Crime News

ಅಪಘಾತದಿಂದ ಗಾಯಗೊಂಡಿದ್ದ ವ್ಯಕ್ತಿಯ ಸಾವು

          ದಿನಾಂಕ 25-05-2019 ರಂದು ವಿರಾಜಪೇಟೆ ನಗರದ ಚಿಕ್ಕ ಪೇಟೆಯ ನಿವಾಸಿಯಾದ ಶಿವನಾಯಕ ಎಂಬುವವರು ತನ್ನ ಪತ್ನಿ ಮಕ್ಕಳೊಂದಿಗೆ ಗೂಡ್ಸ್ ಆಟೋ ರಿಕ್ಷಾದಲ್ಲಿ ಹುಣಸೂರುವಿಗೆ ಹೋಗುತ್ತಿರುವಾಗ ತಿತಿಮತಿ ಎಂಬಲ್ಲಿಗೆ ತಲುಪುವಾಗ ರಿಕ್ಷಾವನ್ನು ಅದರ ಚಾಲಕ ಶಿವನಾಯಕರವರು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಆಟೋ ರಿಕ್ಷಾ ಮಗುಚಿ ಬಿದ್ದು ಶಿವನಾಯಕರವರಿಗೆ ತೀವೃ ತರಹದ ಗಾಯಗಳಾಗಿದ್ದು, ಈ ಬಗ್ಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಗಾಯಗೊಂಡ ಶಿವನಾಯಕರವರು ಮಂಗಳೂರಿನ ಫಾದರ್ ಮುಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ದಿನಾಂಕ 18-06-2019 ರಂದು ಮೃತಪಟ್ಟಿರುತ್ತಾರೆ.

ಅಪಘಾತ ಪ್ರಕರಣ

           ಕೇರಳ ರಾಜ್ಯದ ಕೋಯಿಕೋಡುವಿನವರಾದ ನಹೀಂ, ಜೈಸಲ್, ಬಷೀರ್ ಮತ್ತು ಜಾಬೀರ್ ರವರು ದಿನಾಂಕ 08-06-2019 ರಂದು ಮಡಿಕೇರಿಗೆ ಪ್ರವಾಸಕ್ಕೆಂದು ಬಂದವರು ದಿನಾಂಕ 09-06-2019 ರಂದು ವಾಪಾಸ್ಸು ಹೋಗುತ್ತಿರುವಾಗ ಹಾಕತ್ತೂರು ಎಂಬಲ್ಲಿಗೆ ತಲುಪುವಾಗ ಎದುರಿನಿಂದ ಬಂದ ಮಾರುತಿ 800 ಕಾರನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ಎರಡೂ ಕಾರುಗಳು ಜಖಂಗೊಂಡು ಮಾರುತಿ 800 ಕಾರಿನ ಚಾಲಕ ಅಪ್ಪಯ್ಯವರಿಗೆ ಗಾಯಗಳಾಗಿದ್ದು, ಈ ಬಗ್ಗೆ ಮೊಹಮ್ಮದ್ ಫಯಾಜ್ ರವರು ದಿನಾಂಕ 18-06-2019 ರಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

           ಹಾಸನ ಜಿಲ್ಲೆಯ ಅರಕಲಗೋಡುವಿನ ನಿವಾಸಿಯಾದ ನಾಣಯ್ಯ ಎಂಬುವವರು ದಿನಾಂಕ 18-06-2019 ರಂದು ಮೋಟಾರು ಸೈಕಲಿನಲ್ಲಿ ಬಾಳುಗೋಡು ಎಂಬಲ್ಲಿ ಹೋಗುತ್ತಿರುವಾಗ ಎದುರಿನಿಂದ ಬಂದ ಕಾರನ್ನು ಅದರ ಚಾಲಕ ಕಾರ್ತಿಕ್ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ನಾಣಯ್ಯನವರಿಗೆ ಗಾಯಗಳಾಗಿದ್ದು, ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.