Crime News

ವನ ಮಹೋತ್ಸವ ಆಚರಣೆ

ಜಿಲ್ಲಾ ಪೊಲೀಸ್‌ ಇಲಾಖೆಯ ಆಶ್ರಯದಲ್ಲಿ  ಜಿಲ್ಲಾ ಪೊಲೀಸ್‌ ಕಚೇರಿಯ ಆವರಣದಲ್ಲಿ ವನ ಮಹೋತ್ಸವ ಕಾರ್ಯಕ್ರಮವನ್ನು ದಿನಾಂಕ 14/06/2019ರಂದು ಕಚೇರಿಯ ಆವರಣದಲ್ಲಿ ಗಿಡ ನೆಡುವ ಮೂಲಕ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಸುಮನ್ ಡಿ ಪೆನ್ನೇಕರ್, ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ, ಗ್ರೀನ್‌ ಸಿಟಿ ಫೋರಂ ನ ಚೆಯ್ಯಂಡ ಸತ್ಯ, ಮೊಂತಿ ಗಣೇಶ್‌ ಮುಂತಾದವರು ಹಾಗೂ ಪೊಲೀಸ್‌ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು

ವ್ಯಕ್ತಿ ಆತ್ಮಹತ್ಯೆ

ದಿನಾಂಕ 12/06/2019 ರಂದು ಶ್ರೀಮಂಗಲ ಬಳಿಯ ಬಿರುನಾಣಿ ನಿವಾಸಿ ಕರ್ತಮಾಡ ಉತ್ತಪ್ಪ ಎಂಬವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ಉತ್ತಪ್ಪರವರು ದೀರ್ಘ ಕಾಲದಿಂದ ಹೃದಯ ಕಾಯಿಲೆಯಿಂದ ನರಳುತ್ತಿದ್ದು ವಾಸಿಯಾಗದ ಕಾರಣ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ವಿರಾಜಪೇಟೆ ಬಳಿಯ ಕೆದಮುಳ್ಳೂರು ನಿವಾಸಿ ಶಿವಣ್ಣ ಎಂಬವರು ದಿನಾಂಕ 07/06/2019ರಂದು ಮನೆಯಲ್ಲಿ ಜಗಳ ಮಾಡಿಕೊಂಡು ಮನೆಯಿಂದ ಹೋದವರು ಮರಳಿ ಬಾರದೆ ಇದ್ದು ದಿನಾಂಕ 13/06/2019ರಂದು ಶಿವಣ್ಣರವರ ಮೃತದೇಹವು ಸುಮ ನಾಣಯ್ಯ ಎಂಬವರ ಕಾಫಿ ತೋಟದಲ್ಲಿ ಕಾಫಿ ಗಿಡಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಶಿವಣ್ಣರವರು ಮನೆಯಲ್ಲಿ ಜಗಳವಾದ ವಿಷಯಕ್ಕೆ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಗಂಡಸು ಕಾಣೆ

ಮಡಿಕೇರಿ ಬಳಿಯ ಕಟ್ಟೆಮಾಡು ನಿವಾಸಿ ಬಿ.ಪಿ.ವಿಜಯ ಎಂಬವರು ಅವರು ಖರೀದಿಸಿ ಗೌಹಾಟಿಯಲ್ಲಿ ಬಿಟ್ಟು ಬಂದಿದ್ದ ಕಾರನ್ನು ಮರಳಿ ತರಲೆಂದು ದಿನಾಂಕ 13/03/2019ರಂದು ಗೌಹಾಟಿಗೆ ಹೋದವರು ಇದುವರೆಗೂ ಮರಳಿ ಬಂದಿರುವುದಿಲ್ಲವೆಂದು ಅವರ ಪತ್ನಿ ರಾಜೇಶ್ವರಿ ವಿಜಯ ಎಂಬವರು ದೂರು ನೀಡಿದ್ದು ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 13/06/2019ರಂದು ಬಾಡಗ ಬಾಣಂಗಾಲ ನಿವಾಸಿ ಕೆ.ಯು. ಮಹಮದ್ ಎಂಬವರು ಅವರ ಸ್ಕೂಟರಿನಲ್ಲಿ ಹುಂಡಿ ಕಡೆಗೆ ಹೋಗುತ್ತಿರುವಾಗ ಪಾಳಿಬೆಟ್ಟ ಕಡೆಯಿಂದ ಒಂದು ಖಾಸಗಿ ಬಸ್ಸನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮಹಮದ್‌ರವರ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಮಹಮದ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ;ಸಾವು

ದಿನಾಂಕ 13/06/2019ರಂದು ಭರತ್ ಎಂಬವರು ಮಡಿಕೇರಿಯಿಂದ ಗುಡ್ಡೆಹೊಸೂರಿಗೆ ಅವರ ಬೈಕಿನಲ್ಲಿ ಬರುತ್ತಿರುವಾಗ ಆನೆಕಾಡು ತಿರುವಿನ ಬಳಿ ಕೆಎ-41-ಎನ್-8151 ಕಾರನ್ನು ಅದರ ಚಾಲಕ ಹೃತಿಕ್ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಹೋಗಿ ಎದುರಿನಿಂದ ಬರುತ್ತಿದ್ದ ಕಾರೊಂದಕ್ಕೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದ ಸತೀಶ್‌ ಮತ್ತು ಜ್ಯೋತಿ ಎಂಬವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.