Crime News

ಅತಿಕ್ರಮ ಪ್ರವೇಶ ; ಬೆದರಿಕೆ

ಮಡಿಕೇರಿ ನಗರದ ಕನ್ನಂಡ ಬಾಣೆ ನಿವಾಸಿ ಕೆ.ಕೆ. ವಿಜಯ ಎಂಬವರು ಮಡಿಕೇರಿಯ ಕಾವೇರಿ ಹಾಲ್ ಬಳಿಯ ಪಾಟರಿ ರಸ್ತೆಯಲ್ಲಿರುವ ಕಾವೇರಿ ಗ್ರೂಪ್ ಆಫ್ ಕಂಪನಿಯ ಕಚೇರಿಗೆ ಅತಿಕ್ರಮ ಪ್ರವೇಶ ಮಾಡಿ ಕಂಪೆನಿಯ ಕೆಲಸಗಳಿಗೆ ಅಡ್ಡಿಪಡಿಸುತ್ತಿರುವುದಲ್ಲದೆ ದಿನಾಂಕ 06/06/2019ರಂದು ಕಂಪೆನಿಯ ಮಾಲೀಕರಾದ ಪೊನ್ನಚೆಟ್ಟಿರ ದೇಚಮ್ಮ ಎಂಬವರಿಗೆ ಜೀವ ಬೆದರಿಕೆಯನ್ನು ಹಾಕಿರುವುದಾಗಿ ಸಂಸ್ಥೆಯ ಉದ್ಯೋಗಿ ಕಾರ್ಯಪ್ಪ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 17/06/2019ರಂದು ಕೆದಕಲ್ ಬಳಿಯ ಏಳನೇ ಮೈಲು ನಿವಾಸಿ ಬಿ.ಜಿ.ಪುನೀತ್‌ ಎಂಬವರು ಅವರ ಸ್ನೇಹಿತ ಕೌಶಿಕ್ ರೈ ಎಂಬವರೊಡನೆ ಬೈಕಿನಲ್ಲಿ ಸುಂಟಿಕೊಪ್ಪದಿಂದ ಬೋಯಿಕೇರಿ ಕಡೆಗೆ ಬರುತ್ತಿರುವಾಗ ಬೋಯಿಕೇರಿ ಶಾಲೆಯ ಬಳಿಯ ತಿರುವಿನಲ್ಲಿ ರಸ್ತೆ ಬದಿ ನಿಲ್ಲಿಸಿದ ಕಾರನ್ನು ಅದರ ಚಾಲಕ ಅರುಣ್ ಶರ್ಮ ಎಂಬವರು ಯಾವುದೇ ಮುನ್ಸೂಚನೆ ನೀಡದೆ ಏಕಾ ಏಕಿ ರಸ್ತೆಯ ಬಲ ಬದಿಗೆ ತಿರುಗಿಸಿ ಚಾಲಿಸಿದ ಕಾರಣ ಕಾರು ಬೈಕಿಗೆ ಡಿಕ್ಕಿಯಾಗಿ ಬೈಕಿನಲ್ಲಿದ್ದ ಪುನೀತ್ ಹಾಗೂ ಕೌಶಿಕ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಜೂಜಾಟ

