Crime News

ಹಲ್ಲೆ ಪ್ರಕರಣ

           ದಿನಾಂಕ 22-06-2019 ರಂದು ಮಡಿಕೇರಿ ತಾಲೋಕಿನ ಚೇಲವಾರ ಗ್ರಾಮದ ನಿವಾಸಿಯಾದ ರಾಮು ಮತ್ತು ರಂಗರವರೊಂದಿಗೆ ರೇಖರವರು ಜಗಳ ಮಾಡಿ ಹಲ್ಲೆ ನಡೆಸಿದ್ದು ಈ ಬಗ್ಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಆತ್ಮಹತ್ಯೆ

       ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ತಾಲೋಕಿನ ಹೆರವನಾಡು ಗ್ರಾಮದಲ್ಲಿ ವರದಿಯಾಗಿದೆ. ಹೆರವನಾಡು ಗ್ರಾಮದ ರಾಜ ಎಂಬುವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 22-06-2019 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮರದಿಂದ ಬಿದ್ದು ವ್ಯಕ್ತಿಯ ಸಾವು

        ದಿನಾಂಕ 21-06-2019 ರಂದು ವಿರಾಜಪೇಟೆ ತಾಲೋಕಿನ ತೋರ ಗ್ರಾಮದ ನಿವಾಸಿಯಾದ ಜೇನುಕುರುಬರ ರವಿ ಎಂಬುವವರು  ಮರಹತ್ತಿ ಸೌದೆ ಕಡಿಯುತ್ತಿರುವಾಗ ಮರದ ಕೊಂಬೆ ತಾಗಿ ಬಿದ್ದು ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮರಳು ಸಂಗ್ರಹ

      ದಿನಾಂಕ 22-06-2019 ರಂದು ಸೋಮವಾರಪೇಟೆ ವೃತ್ತ ನಿರೀಕ್ಷಕರವರಿಗೆ ಕೊಡ್ಲಿಪೇಟೆಯ ರಾಮೇನಹಳ್ಳಿ ಗ್ರಾಮದ ದೇವರಾಜು ಎಂಬುವವರು ಅಕ್ರಮವಾಗಿ ಮರಳು ಶೇಖರಿಸಿಟ್ಟಿರುವುದಾಗಿ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ತೆರಳಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಅಂದಾಜು 10 ಟಿಪ್ಪರ್ ಲೋಡ್ ಗಳಷ್ಟು ಮರಳನ್ನು ವಶಪಡಿಸಿಕೊಂಡಿದ್ದು,  ಈ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.