Crime News

ಕೊಲೆ ಪ್ರಕರಣ

          ದಿನಾಂಕ 08-06-2019 ರಂದು ಮಾಲ್ದಾರೆ ಗ್ರಾಮದ ದೊಡ್ಡಹಡ್ಲುವಿನ ನಿವಾಸಿ ನಾಗ ಎಂಬುವವರು ಸಿದ್ದಾಪುರದ ಸ್ವರ್ಣ ಮಾಲಾ ಮದುವೆ ಮಂಟಪಕ್ಕೆ ರಾತ್ರಿ ಮದುವೆಗೆ ಹೋಗಿದ್ದಾಗ ಅವರೊಂದಿಗೆ ಊಟದ ವಿಚಾರದಲ್ಲಿ ಕರಡಿಗೋಡು ಗ್ರಾಮದ ಶ್ರೀನಿವಾಸರವರು ಜಗಳ ಮಾಡಿ ಹೊಟ್ಟೆಗೆ ಒದ್ದು ನೋವುಪಡಿಸಿದ್ದು, ಇದೇ ನೋವಿನಿಂದ ನರಳುತ್ತಿದ್ದವರನ್ನು ಆಸ್ಪತ್ರೆಗೆ ದಾಖಲಿಸಲಾಗಿ  ದಿನಾಂಕ 11-06-2019 ರಂದು ಚಿಕಿತ್ಸೆ ಫಲಕಾರಿಯಾಗದೇ ನಾಗರವರು  ಮೃತಪಟ್ಟಿದ್ದು, ಈ ಸಂಬಂದ ಮಗಳು ಜ್ಯೋತಿಯವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

          ದಿನಾಂಕ 11-06-2019 ರಂದು ಮಡಿಕೇರಿ ನಗರದ  ನಿವಾಸಿ ಬಷೀರ್ ಎಂಬುವವರೊಂದಿಗೆ ರಿಯಾಜ್ ಎಂಬುವವರು ಅಂಗಡಿಯನ್ನು ಬಾಡಿಗೆಗೆ ಕೊಡದೇ ಇದ್ದ ವಿಚಾರದಲ್ಲಿ ಜಗಳ ಮಾಡಿ ಬೆದರಿಕೆ ಹಾಕಿದ್ದು, ಈ ಬಗ್ಗೆ ರಿಯಾಜ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

           ದಿನಾಂಕ 10-06-2019 ರಂದು ಸೋಮವಾರಪೇಟೆ ತಾಲೋಕಿನ ನಲ್ಲೂರು ಗ್ರಾಮದ ನಿವಾಸಿಯಾದ ಬೆಟ್ಟಯ್ಯ ಎಂಬುವವರೊಂದಿಗೆ ಆನಂದ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ಹಲ್ಲೆ ನಡೆಸಿದ್ದು ಈ ಬಗ್ಗೆ ಬೆಟ್ಟಯ್ಯನವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

          ದಿನಾಂಕ 11-06-2019 ರಂದು ಬಾಡಗ ಬಾಣಂಗಾಲ ಗ್ರಾಮದ ರತೀಶ್ ಎಂಬುವವರು ಪಿಕ್ ಅಪ್ ಜೀಪಿನಲ್ಲಿ ರೆಡಿಮೇಡ್ ಕೌಂಪೌಂಡ್ ಪೀಸ್ ಗಳನ್ನು ಪಿರಿಯಾಪಟ್ಟಣದಿಂದ ತೆಗೆದುಕೊಂಡು ಕೂಡಿಗೆಗೆ ಹೋಗುತ್ತಿರುವಾಗ ಕುಶಾಲನಗರದ ಮಾರ್ಕೆಟ್ ಹತ್ತಿರ ತಲುಪುವಾಗ ಹಿಂದಿನಿಂದ ಬಂದ ಮೋಟಾರು ಸೈಕಲನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಪಿಕ್ ಅಪ್ ಜೀಪಿನ ಹಿಂಬದಿಗೆ ಡಿಕ್ಕಿಪಡಿಸಿದ ಪರಿಣಾಮ ಮೋಟಾರು ಸೈಕಲ್ ಚಾಲಕ ಗಾಯಗೊಂಡಿದ್ದು, ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಆತ್ಮಹತ್ಯೆ

       ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ವಿರಾಜಪೇಟೆ ತಾಲೋಕಿನ ಕುಟ್ಟ ಗ್ರಾಮದಲ್ಲಿ ವರದಿಯಾಗಿದೆ. ಕುಟ್ಟ ಗ್ರಾಮದ ರಾಜುರವರ ಲೈನ್ ಮನೆಯಲ್ಲಿ ವಾಸವಿರುವ ಜೇನುಕುರುಬರ ಆನಂದ ಎಂಬುವವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 11-06-2019 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

      ದಿನಾಂಕ 10-06-2019 ಕೇರಳ ರಾಜ್ಯದ ಕೋಯಿಕೋಡು ಜಿಲ್ಲೆಯ ನೆಲ್ಲೂರುವಿನ ನಿವಾಸಿಯಾದ ಅನೀಸ್ ಎಂಬುವವರು ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ಮೈಸೂರುವಿಗೆ ಪ್ರವಾಸಕ್ಕೆಂದು ಹೋಗಿದ್ದವರು ವಾಪಾಸ್ಸು ಹೋಗುತ್ತಿರುವಾಗ ಶ್ರೀಮಂಗಲದ ಕಾಯಿಮಾನಿ ಎಂಬಲ್ಲಿಗೆ ತಲುಪುವಾಗ ಚಾಲಕ ಫಜಲ್ ಎಂಬುವವರು ಕಾರನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆ ಬದಿಯ ಮರಕ್ಕೆ ಡಿಕ್ಕಿಪಡಿಸಿದ ಪರಿಣಾಮ ಅನೀಸ್, ಸೋಸು ಮತ್ತು ಉಮೇಶರವರಿಗೆ ಗಾಯವಾಗಿದ್ದು, ಈ ಬಗ್ಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.