Crime News

ಮಹಿಳೆ ಸಾವು ಪ್ರಕರಣ ದಾಖಲು:

ವಿರಾಜಪೇಟೆ ತಾಲೋಕು ಬಾಡಗ ಬಾಣಂಗಾಲ ಗ್ರಾಮದ ನಿವಾಸಿ  ಗುಡ್ಡಂಡ ಸಿ. ಮೊಣ್ಣಪ್ಪ ಎಂಬವರ ಗೌರಿಕೊಪ್ಪ ಎಸ್ಟೇಟ್ ಲೈನು ಮನೆಯಲ್ಲಿ ರಾಜು ಮತ್ತು ಆತನ ಪತ್ನಿ ಶ್ರೀಮತಿ ಎರವರ ತಂಗಿ ವಾಸವಾಗಿದ್ದು ದಿನಾಂಕ 4-6-2019 ರಂದು ತೋಟಕ್ಕೆ ಕೆಲಸಕ್ಕೆ ಹೋಗಿ ಮತ್ತೆ ಕೆಲಸಕ್ಕೆ ಹೋಗದೆ ಇದ್ದು ದಿನಾಂಕ 8-6-2019 ರಂದು ನೋಡಿದಾಗ ಎರವರ ತಂಗಿ ಲೈನು ಮನೆಯಲ್ಲಿ ಮೃತಪಟ್ಟಿರುವುದು ಕಂಡು ಬಂದಿದ್ದು, ಆಕೆಯ ಸಾವಿನ ಬಗ್ಗೆ ಸಂಶಯವಿರುವುದಾಗಿ ಎಸ್ಟೇಟ್ ಮಾಲಿಕ ಗುಡ್ಡಂಡ ಸಿ. ಮೊಣ್ಣಪ್ಪನವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದಾರಿ ತಡೆದು ವ್ಯಕ್ತಿಗೆ ಕೊಲೆ ಬೆದರಿಕೆ:

ಮಡಿಕೇರಿ ತಾಲೋಕು ಕಗ್ಗೋಡ್ಲು ಗ್ರಾಮದ ಬಿ.ಎಂ. ಪಧ್ಮನಾಭ ಎಂಬವರು ದಿನಾಂಕ 7-6-2019 ರಂದು ಹೂಕಾಡು ಪೈಸಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅವರ ಅಕ್ಕನ ಮಗ ಸಂಜೀವ ಎಂಬವರು ಪಧ್ಮನಾಭನವರನ್ನು ವಿನಾ ಕಾರಣ ದಾರಿಯಲ್ಲಿ ತಡೆದು ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೀರಿನಲ್ಲಿ ಮುಳುಗಿ ಇಬ್ಬರ ದುರ್ಮರಣ:

ಕುಶಾಲನಗರದ ಬದ್ರುನ್ನಿಸಾ ಬಡಾವಣೆಯಲ್ಲಿ  ನಾಸೀರ್ ಖಾನ್ ರವರ ಸಂಸಾರ ವಾಸವಾಗಿದ್ದು ದಿನಾಂಕ 8-6-19 ರಂದು ರಂಜಾನ್ ಹಬ್ಬಕ್ಕೆ ನಾಸೀರ್ ಖಾನ್ ರವರ ಪತ್ನಿ ಶ್ರೀಮತಿ ಮೋಸೀನಾ ರವರ ಸೋದರ ಮಾವನ ಮಗ ಸೈಯದ್ ಮೋಹಿನ್ ಅವರ ಮನೆಗೆ ಬಂದಿದ್ದು ದಿನಾಂಕ 8-6-2019 ರಂದು ಅವರೆಲ್ಲರೂ ಕುಶಾಲನಗರದ ಮಾರುಕಟ್ಟೆ ಸಮೀಪದ ಕಾವೇರಿ ಹೊಳೆಗೆ ಹೋಗಿದ್ದು ಹೊಳೆಲ್ಲಿ ಸ್ನಾನ ಮಾಡುತ್ತಿದ್ದಾಗ ಸೈಯದ್ ಮೋಹಿನ್ ಆಕಸ್ಮಿವಾಗಿ ನೀರಿನಲ್ಲಿ ಮುಳುಗಿದ್ದು ಆತನನ್ನು ರಕ್ಷಿಸಲು ನೀರಿಗೆ ಇಳಿದ ನಾಸೀರ್ ಖಾನ್ ಸಹ ನೀರಿನಲ್ಲಿ ಮುಳುಗಿ ಇಬ್ಬರೂ ಸಹ ಮೃತಪಟ್ಟಿದ್ದು ನಾಸೀರ್ ಖಾನ್ ರವರ ಪತ್ನಿ ಶ್ರೀಮತಿ ಮೋಸೀನಾರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಜೀವನದಲ್ಲಿ ಜುಗುಪ್ಸೆ ವ್ಯಕ್ತಿ ಆತ್ಮಹತ್ಯೆ:

