Crime News

ಅಪಘಾತ ವ್ಯಕ್ತಿಯ ದುರ್ಮರಣ

                 ಗೋಣಿಕೊಪ್ಪಲುವಿನ ಹರಿಶ್ಚಂದ್ರಪುರದಲ್ಲಿರುವ ಕಿಂಗ್ಸ್ ವೇ ಹೊಟೆಲ್ ಮುಂಭಾಗ ದಿನಾಂಕ 08-06-2019 ರಂದು ಖಲೀಂಮುಲ್ಲಾ, ಸುಹೇಲ್ ಮತ್ತು ಪೈಸಲ್ ರವರು ನಿಂತುಕೊಂಡಿರುವಾಗ ಚೆನ್ನಂಗೊಲ್ಲಿಯ ನಿವಾಸಿಯಾದ ಬಾಲಕೃಷ್ಣ ಎಂಬುವವರು ಮಾರುತಿ ಓಮಿನಿ ವ್ಯಾನನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆ ಪಕ್ಕದಲ್ಲಿ ನಿಂತಿದ್ದವರಿಗೆ ಡಿಕ್ಕಿಪಡಿಸಿದ್ದು, ತೀವೃ ಗಾಯಗೊಂಡ ಖಲೀಂಮುಲ್ಲಾ ರವರು ಮೃತಪಟ್ಟಿದ್ದು, ಸುಹೇಲ್ ಮತ್ತು ಪೈಸಲ್ ರವರಿಗೆ ಗಾಯವಾಗಿದ್ದು, ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮರಳು ಸಾಗಾಟ

             ದಿನಾಂಕ 09-06-2019 ರಂದು ಸೋಮವಾರಪೇಟೆ ವೃತ್ತ ನಿರೀಕ್ಷಕರವರಿಗೆ ಯಡೂರು ಗ್ರಾಮದ ಪ್ರಸನ್ನ  ಎಂಬುವವರು ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವುದಾಗಿ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ತೆರಳಿ ಮರಳು ಸಾಗಾಟ ಮಾಡುತ್ತಿದ್ದ ಪಿಕ್ ಅಪ್ ಜೀಪನ್ನು ಕಕ್ಕೆಹೊಳೆಯ ಹತ್ತಿರ ವಶಪಡಿಸಿಕೊಂಡು ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮದ್ಯ ಮಾರಾಟ

            ದಿನಾಂಕ 09-06-2019 ರಂದು ಸೋಮವಾರಪೇಟೆ ತಾಲೋಕಿನ ಕಾರೆಕೊಪ್ಪ ಗ್ರಾಮದ ನಿವಾಸಿ ರವಿ ಎಂಬುವವರು ತನ್ನ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಸಿಕ್ಕಿದ ಮಾಹಿತಿ ಮೇರೆಗೆ ಸೋಮವಾರಪೇಟೆ ಠಾಣೆಯ ಪಿಎಸ್ಐ ರವರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಮದ್ಯ ಮಾರಾಟ ಮಾಡುತ್ತಿದ್ದ ರವಿಯವರನ್ನು ವಶಕ್ಕೆ ಪಡೆದುಕೊಂಡು ಮದ್ಯದ ಪ್ಯಾಕೆಟ್ ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ

ಜೂಜಾಟ ಪ್ರಕರಣ

            ದಿನಾಂಕ 09-06-2019 ರಂದು ಸೋಮವಾರಪೇಟೆ ತಾಲೋಕಿನ ಐಗೂರು ಗ್ರಾಮದಲ್ಲಿ ಕೆಲವು ವ್ಯಕ್ತಿಗಳು ಅಕ್ರಮವಾಗಿ ಜೂಜಾಟ ಆಡುತ್ತಿರುವುದಾಗಿ  ಸಿಕ್ಕಿದ ಮಾಹಿತಿ ಮೇರೆಗೆ ಸೋಮವಾರಪೇಟೆ ಠಾಣೆಯ ಪಿಎಸ್ಐ ರವರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ್ದ ಗೂರು ಗ್ರಾಮದವರಾದ ಚೆನ್ನಕೇಶವ, ಪೂವಯ್ಯ, ವೆಂಕಪ್ಪ ಹಾಗೂ ಯತೀಶ್, ಹೊಸತೋಟದವರಾದ ಚಿದಾನಂದ ಹಾಗೂ ಕಿರುಗೂರು ಗ್ರಾಮದವರಾದ ನಂದರವರನ್ನು ವಶಕ್ಕೆ ಪಡೆದು ಜೂಜಾಟಕ್ಕೆ ಬಳಸಿದ 20000ರೂ ನಗದು ಹಣವನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ

            ದಿನಾಂಕ 09-06-2019 ರಂದು ಸೋಮವಾರಪೇಟೆ ತಾಲೋಕಿನ ಹಿತ್ತಲಕೇರಿ ಗ್ರಾಮದ ನಿವಾಸಿ ಶಾಂತಮ್ಮ ಎಂಬುವವರು ತನ್ನ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಸಿಕ್ಕಿದ ಮಾಹಿತಿ ಮೇರೆಗೆ ಸೋಮವಾರಪೇಟೆ ವೃತ್ತ ನಿರೀಕ್ಷಕರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಅಕ್ರಮವಾಗಿ ಮಾರಾಟಮಾಡಲು ಶೇಖರಿಸಿಟ್ಟಿದ್ದ ಮದ್ಯವನ್ನು  ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ.