Crime News

ಪ್ರಕೃತಿ ವಿಕೋಪ- ಪ್ರಥಮ ಚಿಕಿತ್ಸಾ ಕಾರ್ಯಾಗಾರ:

ಕೊಡಗು ಜಿಲ್ಲಾ ಪೊಲೀಸ್ ಹಾಗು ಜಿಲ್ಲಾಡಳಿತದ ವತಿಯಿಂದ ಪ್ರಕೃತಿ ವಿಕೋಪ ನಿರ್ವಹಣಾ ತಂಡದ ಸದಸ್ಯರುಗಳಿಗೆ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ರಕ್ಷಿಸಲಾಗುವ ಗಾಯಾಳುಗಳಿಗೆ ಹಾಗೂ ಸಂತ್ರಸ್ತರಿಗೆ ಪ್ರಥಮ ಚಿಕಿತ್ಸೆಯನ್ನು ನೀಡುವ ಬಗ್ಗೆ ಕಾರ್ಯಾಗಾರವನ್ನು ಜಿಲ್ಲಾ ಪೊಲೀಸ್ ಕಚೇರಿಯ ಆವರಣದ  ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.  ಈ ಕಾರ್ಯಾಗಾರದಲ್ಲಿ ಯುನಿಸೆಫ್ ಸಲಹೆಗಾರರಾದ ಶ್ರೀ ಪ್ರಭಾತ್‍ ರವರು ಪ್ರಥಮ ಚಿಕಿತ್ಸೆಯ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಉಪನ್ಯಾಸವನ್ನು ನೀಡಿದರು.  

ಹಾಗೂ ಮಡಿಕೇರಿಯ ಮೆಡಿಕಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಶಿವರಾಜು ಮತ್ತು ಡಾ.ನರಸಿಂಹ ಮತ್ತು ಯುನಿಸೆಫ್‍ನ ಮತ್ತೋರ್ವ ಸಲಹೆಗಾರ ಮನೋಹರ್ ಮುಂತಾದವರು ವಿವಿಧ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಕಾರ್ಯಾಗಾರದಲ್ಲಿ ಜಿಲ್ಲಾ ಪೊಲೀಸ್ ಘಟಕದ ಸುಮಾರು 80 ಪೊಲೀಸ್‍ ಅಧಿಕಾರಿ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.  

ವಿನಾಕಾರಣ ವ್ಯಕ್ತಿ ಮೇಲೆ ಹಲ್ಲೆ:

ಸೋಮವಾರಪೇಟೆ ತಾಲೋಕು ಕೋಣಿಗನಹಳ್ಳಿ ಗ್ರಾಮದ  ವನಿತ್ ಕುಮಾರ್ ಎಂಬವರು ದಿನಾಂಕ 18-6-2019 ರಂದು ಸಂಜೆ 7-30 ಗಂಟೆಗೆ ಬೆಸೂರು ಗ್ರಾಮದ ಅಂಗನವಾಡಿಯ ಬಳಿ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮಲ್ಲಿಪಟ್ಟಣದವರಾದ ಗಣೇಶ ಮತ್ತು ಆತನ ಸ್ನೇಹಿತ ಮೋಟಾರು ಸೈಕಲಿನಲ್ಲಿ ವೇಗವಾಗಿ ಬಂದು ವನಿತ್ ಕುಮಾರ್‍ರವರು ನಡೆದುಕೊಂಡು ಹೋಗುತ್ತಿದ್ದಾಗ ಹತ್ತಿರ ಬಂದು ನಿಲ್ಲಿಸಿ ಇದನ್ನು ವಿಚಾರಸಿದ ಕಾರಣಕ್ಕೆ ಸದರಿ ಗಣೇಶ ಹಾಗು ಸ್ನೇಹಿತ ಸೇರಿ ವನಿತ್ ಕುಮಾರ್‍ರವರ ಮೇಲೆ ಹಲ್ಲೆ ನಡೆಸಿದ್ದಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಳೆದುಹೋದ ಚೆಕ್‍ಗಳ ಮೂಲಕ ವಂಚನೆಗೆ ಯತ್ನ:

ಶನಿವಾರಸಂತೆ ಠಾಣಾ ಸರಹದ್ದಿನ ಚಿಕ್ಕತೊಳೂರು ಗ್ರಾಮದ ನಿವಾಸಿ ಹೆಚ್‍.ಪಿ. ಸ್ವಾಗತ್ ಎಂಬವರು ದಿನಾಂಕ 15-5-2019 ರಂದು ಸ್ಕೂಟರಿನಲ್ಲಿ ಹೋಗುತ್ತಿದ್ದಾಗ 3 ಚೆಕ್ ಲೀಪ್ ಹಾಗು 2000 ರೂ. ಇರುವ ಪರ್ಸ್‍ಕಳೆದುಕೊಂಡಿದ್ದು, ಸದರಿ ಚೆಕ್‍ ಲೀಗಳು ಬಿ.ಡಿ. ಶಶಿಧರ್‍ ಎಂಬವರಿಗೆ ಸಿಕ್ಕಿದ್ದು, ಸದರಿಯವರು ಹೆಚ್‍.ಪಿ.ಸ್ವಾಗತ್‍ ರವರಿಂದ ಹಣ ಪಡೆದು ವಂಚಿಸಿವ ಉದ್ದೇಶದಿಂದ  2 ಲಕ್ಷ ಹಣ ಹೆಚ್‍.ಪಿ. ಸ್ವಾಗತ್‍ರವರಿಂದ ಬರಬೇಕೆಂದು ಸುಳ್ಳು ನೋಟಿಸನ್ನು ಲಾಯರ್‍ ಮೂಲಕ ನೀಡಿದ್ದು ಅಲ್ಲದೆ ನ್ಯಾಯಾಲಯದಲ್ಲಿ ಸುಳ್ಳು ಪ್ರಕರಣ ದಾಖಲಿಸಿದ್ದು, ಈ ಸಂಬಂಧ ಹೆಚ್‍.ಪಿ. ಸ್ವಾಗತ್‍ರವರು ಪೊಲೀಸ್‍ ದೂರನ್ನು ನೀಡಿದ ಕಾರಣಕ್ಕೆ ಸದರಿ ಶಶಿಧರ್‍ರವರು ಸ್ವಾಗತ್‍ರವರ ಮನೆಗೆ ಹೋಗಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪೈನಾನ್ಸ್ ಸಾಲ ಪಡೆದು ವಂಚನೆ:

ಕುಶಾಲನಗರದಲ್ಲಿರುವ ಕನಕದುರ್ಗಾ ಪೈನಾನ್ಸ್ ಲಿ. ನಿಂದ ಸಿ.ಎನ್‍. ವಿಕ್ರಮ್, ಸುಬ್ರಮಣಿ, ಶಶಿಕುಮಾರ್‍  ಗೌತಮ್ ಹಾಗು ಆಟೋ ಇನ್ಸ್‍ಪೆಕ್ಟ್  ಮಹೀಂದ್ರ ಫಸ್ಟ್  ಚಾಯಿಸ್ ಮಿಲ್ಸ್ ಲಿ.ನ ಎಕ್ಸಿಕ್ಯೂಟಿವ್‍ ರವರು ಸೇರಿ ಈಚರ್‍ ಟಿಪ್ಪರ್‍ ಲಾರಿಯ ಮೇಲೆ 10,00,000/- ರೂ. ಗಳನ್ನು ಸಾಲವಾಗಿ ಪಡೆದು ಸದರಿ ಹಣವನ್ನು ಪೈನಾನ್ಸ್‍ಗೆ ಪಾವತಿಸದೇ ವಂಚಿಸಿದ್ದು, ಅಲ್ಲದೆ ಸದರಿ ವಾಹನವು ಅಕ್ರಮವಾಗಿ ಮರಳು ಸಾಗಾಟ ಪ್ರಕರಣದಲ್ಲಿ ಭಾಗಿಯಾಗಿದ್ದ  ಪ್ರಕರಣ ಇರುವುದು ತಡವಾಗಿ ಗೊತ್ತಾಗಿದ್ದು,  ಈ ರೀತಿ ವಂಚಿಸಿದ ಆರೋಪಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬಸ್‍ನಿಂದ ಬಿದ್ದು ಮಹಿಳೆ ಸಾವು:

