Crime news

ಅಕ್ರಮ ಮರ ಸಾಗಾಟ ಆರೋಪಿ ಬಂಧನ

ದಿನಾಂಕ 16-6-2019 ರಂದು ಬೆಳಗ್ಗೆ 4-00 ಗಂಟೆ ಸಮಯದಲ್ಲಿ ಕೊಡಗು ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸ್ ನಿರೀಕ್ಷಕರಾದ ನಾಗೇಶ್ ಹಾಗು ಸಿಬ್ಬಂದಿಗಳು ಗಸ್ತು ಕರ್ತವ್ಯದಲ್ಲಿದ್ದಾದ ಅವರಿಗೆ ಬಂದ ಮಾಹಿತಿ ಆದಾರದ ಮೇರೆಗೆ ವಿರಾಜಪೇಟೆ ತಾಲೋಕಿನ ನಾಲ್ಕೇರಿ ಬಾಡಗ ಗ್ರಾಮದಿಂದ ಕೆ.ಎಂ. ನೋಬನ್ ಹಾಗು ಇತರರು ಕಳ್ಳತನದಿಂದ ಮರಗಗಳನ್ನು ನಾಟಾಗಳನ್ನಾಗಿ ಮಾಡಿ ಅಕ್ರಮವಾಗಿ ಲಾರಿಯಲ್ಲಿ ತುಂಬಿಸಿ ಸಾಗಾಟ ಮಾಡುತ್ತಿದ್ದುದನ್ನು ಗೋಣಿಕೊಪ್ಪದ ಪೊನ್ನಂಪೇಟೆ ಜಂಕ್ಷನ್‍ನಲ್ಲಿ ಪತ್ತೆಹಚ್ಚಿ ಪರಿಶೀಲಿಸಿದಾಗ  ಲಾರಿಯಲ್ಲಿ ಮರದ ನಾಟಾಗಳನ್ನು ಅಕ್ರಮವಾಗಿ ತುಂಬಿಸಿ ನಾಟಾಗಳು ಕಾಣದಂತೆ ಮರದ ಪುಡಿಯನ್ನು ಚೀಲದಲ್ಲಿ ತುಂಬಿಸಿ ನಾಟಾಗಳ ಮೇಲೆ ಹಾಕಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು, ಲಾರಿಯಲ್ಲಿ 46 ಹಲಸು ಮತ್ತು ಹೆಬ್ಬಲಸಿನ ನಾಟಾಗಳು ಇರುವುದು ಕಂಡು ಬಂದಿದ್ದು ಸದರಿ ಲಾರಿಯನ್ನು ವಶಕ್ಕೆ ಪಡೆದು, ಸದರಿ ಮರಗಳನ್ನು ಸಾಗಾಟ ಮಾಡುತ್ತಿದ್ದ ಕೆ.ಎಂ. ನೋಬನ್‍ರವರನ್ನು ವಶಕ್ಕೆ ಪಡೆದು ಅವರ ಮನೆಯಲ್ಲಿ ಶೇಖರಿಸಿಟ್ಟಿದ್ದ ಸುಮಾರು 243 ಹಲಸು ಹಾಗು ಹೆಬ್ಬಲಸು ಮರದ ನಾಟಾಗಳನ್ನು ವಶಕ್ಕೆ ಪಡೆದು ಆರೋಪಿ ವಿರುದ್ಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

ವಶಕ್ಕೆ ಪಡೆದ ಆರೋಪಿಗಳ ವಿವರ:

