Crime News

ರಸ್ತೆ ಅಪಘಾತ

ದಿನಾಂಕ 15/06/2019ರಂದು ಕುಶಾಲನಗರ ಬಳಿಯ ಗುಮ್ಮನಕೊಲ್ಲಿ ನಿವಾಸಿ ಲೋಕನಾಥ ಎಂಬವರು ಅವರ ಸ್ಕೂಟರಿನಲ್ಲಿ ಮೂರ್ನಾಡಿಗೆ ಹೋಗುತ್ತಿರುವಾಗ ಮೇಕೇರಿ ಬಳಿಯ ತಿರುವಿನಲ್ಲಿ ವಿರಾಜಪೇಟೆ ಕಡೆಯಿಂದ ಒಂದು ಬೈಕನ್ನು ಅದರ ಚಾಲಕ ದಿಲನ್ ದೇವಯ್ಯ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಲೋಕನಾಥರವರ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಲೋಕನಾಥರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಹಿಳೆ ಆತ್ಮಹತ್ಯೆ

ದಿನಾಂಕ 15/06/2019ರಂದು ಸಂಪಾಜೆ ಬಳಿಯ ಪೆರಾಜೆ ನಿವಾಸಿ ಶ್ರೀಮತಿ ಬಾಲಕಿ ಎಂಬ ಮಹಿಳೆಯು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತೆ ಬಾಲಕಿಯವರಿಗೆ ವಿಪರೀತ ಮಂಡಿ ನೋವು ಹಾಗೂ ಹೊಟ್ಟೆ ನೋವು ಇದ್ದು ಗುಣವಾಗದ ಕಾರಣ ಜುಗುಪ್ಸೆಗೊಂಡು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ 14/06/2019ರ ರಾತ್ರಿ ವೇಳೆ ಪೊನ್ನಂಪೇಟೆ ಬಳಿಯ ನಿಟ್ಟೂರು ನಿವಾಸಿ ಪಂಜರಿಎರವರ ಮನು ಎಂಬಾತನು ಮನೆಯ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ಮನು ವಿಪರೀತ ಮದ್ಯವ್ಯಸನಿಯಾಗಿದ್ದು ಯಾವುದೋ ಕಾರಣಕ್ಕೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 14/06/2019ರಂದು ಕುಶಾಲನಗರ ಬಳಿಯ ಕಣಿವೆ ನಿವಾಸಿ ಎ.ಟಿ.ರಂಗಣ್ಣ ಎಂಬವರು ಹಳೆ ಕೂಡಿಗೆಯಲ್ಲಿರುವ ಟೀ ಅಂಗಡಿಗೆ ಟೀ ಕುಡಿಯಲು ಹೋಗಿದ್ದಾಗ ಅಲ್ಲಿ ಕೆಲಸ ಮಾಡುತ್ತಿದ್ದ ಅವರ ಅಣ್ಣ ಶಿವರವರನ್ನು ಕಂಡು ಮನೆಗೆ ಹೋಗುವಂತೆ ತಿಳಿಸಿದಾಗ ಶಿವರವರು ಏಕಾ ಏಕಿ ದೊಣ್ಣೆಯಿಂದ ರಂಗಣ್ಣರವರ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 15/06/2019ರಂದು ಕುಶಾಲನಗರ ಬಳಿಯ ನಿಸರ್ಗಧಾಮದ ಬಳಿ ಸುರೇಶ ಎಂಬವರು ಅಕೆಲಸ ಮಾಡುತ್ತಿರುವಾಗ ಕೆಎ-19-ಎಫ್-2991 ರ ಕೆಎಸ್‌ಆರ್‌ಟಿಸಿ ಬಸ್ಸನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದ ಪರಿಣಾಮ ಅಲ್ಲಿ ಇಳಿಯ ಬೇಕಾಗಿದ್ದ ಕಾಳಮ್ಮ ಎಂಬವರು ಬಸ್ಸಿನ ನಿರ್ವಾಹಕ ಹನುಮಂತು ಎಂಬವರ ನಿರ್ಲಕ್ಷ್ಯತನದಿಂದ ಬಸ್ಸಿನಿಂದ ಕೆಳಗೆ ಬಿದ್ದು ಗಾಯಗಳಾಗಿರುವುದಾಗಿ ಸುರೇಶ್‌ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ; ಸಾವು

ದಿನಾಂಕ 15/06/2019ರಂದು ಪಾಲಿಬೆಟ್ಟ ನಿವಾಸಿ ಪಿ.ಎ.ಹಸೈನಾರ್‌ ಎಂಬವರ ತಮ್ಮ ಅಸ್ಕರ್ ಎಂಬವರ ಲಾರಿಯನ್ನು ಅದರ ಚಾಲಕ ಕೇರಳದ ಸಿ.ಎ.ಅಸ್ಕರ್ ಎಂಬವರು ವಾಲ್ನೂರು ತ್ಯಾಗತ್ತೂರು ಬಳಿ ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಲಾರಿ ರಸ್ತೆ ಪಕ್ಕದ ಬರೆಗೆ ಡಿಕ್ಕಿಯಾಗಿ ಲಾರಿಯ ಕ್ಲೀನರ್ ಶಾಫಿ ಎಂಬವರ ಎದೆ ಭಾಗಕ್ಕೆ ತೀವ್ರತರದ ಪೆಟ್ಟಾಗಿ ಶಾಫಿಯವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.