ದಿನಾಂಕ 17/06/2019ರಂದು ಸಿದ್ದಾಪುರ ಬಳಿಯ ಚೆನ್ನಂಗಿ ಗ್ರಾಮದ ಚಿಕ್ಕ ರೇಷ್ಮೆ ಮೀಸಲು ಅರಣ್ಯದೊಳಗೆ ಕೆಲವರು ಅಕ್ರಮವಾಗಿ ಜೂಜಾಡುತ್ತಿರುವುದಾಗಿ ದೊರೆತ ಮಾಹಿತಿಯ ಮೇರೆಗೆ ಸಿದ್ದಾಪುರ ಠಾಣೆಯ ಪಿಎಸ್‌ಐ ವಿ.ವಿ.ದಯಾನಂದರವರು ಸಿಬ್ಬಂದಿಗಳೊಂದಿಗೆ  ಸ್ಥಳಕ್ಕೆ ತೆರಳಿ ಅಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ ಗೂಡ್ಲೂರು ಗ್ರಾಮದ ಬಿ.ಕುಮಾರ್ ಮತ್ತು ಇತರೆ ಆರು ಜನರನ್ನು ಬಂಧಿಸಿ ಜೂಜಾಡಲು ಉಪಯೋಗಿಸಿದ ಇಸ್ಪೀಟೆಲೆಗಳು ಮತ್ತು ರೂ. 3,500/- ಹಣವನ್ನು ವಶಪಡಿಸಿಕೊಂಡು ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಜೂಜಾಟ ಪತ್ತೆ

ದಿನಾಂಕ 17/06/2019ರಂದು ಸೋಮವಾರಪೇಟೆ ಬಳಿಯ ತಣ್ಣೀರುಹಳ್ಳ ಗ್ರಾಮದ ಬಳಿ ಕೆಲವರು ಅಕ್ರಮವಾಗಿ ಜೂಜಾಡುತ್ತಿರುವುದಾಗಿ ದೊರೆತ ಮಾಹಿತಿಯ ಮೇರೆಗೆ ಸೋಮವಾರಪೇಟೆ ಠಾಣೆಯ ಪಿಎಸ್‌ಐ ಶಿವಶಂಕರ್ ರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಅಲ್ಲಿ ತಣ್ಣೀರು ಹಳ್ಳದ ಸಂದೀಪ್ ಹಾಗೂ ಇತರೆ ಏಳು ಜನರು ಅಕ್ರಮವಾಗಿ ಜೂಜಾಡುತ್ತಿದ್ದುದನ್ನು ಪತ್ತೆ ಹಚ್ಚಿ ಅವರನ್ನು ಬಂಧಿಸಿ ಜೂಜಾಡಲು ಉಪಯೋಗಿಸಿದ್ದ ರೂ.1420/- ಹಣ, ಹಾಗೂ ವಾಹನಗಳನ್ನು ವಶಪಡಿಸಿಕೊಂಡು ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 17/06/2019ರಂದು ಸೋಮವಾರಪೇಟೆ ಬಳಿಯ ಯಡವನಾಡು ನಿವಾಸಿ ಕೆ.ಕೆ.ವಾಸುದೇವ ಎಂಬವರು ಅವರ ಮಾರುತಿ ವ್ಯಾನಿನಲ್ಲಿ ಕುಶಾಲನಗರದ ಆಂಜನೇಯ ದೇವಸ್ಥಾನ ಕಡೆಯಿಂದ ಮಾರುಕಟ್ಟೆಗೆ ಹೋಗುತ್ತಿರುವಾಗ ವಿನಾಯಕ ಹಾರ್ಡ್‌ವೇರ್ ಮುಂಭಾಗ ಎದುರಿನಿಂದ ಕೆಎ-55-ಎಂ-6458ರ ಮಾರುತಿ ವ್ಯಾನನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ವಾಸುದೇವರವರ ವ್ಯಾನಿಗೆ ಡಿಕ್ಕಿಪಡಿಸಿದ ಪರಿಣಾಮ ವಾಸುದೇವರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ 17/06/2019ರಂದು ವಿರಾಜಪೇಟೆ ಬಳಿಯ ಆರ್ಜಿ ಗ್ರಾಮದ ತೆರ್ಮೆಕಾಡು ನಿವಾಸಿ ಪಣಿ ಎರವರ ಚುಂಡ ಎಂಬವರು ಮನೆಯ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಮೃತ ಚುಂಡ ಮಾನಸಿಕ ಅಸ್ವಸ್ಥನಾಗಿದ್ದು ಈ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.