  • ಕಳ್ಳಿಚಂಡ ಎಂ. ನೋಬನ್, ತಂದೆ ಲೇಟ್‍ ಮಂದಯ್ಯ, ಕೆ. ಬಾಡಗ ಗ್ರಾಮದ
  • ಪಿ.ಎಸ್. ರಾಜೇಂದ್ರ @ ರಾಜ, ತಂದೆ ಲೇಟ್‍ ಸುಕುಮಾರ್‍ ಪಿಳ್ಳೆ, ಚಾಲಕ ವೃತ್ತ, ಗೋಣಿಕೊಪ್ಪ
  • ಎಂ.ಬಿ. ದಾವೋದ್, , ತಂದೆ ಬಾಬಾ ಸಾಬ್, ಚಾಲಕ ವೃತ್ತಿ, ಚೆನ್ನಂಗೊಲ್ಲಿ ಗ್ರಾಮ
  • ಪಿ.ಎಸ್. ಅಯ್ಯಪ್ಪ, ತಂದೆ ಸೋಮ, ಕೂಲಿ ಕೆಲಸ, ಕೆ.ಎಂ. ನೋಬನ್‍ ರವರ ಲೈನು ಮನೆ, ಕೆ. ಬಾಡಗ ಗ್ರಾಮ.

ವಶಕ್ಕೆ ಪಡೆದ ಸ್ವತ್ತಗಳು:

  • 222 ಹಲಸು ಮತ್ತು ಹೆಬ್ಬಲಸು ಮರದ ನಾಟಗಳು
  • 39 ಬೀಟಿ ಮರದ ನಾಟಗಳು
  • 24 ಬೀಟಿ ಮರದ ತುಂಡುಗಳು
  • 4 ತೇಗದ ಮರದ ದಿಮ್ಮಿಗಳು
  • ಒಂದು ಲಾರಿ, ಒಂದು ಸ್ವರಾಜ್ ಮಜ್ದ್ ಲಾರಿ, ಒಂದು ಬೊಲೆರೋ ಜೀಪು ಮತ್ತು ಒಂದು ಕ್ರೈನ್

          ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಸುಮನ್ ಡಿ.ಪಿ. ಐಪಿಎಸ್‍ ರವರ ಮಾರ್ಗದರ್ಶನದಲ್ಲಿ ಜಿಲ್ಲಾ  ಅಪರಾಧ ವಿಭಾಗದ  ಇನ್ಸ್‍ಪೆಕ್ಟರ್‍ ಕೆ. ನಾಗೇಶರವರು ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿದ್ದು  ಕಾರ್ಯಾಚರಣೆಯಲ್ಲಿ ವಿರಾಜಪೇಟೆ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರು ಹಾಗು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.         

ಕಾರುಗಳ ನಡುವೆ ಅಪಘಾತ:

ದಿನಾಂಕ 16-6-2019 ರಂದು ಸಮಯ 3-15 ಪಿ.ಎಂ.ಗೆ ವಿರಾಜಪೇಟೆಯ ಚಿಕ್ಕಪೇಟೆಯ ಮಠದ ಗದ್ದೆಯ ಸಮೀಪ ಮುಖ್ಯ ರಸ್ತೆಯಲ್ಲಿ ವಿರಾಜಪೇಟೆ ತಾಲೋಕು ದೇವನೂರು ಗ್ರಾಮದ ಸಿ.ಬಿ. ದಿನೇಶ್ ಎಂಬವರು ತಮ್ಮ ಕಾರಿನಲ್ಲಿ ವಿರಾಜಪೇಟೆ ಕಡೆಗೆ ಹೋಗುತ್ತಿದ್ದಾಗ  ವಿರಾಜಪೇಟೆ ಕಡೆಯಿಂದ ಕೆಎ-03-ಎಂ.ಕ್ಯೂ-7008ರ ಆಲ್ಟೋ ಕಾರನ್ನು ಅದರ ಚಾಲಕ ಪಿ.ಯು. ಸೋಮಯ್ಯ ಎಂಬವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದಿನೇಶ್‍ರವರು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಚಾಲಕ ಸಿ.ಬಿ. ದಿನೇಶ್ ರವರಿಗೆ ಗಾಯಗಳಾಗಿ ಕಾರು ಜಖಂ ಗೊಂಡಿದ್ದು ಈ ಸಂಬಂಧ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.