Crime News

ಕೊಟ್ಟಿಗೆಯಿಂದ ಆಡುಗಳ ಕಳ್ಳತನ:

ಮಡಿಕೇರಿ ನಗರದ ನಿವಾಸಿ ಶ್ರೀಮತಿ ಪೊನ್ನಮ್ಮ ಎಂಬವರು ಮಡಿಕೇರಿ ತಾಲೋಕು ಕಗ್ಗೋಡ್ಲು ಗ್ರಾಮದಲ್ಲಿ ದ್ವಾರಕಾ ಎಸ್ಟೇಟ್ ಮಾಲೀಕರಿಂದ 27 ಏಕ್ರೆ ಜಾಗವನ್ನು ಲೀಸ್ ಗೆ ಪಡೆದು ಬಾಳೆ ತೋಟ ಹಾಗು ಮೇಕೆ ಸಾಕಾಣಿಕೆ ಮಾಡಿಕೊಂಡಿದ್ದು,  ದಿನಾಂಕ 8-6-2019 ರಿಂದ 10-6-2019ರ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕೊಟ್ಟಿಗೆಗೆ ಹಾಕಿದ ಬೀಗವನ್ನು ತೆಗದು ಒಟ್ಟು 32 ಮೇಕೆಗಳ ಪೈಕಿ ಅಂದಾಜು 1,68,000/- ರೂ ಬೆಲೆಬಾಳುವ 14 ಮೇಕೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮನೆಗೆ ನುಗ್ಗಿ ಚಿನ್ನಾಭರಣ ಕಳವು:

ಮಡಿಕೇರಿ ನಗರದ ಜ್ಯೋತಿ ನಗರದ ನಿವಾಸಿ ಕೆ.ಸಿ. ಹರೀಶ್ ಎಂಬವರ ಮನೆಗೆ ದಿನಾಂಕ 9-6-2019 ರಂದು ಯಾರೀ ಕಳ್ಳರು ನುಗ್ಗಿ ಮನೆಯಿಂದ 22,000/- ರೂ ಬೆಲೆಬಾಳುವ ಚಿನ್ನಾಭರಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಮಡಿಕೇರಿ ನಗರ ಠಾಣೆಯಲ್ಲಿ  ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಶಾಲಾ ಬಾಲಕನಿಗೆ ಬೈಕ್ ಡಿಕ್ಕಿ:

ಸೋಮವಾರಪೇಟೆ ಠಾಣಾ ಸರಹದ್ದಿನ ಸಂಗಯ್ಯನಪುರ ಗ್ರಾಮದ ನಿವಾಸಿ ಬಿ.ಜಿ. ಮಹೇಶ್ ಎಂಬವರ ಮಕ್ಕಳಾದ ಧನುಶ್ ಮತ್ತು ಮುಖೇಶ್ ರವರು ಶನಿವಾರ ಸಂತೆಯ ಸೆಕ್ರೇಡ್   ಹಾರ್ಟ್  ಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದು  ದಿನಾಂಕ: 4-6-2019ರಂದು ಸಮಯ 5:00 ಗಂಟೆಗೆ ಶಾಲೆಯಿಂದ ವ್ಯಾನಿನಲ್ಲಿ ಬಂದು  ವ್ಯಾನಿನಿಂದ ಇಳಿದು  ರಸ್ತೆ ದಾಟುತ್ತಿದ್ದಾಗ ಬಾಣವಾರ ಕಡೆಯಿಂದ ಶನಿವಾರ ಸಂತೆಯ ಕಡೆಗೆ ಕೆ ಎ 12 ಎಲ್. 5729ರ ಬೈಕಿನ ಸಾವಾರನು ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ  ಕೊಂಡು ಬಂದು ರಸ್ತೆ ದಾಟುತ್ತಿದ್ದ ಮುಖೇಶ್ ನಿಗೆ ಡಿಕ್ಕಿ ಪಡಿಸಿ ನಿಲ್ಲಿಸದೇ ಹೋಗಿದ್ದು ಪರಿಣಾಮ ಮುಖೇಶ್ ನು ಗಾಯಗೊಂಡಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣದ ವಿಚಾರದಲ್ಲಿ ಹಲ್ಲೆ:

ದಿನಾಂಕ 10-6-2019 ರಂದು ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಕಾಟಿಕೊಪ್ಪಲ್ ಯಲಕನೂರು ಗ್ರಾಮದ ರಾಜು ರವರ ಮೇಲೆ ಕುಮಾರ್ ಎಂಬವರು ಪಿಕ್ ಅಪ್ ವಾಹನದ ಬಾಡಿಗೆ ಹಣ  ನೀಡಲಿಲ್ಲವೆಂಬ ಕಾರಣಕ್ಕೆ ಇಟ್ಟಿಗೆಯಿಂದ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಅಪಘಾತ:

