲೆ ಹಲ್ಲೆ

            ದಿನಾಂಕ 29-05-2019 ರಂದು ವಿರಾಜಪೇಟೆ ತಾಲೋಕಿನ ಕಂಡಂಗಾಲ ಗ್ರಾಮದ ಚೀಯಣ್ಣನವರು ರುದ್ರಗುಪ್ಪೆ ಸೇತುವೆಯ ಹತ್ತಿರ ನಿಂತುಕೊಂಡಿರುವಾಗ ಕಂಡಂಗಾಲ ಗ್ರಾಮದ ನಿವಾಸಿಗಳಾದ ಪವನ್ ಮತ್ತು ವಿನೋದ್ ರವರು ಹಳೇ ದ್ವೇಷದಿಂದ ಹಲ್ಲೆ ನಡೆಸಿದ್ದು, ಈ ಬಗ್ಗೆ ಚೀಯಣ್ಣನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರರಕಣ ದಾಖಲಾಗಿರುತ್ತದೆ.

ಸರ ಕಳ್ಳತನ

            ಚಿಕ್ಕಮಂಗಳೂರು ಜಿಲ್ಲೆಯ ವಲೇಗೇರಿ ಗ್ರಾಮದ ನಿವಾಸಿಯಾದ ರತ್ನಮ್ಮ  ಎಂಬುವವರು ತನ್ನ ಮಗಳ ಮನೆಗೆ ಕುಶಾಲನಗಕ್ಕೆ ಬಂದಿದ್ದವರು ದಿನಾಂಕ 29-05-2019 ರಂದು ವಾಪಾಸ್ಸು ಚಿಕ್ಕಮಂಗಳೂರಿಗೆ ಹೋಗುವ ಸಲುವಾಗಿ ಕುಶಾಲನಗರ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದಲ್ಲಿ ಬಸ್ಸು ಹತ್ತುತ್ತಿರುವಾಗ ರತ್ಮಮ್ಮನವರ ಕುತ್ತಿಗೆಯಲ್ಲಿದ್ದ 30 ಗ್ರಾಂ ತೂಕದ ಚಿನ್ನದ ಸರವನ್ನು ತಮಿಳುನಾಡುವಿನ ಸೇಲಂ ನ ನಿವಾಸಿಯಾದ ಪ್ಲಾಸ್ಟಿಕ್ ವ್ಯಾಪಾರ ಮಾಡುವ ಲಕ್ಷ್ಮಿ ಎಂಬುವವರು ಕಸಿದುಕೊಂಡು ಹೋಗುತ್ತಿರುವಾಗ ಹಿಡಿದುಕೊಂಡಿದ್ದು, ಈ ಬಗ್ಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.