Crime News
ಹಲ್ಲೆ ಪ್ರಕರಣ
ದಿನಾಂಕ 10-06-2019 ರಂದು ಮಡಿಕೇರಿ ತಾಲೋಕಿನ ಸಣ್ಣಪುಲಿಕೋಟು ಗ್ರಾಮದ ನಿವಾಸಿಯಾದ ನಾಣಯ್ಯನವರಿಗೆ ಕುಶ ಎಂಬುವವರು ಹಳೇ ದ್ವೇಷದಿಂದ ಹಲ್ಲೆ ನಡೆಸಿದ್ದು, ಈ ಬಗ್ಗೆ ನಾಣಯ್ಯನವರು ದಿನಾಂಕ 14-06-2019 ರಂದು ನೀಡಿದ ದೂರಿನ ಮೇರೆಗೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕೊಲೆ ಪ್ರಕರಣ
ದಿನಾಂಕ 14-06-2019 ರಂದು ಬಾಳೆಲೆ ಗ್ರಾಮದ ನಿವಾಸಿಯಾದ ಆಶಾ ಕಾವೇರಮ್ಮ ಎಂಬುವವರನ್ನು ಪೊನ್ನಂಪೇಟೆಯ ತೊರೆಬೀದಿ ನಿವಾಸಿಯಾದ ಜಗದೀಶ ಎಂಬುವವರು ಹಳೇ ದ್ವೇಷದಿಂದ ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಿ ತಾನೂ ಸಹ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಅಕ್ರಮ ಮರಳು ಸಾಗಾಟ
ದಿನಾಂಕ 14-06-2019 ರಂದು ಶನಿವಾರಸಂತೆ ಪೊಲೀಸ್ ಠಾಣೆಯ ಉಪ ನಿರೀಕ್ಷಕರವರಿಗೆ ಬ್ಯಾಡಗೊಟ್ಟ ಗ್ರಾಮದಲ್ಲಿ ಸಂದೀಪ್ ಎಂಬುವವರು ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವುದಾಗಿ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ತೆರಳಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿಯನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.