Crime News

ಅಂತರ ರಾಷ್ಟ್ರೀಯ ಯೋಗ ದಿನಾಚರಣೆ

ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಜಿಲ್ಲೆಯ ಎಲ್ಲಾ ಪೊಲೀಸ್‌ ಠಾಣೆಗಳಲ್ಲಿ ಇಂದು ಯೋಗ ದಿನವನ್ನು ಆಚರಿಸಲಾಯಿತು. ಜಿಲ್ಲೆಯ ಎಲ್ಲಾ ಪೊಲೀಸ್‌ ಠಾಣೆಗಳ ಸಿಬ್ಬಂದಿಗಳು ಇಂದು ದಿನಾಂಕ 21/06/2019ರಂದು ಬೆಳಗ್ಗೆ ಆಯಾ ಠಾಣಾ ವ್ಯಾಪ್ತಿಯಲ್ಲಿ ಸಮಾರಂಭಗಳನ್ನು ಆಯೋಜಿಸಿ ಸ್ಥಳೀಯ ಯೋಗಾಭ್ಯಾಸಿಗಳಿಂದ ಯೋಗಾಸನವನ್ನು ಅಭ್ಯಸಿಸುವ ಮೂಲಕ ಯೋಗ ದಿನಾಚರಣೆಯನ್ನು ಆಚರಿಸಿದರು.  

ಅಪಘಾತ ಗಾಯಾಳು ಸಾವು

ದಿನಾಂಕ 17/06/2019ರಂದು ಮಡಿಕೇರಿ ಬಳಿಯ ಇಬ್ನಿವಳವಾಡಿ ಗ್ರಾಮದ ಬೋಯೀಕೇರಿ ಶಾಲೆಯ ಬಳಿ ಬೈಕ್‌ ಒಂದಕ್ಕೆ ಕಾರು ಡಿಕ್ಕಿಯಾದ ಪ್ರಕರಣದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೋಯಿಕೇರಿ ನಿವಾಸಿ ಕೌಶಿಕ್ ರೈ ಎಂಬವರು ಮಂಗಳೂರಿನ ಯೆನಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 19/06/2019ರಂದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 20/06/2019ರಂದು ಸಿದ್ದಾಪುರ ಬಳಿಯ ಚೆನ್ನಂಗಿ ಗ್ರಾಮದ ದಿಡ್ಡಳ್ಳಿ ನಿವಾಸಿ ಜೆ.ಪಿ.ಪ್ರಕಾಶ ಎಂಬವರು ತೋಟದಲ್ಲಿ ಕೆಲಸ ಮಾಡಿಕೊಂಡಿರುವಾಗ ಹಿಂದಿನಿಂದ ಯಾರೋ ಅಪರಿಚಿತ ವ್ಯಕ್ತಿಯು ಏಕಾ ಏಕಿ ಕತ್ತಿಯಿಂದ ಕಡಿದು ಹಲ್ಲೆ ಮಾಡಿದ್ದು ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕಿಗೆ ಜೀಪು ಡಿಕ್ಕಿ

ದಿನಾಂಕ 12/06/2019ರಂದು ಸೋಮವಾರಪೇಟೆ ಬಳಿಯ ಮಸಗೋಡು ನಿವಾಸಿ ಎಂ.ಜೆ.ಬೋಪಯ್ಯ ಎಂಬವರು ಅವರ ಬೈಕನ್ನು ನಗರದ ಜೂನಿಯರ್ ಕಾಲೇಜು ಸಮೀಪದ ಜಾರ್ಜ್‌ ಎಂಬವರ ಮನೆಯ ಬಳಿ ನಿಲ್ಲಿಸಿದ್ದು ಆ ಬೈಕಿಗೆ ಕೆಎ-13-ಬಿ-4292 ಪಿಕ್‌ ಅಪ್ ಜೀಪನ್ನು ಅದರ ಚಾಲಕ ನಿರ್ಲಕ್ಷ್ಯತೆಯಿಂದ ಚಾಲಿಸಿ ಡಿಕ್ಕಿಪಡಿಸಿದ ಪರಿಣಾಮ ಬೈಕಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 20/06/2019ರಂದು ಸೋಮವಾರಪೇಟೆ ಬಳಿಯ ಹಾನಗಲ್ಲು ನಿವಾಸಿ ಜೆ.ಎಸ್.ಜೋಯಪ್ಪ ಎಂಬವರು ಅವರ ಕಾರಿನಲ್ಲಿ ಕುಶಾಲನಗರದ ಬ್ಲೂಮೂನ್ ಪೆಟ್ರೋಲ್ ಬಂಕಿನಲ್ಲಿ ಕಾರಿಗೆ ಪೆಟ್ರೋಲ್ ಹಾಕಿಸಲೆಂದು ಕಾರನ್ನು ಬಭಕಿನ ಕಡೆಗೆ ತಿರುಗಿಸುತ್ತಿರುವಾಘ ಎದುರಿನಿಂದ ಮಲ್ಲಿನಾಥಪುರದ ಮೋಹನ್ ಕುಮಾರ್ ಎಂಬವರು ಅವರ ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಜೋಯಪ್ಪನವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಅವರಿಗೆ ಗಾಯಗಳಾಗಿ ಕಾರಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮರ ಕಳವು ಪ್ರಕರಣ

ಪೊನ್ನಂಪೇಟೆ ಬಳಿಯ ಬಾಳೆಲೆ ಭದ್ರಗೊಳ ಗ್ರಾಮದ ನಿವಾಸಿ ಲೀನಾ ಮಂದಣ್ಣ ಎಂಬವರು ಅವರ ಬೈರಮುಂಡ ಗ್ರಾಮದಲ್ಲಿನ ತೊಟದಲ್ಲಿನ ಸಿಲ್ವರ ಓಕ್ ಮರಗಳನ್ನು ಕುಟ್ಟ ಬಳಿಯ ನಾಲ್ಕೇರಿ ನಿವಾಸಿ ಕಳ್ಳಿಚಂಡ ನೋಬನ್ ಮತ್ತು ಆಧಾರ್ ತೇಜ ಎಂಬವರಿಗೆ ಮೇ ತಿಂಗಳಿನಲ್ಲಿ ಗುತ್ತಿಗೆಗೆ ಕೊಟ್ಟಿದ್ದು ಕಳ್ಳಿಚಂಡ ನೋಬನ್ ಮತ್ತು ಆಧಾರ್‌ ತೇಜರವರು ಸಿಲ್ವರ್ ಓಕ್ ಮರಗಳನ್ನು ಕಡಿದುಕೊಂಡು ಹೋಗುವಾಗ ಲೀನಾ ಮಂದಣ್ಣರವರ ಅರಿವಿಗೆ ಬಾರದಂತೆ ತೋಟದಲ್ಲಿದ್ದ ಸುಮಾರು ರೂ.1,50,000/- ಬೆಲೆ ಬಾಳುವ ಬೀಟೆ ಮರಗಳನ್ನೂ ಸಹಾ ಕಳವು ಮಾಡಿ ಕಡಿದು ಸಾಗಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.