Crime News

ಅಕ್ರಮ ಮರಳು ಸಂಗ್ರಹ

           ಮಡಿಕೇರಿ ತಾಲೋಕಿನ ಯು ಚೆಂಬು ಗ್ರಾಮದ ನಿವಾಸಿಯಾದ ದಿನೇಶ ಎಂಬುವವರು ಅಕ್ರಮವಾಗಿ ಮರಳು ಸಂಗ್ರಹ  ಮಾಡಿರುವುದಾಗಿ ದೊರೆತ ಮಾಹಿತಿ ಮೇರೆಗೆ ದಿನಾಂಕ 03-06-2019 ರಂದು ಮಡಿಕೇರಿ ಗ್ರಾಮಾಂತರ ಠಾಣೆಯ ಪಿಎಸ್ಐ ರವರು ಸಿಬ್ಬಂದಿಯವರೊಂದಿಗೆ  ದಾಳಿ ಮಾಡಿ ಅಕ್ರಮವಾಗಿ ಸುಮಾರು 5 ಲೋಡುಗಳಷ್ಟು ಮರಳು ಸಂಗ್ರಹ ಮಾಡಿರುವುದನ್ನು ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಅಪಘಾತ ಪ್ರಕರಣ

             ದಿನಾಂಕ 02-06-2019 ರಂದು ಸಕಲೇಶಪುರ ನಿವಾಸಿಯಾದ ಗಿರೀಶ್ ಕುಮಾರ್ ರವರು ತಾಯಿ ಮತ್ತು ಮಗಳೊಂದಿಗೆ ಕಾರಿನಲ್ಲಿ ಹೋಗುತ್ತಿರುವಾಗ ಬೆಳ್ಳಾರಳ್ಳಿ ಎಂಬಲ್ಲಿಗೆ ತಲುಪುವಾಗ ಎದುರಿನಿಂದ ಬಂದ ಲಾರಿಯನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿ ಮಗುಚಿ ಬಿದ್ದಿದ್ದು, ಗಿರೀಶ್ ರವರ ತಾಯಿ ಮತ್ತು ಮಗಳಿಗೆ ಮತ್ತು ಲಾರಿಯಲ್ಲಿದ್ದವರಿಗೆ ಗಾಯವಾಗಿದ್ದು ಈ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.