Crime News

ಅಕ್ರಮ ಮರಳು ಸಾಗಾಟ:

ದಿನಾಂಕ 30-5-2019 ರಂದು 04-00 ಗಂಟೆ ಸಮಯದಲ್ಲಿ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮುರ್ನಾಡು ಐಕೊಳ ಗ್ರಾಮದದಲ್ಲಿ ವ್ಯಕ್ತಿಯೊಬ್ಬರು ಕೆ-12-ಎ7995ರ ಮಿನಿ ಟಿಪ್ಪರ್ ಲಾರಿಯೊಂದಲ್ಲಿ ಮರಳನ್ನು ತುಂಬಿಸಿ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ವಿ. ಚೇತನ್ ಹಾಗು ಸಿಬ್ಬಂದಿಗಳು ಮರಳು ತುಂಬಿದ ಲಾರಿಯನ್ನು ವಶಕ್ಕೆ ಪಡೆದು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

ಹೋಂಸ್ಟೇಗೆ ನುಗ್ಗಿ ವ್ಯಕ್ತಿ ಹಲ್ಲೆ:

ಮಡಿಕೇರಿ ತಾಲೋಕು, ಕಡಗದಾಳು ಗ್ರಾಮದಲ್ಲಿರುವ ಸುಕೃತಿ ಹೋಂಸ್ಟೇ ಯಲ್ಲಿ ಎನ್.ಬೋಸ್ ಬಾಬು ಎಂಬವರು ಕೆಲಸ ಮಾಡಿಕೊಂಡಿದ್ದು, ದಿನಾಂಕ 27-5-2019 ರಂದು ರಾತ್ರಿ 11-00 ಗಂಟೆ ಸಮಯದಲ್ಲಿ ಸದರಿ  ಸುಕೃತಿ ಹೋಂಸ್ಟೇಯಲ್ಲಿ ತಮ್ಮ ಕುಕ್ ರಿಯಾಜ಼್ ಮತ್ತು ಸೂಪರ್‍ವೈಸರ್‍ ಜಾರ್ಜ್ ಎಂಬವರೊಂದಿಗೆ ಇರುವಾಗ್ಗೆ ಸುಮಾರು 20 ಜನರು ಏಕಾಎಕಿ ಹೋಂಸ್ಟೇಗೆ ಅಕ್ರಮ ಪ್ರವೇಶ ಮಾಡಿ ವಿಲ್ಲಾದ ಬಾಗಿಲು ಮತ್ತು ಬೆಡ್‍ ರೂಮಿನ ಬಾಗಿಲನ್ನು ಮುರಿದು ಒಳಗೆ ಪ್ರವೇಶ ಮಾಡಿ ತಮ್ಮ ಮಾಲೀಕರ ವಿರುದ್ದ ಕೆಲಸ ಮಾಡುತ್ತೀದ್ದೀರಂದು ಹೇಳಿ ಜಗಳ ಮಾಡಿ ಎನ್.ಬೋಸ್‍ಬಾಬುರವರ ಮೇಲೆ ಹಲ್ಲೆ ಮಾಡಿ ಗಾಯಪಡಿಸಿ ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ದುರ್ಮರಣ:

ದಿನಾಂಕ 30-5-2019 ರಂದು ನಾಪೋಕ್ಲು ಠಾಣಾ ಸರಹದ್ದಿನ ಬಲ್ಲಮಾವಟಿ ಗ್ರಾಮದ ಕಾವೇರಿ ಹೊಳೆಯಲ್ಲಿಯಲ್ಲಿ ತಮಿಳುನಾಡು ರಾಜ್ಯದ ಹೊಸೂರು ಜಿಲ್ಲೆಯ ಬಾಗಲೂರು ಗ್ರಾಮದ ರಾಮಕೃಷ್ಣ ಎಂಬವರ ಮಗ ತೇಜಸ್ ಮತ್ತು ಸ್ನೇಹಿತರು  ಈಜಲು ಹೋಗಿದ್ದು ಸ್ನಾನ ಮಾಡುತ್ತಿರುವಾಗ ತೇಜಸ್ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದು, ಯಂ. ಲಕ್ಷಣ್ ರವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಳೇ ವೈಷಮ್ಯದಿಂದ ವ್ಯಕ್ತಿ ಮೇಲೆ ಹಲ್ಲೆ:

    ದಿನಾಂಕ 30.5.19 ರಂದು ಸಮಯ ಸಂಜೆ 4,30 ಗಂಟೆಗೆ ಕುಶಾಲನಗರ ಟೌನ್‍ ಬಿ.ಎಂ. ರಸ್ತೆಯ ಕೊಪ್ಪ ಗೇಟಿನ ಬಳಿ ಬಿ.ಎಸ್‍.ಅರ್ ಅಂಗಡಿ ಬಳಿ ಕುಶಾಲನಗರದ ನಿವಾಸಿ ಪಿ.ಎಲ್. ಮನು ಎಂಬವರ ಮೇಲೆ ಮಂಜುನಾಥ ರವರು ಮಾತನಾಡಲು ಬರವಂತೆ ಹೇಳಿ ಹಳೆ ವೈಷಮ್ಯದಿಂದ ಮಾತಿಗೆ ಮಾತು ಬೆಳೆಸಿ ಜಗಳ ತೆಗದು ಏಕಾ ಏಕಿ ರಾಡಿನಿಂದ ತಲೆಯ ಮೆಲೆ ಹಲ್ಲೆ ಮಾಡಿ ದ್ದು ಈ ಸಂಬಂಧ ಕುಶಾಲನಗರ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.