ದಿನಾಂಕ 15-5-2019 ರಂದು ಕುಶಾಲನಗರ ಕಡೆಯಿಂದ ಬರುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಬೈಲುಕೊಪ್ಪ ನಿವಾಸಿ ಶ್ರೀಮತಿ ಕಾಳಮ್ಮ ಎಂಬವರು ಪ್ರಯಾಣಿಸುತ್ತಿದ್ದು  ಕುಶಾಲನಗರದ ನಿಸರ್ಗಧಾಮ ಬಳಿ ಬಸ್ಸಿನ ಹಿಂದಿನ ಆಸನದಲ್ಲಿ ಕುಳಿತ್ತಿದ್ದ ಕಾಳಮ್ಮನವರು ಬಸ್ಸಿನಿಂದ ಹೊರಗಡೆ ಬಿದ್ದು ತೀವ್ರವಾಗಿ ಗಾಯಗೊಂಡು ಸದರಿಯವರನ್ನು ಚಿಕಿತ್ಸೆಗೆ ಮಡಿಕೇರಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿ, ಚಿಕಿತ್ಸೆ ಫಲಕಾರಿಯಾಗದೆ ಸದರಿ ಕಾಳಮ್ಮನವರು ದಿನಾಂಕ 18-6-2019 ರಂದು ಮೃತಪಟ್ಟಿದ್ದು, ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೈನ್ ಶಾಫ್‍ಗೆ ನುಗ್ಗಿ ಕಳ್ಳತನಕ್ಕೆ ಯತ್ನ:

ವಿರಾಜಪೇಟೆ ನಗರದಲ್ಲಿರುವ ಕೊಡಗು ರಿಟೇಲ್  ವೈನ್ ಶಾಪ್ ನಲ್ಲಿ ವೆಂಡರ್ ಕೆಲಸ ಮಾಡಿಕೊಂಡಿರುವ ಜಿ.ಎಸ್. ಮಂಜುನಾಥ ಎಂಬವರು  ಎಂದಿನಂತೆ ದಿನಾಂಕ 18-6-2019 ರಂದು ಸಮಯ ರಾತ್ರಿ 10-30 ಗಂಟೆಗೆ ಅಂಗಡಿಯನ್ನು ಮುಚ್ಚಿ ಮನೆಗೆ ತೆರಳಿದ್ದು, ದಿನಾಂಕ 19-6-2019 ರಂದು ಸಮಯ ಬೆಳಿಗ್ಗೆ 9-00 ಗಂಟೆಗೆ ಅಂಗಡಿಯನ್ನು ತೆರೆಯಲು ಬಂದಾಗ  ಅಂಗಡಿಯ ಬೀಗವು ಒಡೆದು ಒಳಗೆ ಪ್ರವೇಶ ಮಾಡಿ ಕಳ್ಳತನಕ್ಕೆ ಯತ್ನಿಸಿದ್ದು, ಈ ಸಂಬಂಧ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರಸ್ಪರ ಬೈಕ್‍ಗಳ ಡಿಕ್ಕಿ:

ದಿನಾಂಕ 19-6-2019 ರಂದು ಕೆ.ಎಂ. ತಿಮ್ಮಯ್ಯ ಎಂಬವರು ತಮ್ಮ ಬಾಪ್ತು ಮೋಟಾರು ಸೈಕಲಿನಲ್ಲಿ ವಿರಾಜಪೇಟೆ ಕಡೆಗೆ ಹೋಗುತ್ತಿದ್ದಾಗ  ಮುರ್ನಾಡು ನಗರದ ಭಾರತ್‍ ಗ್ಯಾಸ್‍ಬಳಿ  ರಸ್ತೆಯಲ್ಲಿ ವಿರಾಜಪೇಟೆ ಕಡೆಯಿಂದ ಬಂದ ಮೋಟಾರ್‍ ಸೈಕಲಿನ ಸವಾರ ಸದರಿ ಮೋಟಾರ್‍ ಸೈಕಲನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕೆ.ಎಂ. ತಿಮ್ಮಯ್ಯನವರು ಚಾಲನೆ ಮಾಡುತ್ತಿದ್ದ ಮೋಟಾರ್‍ ಸೈಕಲಿಗೆ ಡಿಕ್ಕಿಪಡಿಸಿದ ಪರಿಣಾಮ ಸದರಿ ತಿಮ್ಮಯ್ಯನವರು ಗಾಯಗೊಂಡು ಮೋಟಾರ್‍ ಸೈಕಲ್‍ ಜಖಂ ಗೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.