Crime News

ಹಲ್ಲೆ ಪ್ರಕರಣ:

ದಿನಾಂಕ:-26-5-2019 ರಂದು ರಾತ್ರಿ 9.00 ಗಂಟೆಗೆ ಪೊನ್ನಂಪೇಟೆ ಠಾಣಾ ಸರಹದ್ದಿನ ತಿತಿಮತಿ ಗ್ರಾಮದಲ್ಲಿ ವಾಸವಾಗಿರುವ ಪಿ.ಕಿ. ಸೀತಾ ರವರ ತಾಯಿ ಗಂಗಮ್ಮನವರ ಮೇಲೆ ಆಕೆಯ ಮಗ ಪಿ.ಕೆ. ಮುತ್ತಪ್ಪ ಎಂಬವರು  ಹಣದ ವಿಚಾರದಲ್ಲಿ ಜಗಳ ಮಾಡಿ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾರಿಯನ್ನು ಮುಚ್ಚಿ ವ್ಯಕ್ತಿಗೆ ತೊಂದರೆ:

ದಿನಾಂಕ 31-5-2019 ರಂದು ಗೋಣಿಕೊಪ್ಪ ಠಾಣಾ ವ್ಯಾಪ್ತಿಯ ಅತ್ತೂರು ಗ್ರಾಮದ ನಿವಾಸಿ  ಬಿ.ಡಿ. ಮುಕುಂದ ಎಂಬವರಿಗೆ ಸೇರಿದ ಜಾಗದಲ್ಲಿ ರಸ್ತೆ ನಿರ್ಮಿಸುವ ಸಲುವಾಗಿ  ವೀರಜ್ ಅಪ್ಪಚ್ಚು  ಹಾಗೂ ಅವರ ಆಳುಗಳು  ಮರವನ್ನು ಕಡಿದು ಬಿ.ಡಿ. ಮುಕುಂದರವರ ಕಾಫಿಗಿಡಗಳ ಮೇಲೆ ಬೀಳಿಸಿ ನಷ್ಟ ಪಡಿಸಿದ್ದು ಅಲ್ಲದೆ ದಾರಿಯನ್ನು ಸಹ ಮುಚ್ಚಿರುರುವ ಸಮಬಂಧ  ಬಿ.ಡಿ. ಮುಕುಂದರವರು ದಿನಾಂಕ 2-6-2019 ರಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:

ದಿನಾಂಕ 2-6-2019 ರಂದು ಕುಶಾಲನಗರ ಪಟ್ಟಣದಲ್ಲಿರುವ ಬೀನಾ ಸ್ಟೋರ್‍ ಹತ್ತಿರ ಬೈಚನಳ್ಳಿ ಗ್ರಾಮದ ಸೈಯದ್ ಅಬೀದ್‍ರವರು ನಡೆದುಕೊಂಡು ಹೋಗುತ್ತಿದ್ದಾಗ ಕುಶಾಲನಗರ ನಿವಾಸಿಗಳಾದ ಫಹದ್, ಸದ್ದಾಂ ಮತ್ತು ಇತರರು ಸೇರಿ ಹಳೇ ದ್ವೇಷದಿಂದ ರಸ್ತೆಯನ್ನು ತಡೆದು ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಾರು ಅಪಘಾತ ಮೂವರಿಗೆ ಗಾಯ:

ದಿನಾಂಕ 01-06-2019 ರಂದು ಕೂತಿ ಗ್ರಾಮದ ಡಿ.ಪಿ. ಅಕ್ಷಯ್, ದೀಲಿಪ್ ಕುಮಾರ್ ಹಾಗೂ ಅಜಯ್ ರವರು ಕೆಎ-13ಎನ್8557 ರ ಮಹೇಂದ್ರ ಕೆಯುವಿ-100 ರ ಕಾರಿನಲ್ಲಿ ಚಾಲಕ ರಘು ರವರೊಂದಿಗೆ ಬೆಂಗಳೂರಿನಿಂದ ಮಡಿಕೇರಿಗೆ ಪ್ರವಾಸಕ್ಕೆಂದು ಬಂದು ವಾಪಸ್ಸು ಮಡಿಕೇರಿಯಿಂದ ನಿಸರ್ಗಧಾಮಕ್ಕೆ ಬರುವಾಗ ಸಮಯ ಸುಮಾರು 11.45 ಗಂಟೆಗೆ ಆನೆಕಾಡು ಬಳಿ   ಕಾರಿನ ಚಾಲಕ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆ ಬದಿಯ ಬರೆಗೆ ಡಿಕ್ಕಿಪಡಿಸಿದಾಗ ಪರಿಣಾಮ ಕಾರಿನಲ್ಲಿದ್ದ ಅಕ್ಷಯ್, ದೀಲಿಪ್ ಕುಮಾರ್ ಹಾಗೂ ಅಜಯ್ ರವರುಗಳಿಗೆ   ರಕ್ತಗಾಯವಾಗಿದ್ದು ಈ ಸಂಬಂಧ ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

ಸೋಮವಾರಪೇಟೆ ಠಾಣಾ ಸರಹದ್ದಿನ ನೇರುಗಳಲೆ ಗ್ರಾಮದ ಅಬ್ಬೂರುಕಟ್ಟೆ ಗ್ರಾಮದ ನಿವಾಸಿ ಶ್ರೀಮತಿ ರಾಣಿ ಜಿ.ಆರ್. ರವರು ಪತಿ ಜಿ.ಆರ್. ರಾಜು ರವರು ಕೆಲವು ದಿನಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಇದೇ ವಿಚಾರವಾಗಿ ಮನನೊಂದು ಸದರಿಯವರು ದಿನಾಂಕ 2-6-2019 ರಂದು ತಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