ಸೋಮವಾರಪೇಟೆ ಠಾಣಾ ಸರಹದ್ದಿನ ತಣ್ಣೀರು ಹಳ್ಳ ಗ್ರಾಮದ ಬಿ.ವಿ. ನಂದೀಶ ಎಂಬವರು ದಿನಾಂಕ 10-6-2019 ರಂದು ತನ್ನ ಬಾಪ್ತು ಮೋಟಾರ್ ಸೈಕಲಿನಲ್ಲಿ ಸೋಮವಾರಪೇಟೆಯ ಓ.ಎಲ್‍.ವಿ. ಕಾನ್ವೆಂಟ್‍ಗೆ ಹೋಗಿ ವಾಪಾಸು ಮನೆಯ ಕಡೆಗೆ ಹೋಗುತ್ತಿದ್ದಾಗ ಸಲ್ಮಾನ್ ಎಂಬವರು ಹಿಂದಿನಿಂದ ತನ್ನ ಮೋಟಾರ್‍ ಸೈಕಲಿನಲ್ಲಿ ಬಂದು ಬಿ.ವಿ. ನಂದೀಶ ರವರು ಚಲಾಯಿಸುತ್ತಿದ್ದ ಮೋಟಾರ್‍ ಸೈಕಲಿಗೆ ಡಿಕ್ಕಿಪಡಿಸಿದ ಪರಿಣಾಮ ಬಿ.ಪಿ.ನಂದೀಶ್ ರವರು ಗಾಯಗೊಂಡಿದ್ದು, ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮದ್ಯ ವಶ ಪ್ರಕರಣ ದಾಖಲು:

ದಿನಾಂಕ 10-6-2019 ರಂದು ಶನಿವಾರಸಂತೆ ಠಾಣಾಧಿಕಾರಿ ಸಿ.ಎಂ. ತಿಮ್ಮಶೆಟ್ಟಿ ಯವರಿಗೆ ಬಂದ ಮಾಹಿತಿ ಆದಾರದ ಮೇರೆಗೆ ಶನಿವಾರಸಂತೆ ಠಾಣಾ ಸರಹದ್ದಿನ ಅವರೆದಾಳು ಗ್ರಾಮದ ಪಾಪಣ್ಣ @ ವೇದಮೂರ್ತಿ ಎಂಬವರ ಅಂಗಡಿಗೆ ದಾಳಿ ಮಾಡಿ ಅಕ್ರಮವಾಗಿ ಮಾರಾಟ ಮಾಡಲು ಇಟ್ಟಿದ್ದ 330 ಎಂ.ಎಲ್‍ ನ 9 ಟಿನ್ ಕೆ.ಎಫ್. ಬಿಯರ್‍ ನ್ನು ಹಾಗು 180 ಎಂ.ಎಲ್.ನ ಕೋಡೇಸ್ XXX ರಮ್‍ನ 5 ಬಾಟಲಿಗಳನ್ನು ವಶಕ್ಕೆ ಪಡೆದು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಅಕ್ರಮ ಮದ್ಯ ವಶ ಪ್ರಕರಣ ದಾಖಲು:

ಶನಿವಾರಸಂತೆ ಠಾಣಾಧಿಕಾರಿ ಸಿ.ಎಂ. ತಿಮ್ಮಶೆಟ್ಟಿ ರವರಿಗೆ ದಿನಾಂಕ 10-6-2019 ರಂದು ಬಂದ ಮಾಹಿತಿ ಆದಾರದ ಮೇರೆಗೆ ಸಿಬ್ಬಂದಿಯೊಂದಿಗೆ ಠಾಣಾ ಸರಹದ್ದಿನ ಕಟ್ಟೆಪುರ ಗ್ರಾಮದ ಶಿವಣ್ಣ ಎಂಬವರ ಅಂಗಡಿಗೆ ದಾಳಿ ಮಾಡಿ ಸದರಿಯವರು ಅಕ್ರಮವಾಗಿ ಮಾರಾಟ ಮಾಡಲು ಶೇಖರಿಸಿಟ್ಟಿದ್ದ  90 ಎಂ.ಎಲ್. ನ 41 ಪ್ಯಾಕೇಟ್ ಒರಿಜಿನಲ್ ಜಾಯಿಸ್ ಬ್ರಾಂದಿಯನ್ನು ವಶಕ್ಕೆ ಪಡೆದು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.