Crime News

ಬೈಕಿಗೆ ಟಿಪ್ಪರ್ ಲಾರಿ ಡಿಕ್ಕಿ, ಸವಾರನಿಗೆ ಗಾಯ:

ದಿನಾಂಕ 01.06.2019 ರಂದು ಸೋಮವಾರಪೇಟೆ ತಾಲೋಕು ಸೀಗೆಹೊಸೂರು ಗ್ರಾಮದ ಎಸ್‍.ಆರ್. ರಾಜು ಎಂಬವರು  ತಮ್ಮ ಮಗನ ಬಾಬ್ತು ಕೆಎ 12 ಎಸ್ 5475 ರ ಮೋಟಾರು ಸೈಕಲಿನಲ್ಲಿ ತಮ್ಮ ಮನೆಯಾದ ಸೀಗೆಹೊಸೂರು ಗ್ರಾಮದ ಕಡೆ ಹೋಗುತ್ತಿರುವಾಗ್ಗೆ ಸಮಯ ಮದ್ಯಾಹ್ನ 2.30 ಗಂಟೆಗೆ ಕೂಡಿಗೆಯಿಂದ ಮುಂದೆ ಹೆಗ್ಗಡಹಳ್ಳಿ ಗ್ರಾಮದ ಬಳಿ ರಸ್ತೆಯಲ್ಲಿ ವೀರಭದ್ರ ಶೆಟ್ಟಿರವರ ಮನೆಯ ಬಳಿ ತಿರುವು ರಸ್ತೆಯಲ್ಲಿ ಎದುರಿನಿಂದ ಬಂದ ಒಂದು ಟಿಪ್ಪರ್ ಲಾರಿಯನ್ನು ಅದರ  ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಎಸ್.ಆರ್. ರಾಜುರವರು ಚಾಲಿಸಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿಪಡಿಸಿದ ಪರಿಣಾಮ ಅವರ ಬಲಕಾಲಿನ ಮೊಣಕಾಲಿನ ಕೆಳಭಾಗದಲ್ಲಿ ಕಾಲು ಮುರಿದಿದ್ದು,  ಗದ್ದಕ್ಕೆ ಸಹ ನೋವುಂಟಾಗಿದ್ದು, ಸದರಿ ಟಿಪ್ಪರ್ ಲಾರಿಯನ್ನು ಚಾಲಕನು ನಿಲ್ಲಿಸದೆ ಹೊರಟು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬಸ್ಸನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ:

ಸುಮಂತ್ ಬಿ.ಎಸ್., ಕೆಎಸ್‍ಆರ್‍ಟಿಸಿ ಬಸ್‍ ಚಾಲಕ, ಮಂಗಳೂರು ವಿಭಾಗ ಇವರು ದಿನಾಂಕ 31-5-2019 ರಂದು ಕೆ-19-ಎಫ್-3263 ರ ಕೆ.ಎಸ್‍.ಆರ್‍.ಟಿ. ಬಸ್ಸನ್ನು ಚಲಾಯಿಸಿಕೊಂಡು ಬೆಂಗಳೂರಿಗೆ ಹೋಗಿ ವಾಪಾಸು ದಿನಾಂಕ 1-6-2019 ರಂದು ಬೆಂಗಳೂರಿನಿಂದ ಮಡಿಕೇರಿ ಮಾರ್ಗವಾಗಿ ಮಂಗಳೂರಿನ ಕಡೆಗೆ ಹೋಗುತ್ತಿದ್ದಾಗ ಕೊಯನಾಡು ಎಂಬಲ್ಲಿ ತಲುಪಿದಾಗ ಬಿಳಿ ಬಣ್ಣದ ಕಾರೊಂದು ಸುಮಂತ್‍ ಬಿ.ಎಸ್. ರವರು ಚಾಲಾಯಿಸುತ್ತಿದ್ದ ಬಸ್ಸ್‍ನ್ನು ಓವರ್‍ಟೇಕ್ ಮಾಡಿ 3-4- ಕೆಡೆಗಳಲ್ಲಿ ಅಡ್ಡಗಟ್ಟಿ ಬಸ್‍ ಚಾಲನೆಗೆ ಅಡ್ಡಿಪಡಿಸಿದ್ದು ನಂತರ ಸಮಯ 5-00 ಗಂಟೆಯ ಸಮಯದಲ್ಲಿ ಸಂಪಾಜೆ ಪೆಟ್ರೋಲ್ ಬಂಕ್ ಬಳಿ ಕಾರನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಬಸ್ಸ್‍ನ್ನು ನಿಲ್ಲಿಸಿದಾಗ ಕಾರು ಸಂಖ್ಯೆಕೆ-19-ಎಂಜಿ.-124 ರಿಂದ ಎ.ಎಸ್‍.ಲತೀಶ್, ಚಾಲಕ, ಅರಂತೋಡು ಗ್ರಾಮ ಮತ್ತು ಕಿಶನ್ ಕುಮಾರ್ ಕೆ.ಪಿ., ಕಲ್ಲುಗುಂಡಿ ನಿವಾಸಿ ರವರು ಬಂದು ಬಸ್ಸಿನ ಚಾಲ  ಸುಮಂತ್‍ ರವರನ್ನು ಎಳೆದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದು ಅಲ್ಲದೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.