Crime News

ಮರ ಬಿದ್ದು ಮಹಿಳೆಯ ಸಾವು

              ದಿನಾಂಕ 30-05-2019 ರಂದು ವಿರಾಜಪೇಟೆ ತಾಲೋಕಿನ ಭದ್ರಗೋಳ ಗ್ರಾಮದ ತಾರಿಕಟ್ಟೆಯ ನಿವಾಸಿಯಾದ ನೌಶಾದ್ ರವರು ರಾತ್ರಿ ಮನೆಯಲ್ಲಿ ಹೆಂಡತಿ ಮಗುವಿನೊಂದಿಗೆ ಮಲಗಿರುವಾಗ ವಿಪರೀತ ಮಳೆ ಗಾಳಿಯಿಂದಾಗಿ ಮನೆಯ ಮೇಲೆ ಮರ ಬಿದ್ದು ನೌಶಾದ್ ರವರಿಗೆ ಗಾಯವಾಗಿದ್ದು, ತೀವ್ರ ಗಾಯಗೊಂಡ ಪತ್ನಿ ರಹಾನತ್ ಮೃತಪಟ್ಟಟಿದ್ದು, ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

            ವಿರಾಜಪೇಟೆ ತಾಲೋಕಿನ ಧನಂಗಾಲ ಗ್ರಾಮದ ನಿವಾಸಿಯಾದ ಬಸವಣ್ಣನವರಿಗೆ ರವಿ ಮತ್ತು ಲೋಕೇಶ್ ರವರು ದಿನಾಂಕ 30-05-2019 ರಂದು ಹಳೇ ದ್ವೇಷದಿಂದ ಹಲ್ಲೆ ನಡೆಸಿದ್ದು, ಈ ಬಗ್ಗೆ  ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪಾದಚಾರಿಗೆ ಬೈಕ್ ಡಿಕ್ಕಿ

             ದಿನಾಂಕ 28-05-2019 ರಂದು ಸೋಮವಾರಪೇಟೆ ತಾಲೋಕಿನ ಚಿಕ್ಕತ್ತೂರು ಗ್ರಾಮದ ನಿವಾಸಿಯಾದ ಕೆಂಪಮ್ಮನವರು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ತಿನೋಜ್ ಎಂಬುವವರು ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ಪೆಂಪಮ್ಮನವರಿಗೆ ಡಿಕ್ಕಿಪಡಿಸಿದ ಪರಿಣಾಮ ಗಾಯಗೊಂಡಿದ್ದು, ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮರಳು ಸಾಗಾಟ

             ದಿನಾಂಕ 31-05-2019 ರಂದು ನಾಪೋಕ್ಲು ಠಾಣೆಯ ಪಿಎಸ್ಐ ರವರು ಸಿಬ್ಬಂದಿಯವರೊಂದಿಗೆ ರಾತ್ರಿ ಕರ್ತವ್ಯದಲ್ಲಿರುವಾಗ ಕೊಟ್ಟಮುಡಿಯ ಕಾವೇರಿ ನದಿಯಿಂದ ಕೊಟ್ಟಮುಡಿಯ ನಿವಾಸಿಯಾದ ಉಸ್ಮಾನ್ ಎಂಬುವವರು ಟಿಪ್ಪರ್ ಲಾರಿಯಲ್ಲಿ ಅಕ್ರಮವಾಗಿ ಮರಳು ತುಂಬಿಸಿ ಸಾಗಾಟ ಮಾಡುತ್ತಿದ್ದವನ್ನು ಪತ್ತೆಹಚ್ಚಿ, ಲಾರಿಯನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.