Crime News

ವ್ಯಕ್ತಿಯ ಆಕಸ್ಮಿಕ ಸಾವು

                       ದಿನಾಂಕ 05/05/2018ರಂದು ಮಡಿಕೇರಿ ನಗರದ ನಿವಾಸಿ ಸಿದ್ದನಾಯಕ ಎಂಬವರು ವಿಪರೀತ ಮದ್ಯಪಾನ ಮಾಡಿ ನಗರದ ಖಾಸಗಿ ಬಸ್‌ ನಿಲ್ದಾಣದ ಮುಂದಿನ ಕಟ್ಟೆಯ ಮೇಲೆ ಕುಳಿತುಕೊಳ್ಲಲೆತ್ನಿಸಿದಾಗ ಆಯ ತಪ್ಪಿ ಕೆಳಗೆ ಹರಿಯುತ್ತಿರುವ ಚರಂಡಿಗೆ ಬಿದ್ದು ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

 

ವ್ಯಕ್ತಿ ಆತ್ಮಹತ್ಯೆ 

                       ದಿನಾಂಕ 06/05/2018ರಂದು ಸೋಮವಾರಪೇಟೆ ಬಳಿಯ ಚೌಡ್ಲು ನಿವಾಸಿ ನಂದ ಎಂಬವರು ಮನೆಯ ಬಳಿಯ ಕಾಡಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಯಾವುದೋ ವೈಯುಕ್ತಿಕ ವಿಷಯಕ್ಕೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ   ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

 

ಕಾರಿಗೆ ಹಾನಿ, ಹಲ್ಲೆ ಪ್ರಕರಣ

                        ದಿನಾಂಕ 05/05/2018ರಂದು ಶನಿವಾರಸಂತೆ ಬಳಿಯ ಹಾರೆಹೊಸೂರು ಗ್ರಾಮದ ನಿವಾಸಿ ದಿನೇಶ ಎಂಬವರು ಅವರ ಕಾರಿನಲ್ಲಿ ಬಂದು ಅವರ ಬ್ರಾಂದಿ ಅಂಗಡಿಯ ಬಳಿ ಶೆಡ್ಡಿನಲ್ಲಿ ನಿಲ್ಲಿಸುತ್ತಿರುವಾಗ ದೊಡ್ಡಕುಂದ ನಿವಾಸಿ ತೇಜ ಕುಮಾರ್ ಎಂಬಾತನು ಅಲ್ಲಿಗೆ ಒಂದು ಬಲೇನೋ ಕಾರಿನಲ್ಲಿ ಬಂದು ಏಕಾ ಏಕಿ ದಿನೇಶರವರ ಕಾರಿನ ಗಾಜಿಗೆ ದೊಣ್ಣೆಯಿಂದ ಹೊಡೆದು ಹಾನಿಗೊಳಿಸಿದ್ದು ಈ ಬಗ್ಗೆ ವಿಚಾರಿಸಿದ ಬ್ರಾಂದಿ ಅಂಗಡಿಯ ಕೆಲಸಗಾರ ಧರ್ಮಪ್ಪ ಎಂಬಾತನಿಗೂ ಸಹಾ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

 

ರಸ್ತೆ ಅಪಘಾತ

                      ದಿನಾಂಕ 06/05/2018ರಂದು ಗೋಣಿಕೊಪ್ಪ ನಿವಾಸಿ ಉಸ್ಮಾನ್ ಎಂಬವರು ನಗರದ ಹರಿಶ್ಚಂದ್ರಪುರದಲ್ಲಿನ ಅವರ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಕೆಎ-12-ಬಿ-6165ರ ಟಾಟಾ ಏಸ್ ವಾಹನವನ್ನು ಅದರ ಚಾಲಕ ನಿತಿನ್ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಉಸ್ಮಾನ್‌ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಉಸ್ಮಾನ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

 

ಅಪರಿಚಿತರಿಂದ ಹಲ್ಲೆ

                      ದಿನಾಂಕ 05/05/2018ರಂದು ಪೊನ್ನಂಪೇಟೆ ನಿವಾಸಿ ಕೆ.ಎಂ.ಮುತ್ತಪ್ಪ ಎಂಬವರು ಕುಂದ ಗ್ರಾಮದ ಸಿಲ್ವರ್ ಓಕ್ ಹೋಂ ಸ್ಟೇ ಬಳಿ ಅವರ ಜೀಪಿನಲ್ಲಿ ಬರುತ್ತಿರುವಾಗ ಹಿಂದಿನಿಂದ ಒಂದು ಮಾರುತಿ ಕಾರಿನಲ್ಲಿ ಬಂದ ನಾಲ್ವರು ಅಪರಿಚಿತರು ಮುತ್ತಪ್ಪನವರ ಜೀಪನ್ನು ಅಡ್ಡಗಟ್ಟಿ ನಿಲ್ಲಿಸಿ ರಾಡಿನಿಂದ ಮುತ್ತಪ್ಪನವರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

 

ಕಳವು ಪ್ರಕರಣ

                   05/05/2018ರಂದು ಗೋಣಿಕೊಪ್ಪ ಬಳಿಯ ಅತ್ತೂರು ನಿವಾಸಿ ಎಸ್‌.ಎಸ್.ಕಾವೇರಪ್ಪ ಎಂಬವರು ಕೆಲಸದ ನಿಮಿತ್ತ ಗೋಣಿಕೊಪ್ಪ ನಗರಕ್ಕೆ ಬಂದು ಮರಳಿ ಮನೆಗೆ ಹೋದಾಗ ಯಾರೋ ಕಳ್ಳರು ಮನೆಯ ಮುಂದಿನ ಬಾಗಿಲಿನ ಚಿಲಕ ಮುರಿದು ಒಳ ಪ್ರವೇಶಿಸಿ ಒಳಗಿದ್ದ ಡಿವಿಡಿ ಪ್ಲೇಯರ್, ಎರಡು ಚಿನ್ನದ ಉಂಗುರ ಸೇರಿದಂತೆ ಒಟ್ಟು ರೂ.24,000/- ಮೌಲ್ಯದ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.   

Leave a Reply

Your email address will not be published.