Crime News

ಅಪಘಾತ ವ್ಯಕ್ತಿಯ ದುರ್ಮರಣ

        ಮೂರ್ನಾಡು ನಗರದಲ್ಲಿ ಸುಮಾರು 1 ವರ್ಷದಿಂದ ಬಿಕ್ಷೆ ಬೇಡಿಕೊಂಡು ಜೀವನ ನಡೆಸುತ್ತಿದ್ದ ವ್ಯಕ್ತಿಗೆ ದಿನಾಂಕ 11-06-2019 ರ ರಾತ್ರಿ ಗೌಡ ಸಮಾಜದ ಹತ್ತಿರ ಯಾವುದೋ ವಾಹನ ಡಿಕ್ಕಿಯಾಗಿ ಗಾಯಗೊಂಡಿದ್ದವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸದರಿಯವರು ಮೃತಪಟ್ಟಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಲಾಟರಿ ಟಿಕೇಟ್ ಮಾರಾಟ, ಆರೋಪಿಗಳ ಬಂಧನ

      ದಿನಾಂಕ 12-06-2019 ರಂದು ಮಡಿಕೇರಿ ಗ್ರಾಮಾಂತರ ವೃತ್ತದ ವೃತ್ತನಿರೀಕ್ಷಕರಾದ ಸಿದ್ದಯ್ಯ ಎಂಬುವವರಿಗೆ ಮೂರ್ನಾಡು ನಗರದಲ್ಲಿ ಕೇರಳ ರಾಜ್ಯದ ಲಾಟರಿ ಟಿಕೇಟ್ ಗಳನ್ನು ಮಾರಾಟ ಮಾಡುತ್ತಿರುವುದಾಗಿ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ತೆರಳಿ ಮೂರ್ನಾಡು ನಗರದ ಲಕ್ಕಿ ಹೊಟೆಲ್ ಮುಂಭಾಗ ಲಾಟರಿ ಟಿಕೇಟ್ ಮಾರಾಟ ಮಾಡುತ್ತಿದ್ದ ಕೇರಳ ರಾಜ್ಯದ ಅಬ್ದುಲ್ ರಜಾಕ್ ಮತ್ತು ಅಬ್ದುಲ್ಲಾ ಎಂಬುವವರನ್ನು ವಶಕ್ಕೆ ಪಡೆದುಕೊಂಡಿದ್ದು, ಅಕ್ರಮವಾಗಿ ಮಾರಾಟ ಮಾಡಲು ಇಟ್ಟಿದ್ದ ಲಾಟರಿ ಟಿಕೇಟ್ ಹಾಗೂ ನಗದು ಹಣ 22,030  ರೂ ಗಳನ್ನು ವಶಪಡಿಸಿಕೊಂಡಿದ್ದು, ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ರಸ್ತೆಗೆ ಬಿದ್ದ ಮರ ತೆರವು ಮಾಡುತ್ತಿದ್ದ ವ್ಯಕ್ತಿಗೆ ವಾಹನ ಡಿಕ್ಕಿಯಾಗಿ ಗಾಯ:

            ಗೋಣಿಕೊಪ್ಪಲುವಿನ ಚೆಸ್ಕಾಂ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿದ್ದರಾಜು ನಾಯಕ ಎಂಬುವವರು ಇತರರೊಂದಿಗೆ ದಿನಾಂಕ 11-06-2019 ರಂದು ಹಾತೂರು ಗ್ರಾಮದಲ್ಲಿ ರಸ್ತೆಗೆ ಅಡ್ಡವಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸುತ್ತಿರುವಾಗ ಗೋಣಿಕೊಪ್ಪ ಕಡೆಯಿಂದ ಬಂದ ಕಾರನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಬಿದ್ದಿದ್ದ ಮರಕ್ಕೆ ಡಿಕ್ಕಿಪಡಿಸಿದ ಪರಿಣಾಮ ಮರದ ಕೊಂಬೆಯು  ಮರ ತೆರವುಗೊಳಿಸುತ್ತಿದ್ದ  ಸಿದ್ದರಾಜು ನಾಯಕರವರ ಕಾಲಿಗೆ ಬಡಿದು ಗಾಯವಾಗಿದ್ದು, ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.