Crime News

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಹಲ್ಲೆ:

ಸೋಮವಾಪೇಟೆ ನಗರದ ಗಾಂಧಿನಗರದ ನಿವಾಸಿ ಪ್ರವೀಣ್ ಎಂ.ಜಿ. ಎಂಬವರು ದಿನಾಂಕ 05/06/219 ರಂದು  ಬೆಳಿಗ್ಗೆ  ಸೋಮಾವರಪೇಟೆ ನಗರದ ಬಸ್ಸು  ನಿಲ್ದಾಣಕ್ಕೆ ಕೆಲಸ ನಿಮಿತ್ತ ತಮ್ಮ ಕಾರಿನಲ್ಲಿ ಬಂದು ವಾಪಸ್ಸು ಕಾರಿನಲ್ಲಿ ತಮ್ಮ ಮನೆಗೆ  ಹೋಗುತ್ತಿರುವಾಗ್ಗೆ  ಒಕ್ಕಲಿಗರ ಕಲ್ಯಾಣ ಮಂಟಪದ ಜಂಕ್ಷನ್ ನಲ್ಲಿ ಅಂದರೆ ಗಾಂದಿ ನಗರದ ಮಾರಿಯಮ್ಮ ದೇವಸ್ಥಾನದ ಕಡೆಗೆ ಹೋಗುವ ರಸ್ತೆಯಲ್ಲಿ ಹೋಗುತ್ತಿದ್ದಾಗ ಮುಂದೆ ಸುಮಾರು ಜನರು ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದು ಕಾರು ಹೋಗಲು ದಾರಿ ಇಲ್ಲದರಿಂದ ಕಾರಿನ ಹಾರನ್ ಮಾಡಿದಾಗ ಅವರಿಗೆ ಪರಿಚಿತ ವ್ಯಕ್ತಿಗಳಾದ ಜನತಾ ಕಾಲೋನಿಯ ವಾಸಿಗಳಾದ  ಕರೀಂ ಬೇಗ್,  ಅಜೀಮ್ ಬೇಗ್ , ಚಾಂದ್  ಸಮೀರ್ ಮತ್ತು ಮತ್ತೊಬ್ಬ ಸೇರಿ ಎಂ.ಜಿ. ಪ್ರವೀಣ್ ರವರನ್ನು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿರುತ್ತಾರೆಂದು ಅಲ್ಲದೆ ಕಾರಿನ ಗ್ಲಾಸನ್ನು ಒಡೆದುಹಾಕಿ ನಷ್ಟಪಡಿಸಿದ್ದಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪಾದಚಾರಿಗಳಿಗೆ ಕಾರು ಡಿಕ್ಕಿ:

ಸೋಮವಾರಪೇಟೆ ನಗರದ ಜನತಾ ಕಾಲೋನಿ ನಿವಾಸಿ ರಿಹಾನ್ ಬೇಗ್ ಎಂಬವರು ದಿನಾಂಕ 5-6-2019 ರಂದು  ರಂಜಾನ್ ಹಬ್ಬದ ಪ್ರಯುಕ್ತ  ಹನಿಪಿಯಾ ಮಸೀದಿಗೆ ಬಂದು  ನಂತರ ಗಾಂಧಿ ನಗರದಲ್ಲಿರುವ   ಈದ್ಗಾ ಮೈದಾನಕ್ಕೆ ಮಹಮ್ಮದ್ ಪೈಜ್ ರವರೊಂದಿಗೆ ನಡೆದು ಕೊಂಡು  ಸುಮಾರು ಜನರೊಂದಿಗೆ ಒಕ್ಕಲಿಗರ ಕಲ್ಯಾಣ ಮಂಟಪದ ಬಳಿ ಹೋಗುತ್ತಿದ್ದಾಗ  ಹಿಂಬದಿಯಲ್ಲಿದ್ದ ನಮಗೆ ಕೆ ಎ 05 ಎಂ.ಸಿ 920ರ ಐಕಾನ್ ಕಾರಿನ ಚಾಲಕ ಎಂ.ಜಿ. ಪ್ರವೀಣ್ ರವರು ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಬಂದು  ನಮಗೆ ಡಿಕ್ಕಿಪಡಿಸಿ ನೋವು ಪಡಿಸಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಕಣ ದಾಖಲಾಗಿದೆ.

ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ: 

ಸೋಮವಾರಪೇಟೆ ತಾಲೋಕು ಕೂಗೇಕೋಡಿ ಗ್ರಾಮದ ನಿವಾಸಿ ಕೆ.ಸಿ. ಭೀಮಯ್ಯ ಎಂಬವರ ಮಗ ಮಂಜುನಾಥ ಎಂಬವರು ದಿನಾಂಕ 4-6-2019 ರಂದು ಕೂಗೇಕೋಡಿ ಬಸ್ಸು ತಂಗುದಾಣದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸೋಮವಾಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮರದಿಂದ ಬಿದ್ದು ವ್ಯಕ್ತಿ ದುರ್ಮರಣ:

ಸೋಮವಾರಪೇಟೆ ಠಾಣಾ ಸರಹದ್ದಿನ ಕುಸುಬೂರು ಗ್ರಾಮದ ನಿವಾಸಿ ಬಿ.ಐ. ಸೋಮಯ್ಯ ಎಂಬವರ ಸಹೋದರ ಸುಭಾಷ್ ಎಂಬವರು ದಿನಾಂಕ 5-6-2019ರಂದು ಕುಸುಬೂರು ಗ್ರಾಮದ ಪ್ರದೀಪ್ ಜಗನಾಥರವರ ತೋಟದಲ್ಲಿ ಮರಕಪಾತ್ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸುಭಾಷ್ ರವರು ಮರದಿಂದ ಕೆಳಗೆ ಬಿದ್ದು ದುರ್ಮರಣಕ್ಕೀಡಾಗಿದ್ದು, ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿಗಳಿಂದ ಅಕ್ರಮ ಮರಳು ಸಂಗ್ರಹ ಪ್ರಕರಣ ದಾಖಲು:

ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ವ್ಯಕ್ತಿಗಳು ಅಕ್ರಮವಾಗಿ ಮರಳನ್ನು ಕಳ್ಳತನ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿಟ್ಟಿದ್ದಾರೆಂಬ ಮಾಹಿತಿ ಆದಾರದ ಮೇರೆಗೆ ದಿನಾಂಕ 5-6-2019 ರಂದು ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಸಿ.ಎಂ. ತಿಮ್ಮಶೆಟ್ಟಿ ರವರು ತಮ್ಮ ಸಿಬ್ಬಂದಿಯೊಂದಿಗೆ  ಕೊಡ್ಲಿಪೇಟೆ ಗ್ರಾಮದ ಕಟ್ಟೇಪುರ, ನೀರುಗುಂದ ಇತ್ಯಾದಿ ಕಡೆಗಳಲ್ಲಿ ದಾಳಿ ಮಾಡಿ ಆರೋಪಿಗಳ ವಿರುದ್ಧ 5 ಪ್ರತ್ಯೇಕ  ಪ್ರಕರಣಳನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

ಶ್ರೀಮಂಗಲ ಪೊಲೀಸ್ ಠಾಣಾ ಸರಹದ್ದಿನ ಈಸ್ಟ್‍ ನೆಮ್ಮಲೆ ಗ್ರಾಮದ ನಿವಾಸಿ ಚಂಗುಲಂಡ ಸೋಮಯ್ಯ ಎಂಬವರ ಲೈನು ಮನೆಯಲ್ಲಿ ವಾಸವಾಗಿದ್ದ ಪಣಿಎರವರ ಅರುಣ ಎಂಬವರು ದಿನಾಂಕ 4-6-2019 ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ  ಮಾಡಿಕೊಂಡಿದ್ದು, ಮೃತರ ಪತ್ನಿ ಪಣಿಎರವರ ಬೋಜಕ್ಕಿ ಯವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆಗೆ ಬೈಕು ಡಿಕ್ಕಿ:

ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ತಿತಿಮತಿ  ಗ್ರಾಮದ ವಿನಾಯಕ ಗರದಲ್ಲಿ ವಾಸವಾಗಿರುವ ಹೆಚ್.ಆರ್. ಶಿವಣ್ಣನವರ  ತಮ್ಮ ಮುತ್ತಯ್ಯ ರವರ ಹೆಂಡತಿ ಶ್ರೀಮತಿ ಸಿದ್ದಮ್ಮ ರವರು ದಿನಾಂಕ 5-6-2019 ರಂದು ಸಮಯ 11.15 ಗಂಟೆಗೆ ರಸ್ತೆಯ ಎಡಬದಿಯಲ್ಲಿದ್ದ ಜಲ್ಲಿಯನ್ನು ತೆಗೆದುಕೊಂಡು ಬರುವ ಉದ್ದೇಶದಿಂದ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಕೆಎ 12 ಆರ್ 8067 ರ ಅಪ್ಪಾಚಿ ಬೈಕಿನ ಚಾಲಕ ಬೈಕನ್ನು ಅತಿವೇಗ ಮತ್ತು ಅಜಾಗಾರುಕತೆಯಿಂದ ಚಲಾಯಿಸಿಕೊಂಡು  ಬಂದು ಸಿದ್ದಮ್ಮರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಸಿದ್ದಮ್ಮರವರು ಕೆಳಗೆ ಬಿದ್ದು, ಅವರ ತಲೆಯ ಹಿಂಬದಿಗೆ ರಕ್ತ ಗಾಯಾವಾಗಿದ್ದು  ಹೆಚ್ದಿನ ಚಿಕಿತ್ಸೆಯ ಮೈಸೂರಿಗೆ ಕರೆದುಕೊಂಡು ಹೋಗಿದ್ದು, ಈ ಸಂಬಂಧ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.