ಸೋಮವಾರಪೇಟೆ ತಾಲೋಕು ಹೊಸೂರು ರಸ್ತೆ ಶನಿವಾಸಂತೆ ಯ ನಿವಾಸಿ ಎಂ.ಎಸ್. ದಾಕ್ಷಾಯಿಣಿ ರವರ ಪತಿ 72 ವರ್ಷ ಪ್ರಾಯದ ಷಣ್ಮುಗಪ್ಪ ಎಂಬವರು ಅನಾರೋಗ್ಯದಿಂದ ಬಳಲುತ್ತಿದ್ದು ಇದೇ ವಿಚಾರದಲ್ಲಿ ಅವರು ಜಿಗುಪ್ಸೆಗೊಂಡು ದಿನಾಂಕ 8-6-2019 ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಮಹಿಳೆ ಕೊಲೆ ಪ್ರಕರಣ ದಾಖಲು:

ವಿರಾಜಪೇಟೆ ತಾಲೋಕು ಕೊಟ್ಟೋಳಿ ಗ್ರಾಮದ ಬೋಯಿಕೇರಿಯಲ್ಲಿರುವ ಆಶ್ರಯ ಮನೆಯಲ್ಲಿ  ಶಿಲ್ಪೆ @ ಗೌರಿ ಎಂಬವರು ತನ್ನ ಗಂಡ ಮನುವಿನೊಂದಿಗೆ ವಾಸವಾಗಿದ್ದು ದಿನಾಂಕ 6-6-2019 ರಂದು ರಾತ್ರಿ ಮನು ಮದ್ಯ ಸೇವಿಸಿ ಮನೆಗೆ ಬಂದು ತನ್ನ ಪತ್ನಿ ಶಿಲ್ಪೆ @ ಗೌರಿಯ ಮೇಲೆ ಹಲ್ಲೆ ನಡೆಸಿ ಯಾವುದೋ ಆಯುಧದಿಂದ ತಿವಿದು ಕೊಲೆ ಮಾಡಿ ನಾಪತ್ತೆಯಾಗಿದ್ದು, ಈ ಸಂಬಂಧ ಮೃತೆಯ ಮಗಳಾದ ವೈ.ಸಿ. ಸಿಂಧು ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ವಶ:

ದಿನಾಂಕ 8-6-2019 ರಂದು ಹೆಬ್ಬಾಲೆ ಗ್ರಾಮದಲ್ಲಿ ಪೊನ್ನಂಪೇಟೆ ಠಾಣಾಧಿಕಾರಿ ಬಿ.ಜಿ. ಮಹೇಶ್ ಹಾಗು ಸಿಬ್ಬಂದಿಗಳು ದಾಳಿ ಮಾಡಿ ಹೆಬ್ಬಾಲೆ ಗ್ರಾಮದ ಗಾಡಂಗಡ ಜೋಯಪ್ಪ @ ಗಣೇಶ ಎಂಬವರು ಅಕ್ರಮವಾಗಿ ಮಾರಾಟ ಮಾಡಲು ತನ್ನ ಸ್ವಾಧೀನಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟುಕೊಂಡಿದ್ದ ಅಂದಾಜು ಮೌಲ್ಯದ 2,607/- ಗಳ 90 ಎಂ.ಎಲ್.ನ ಒರಿಜಿನಲ್ ಚಾಯ್ಸ್  ಡಿಲಕ್ಸ್ ವಿಸ್ಕಿ 86 ಟೆಟ್ರಾ ಪ್ಯಾಕೇಟ್ ಗಳನ್ನು ವಶಕ್ಕೆ ಪಡೆದು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.