Crime News

ರಸ್ತೆ ಅಪಘಾತ

ದಿನಾಂಕ 23/06/2019ರಂದು ವಿರಾಜಪೇಟೆ ನಿವಾಸಿ ತೇಜಾವತಿ ಎಂಬವರು ಅವರ ಪತಿ ಕುಮಾರ ಎಂಬವರೊಡನೆ ಅವರ ಓಮಿನಿ ವ್ಯಾನಿನಲ್ಲಿ ಪೊನ್ನಂಪೇಟೆಯಿಂದ ವಿರಾಜಪೇಟೆಗೆ ಬರುತ್ತಿರುವಾಗ ಗೋಣಿಕೊಪ್ಪ ಬಳಿಯ ಕೈಕೇರಿ ದೇವಸ್ಥಾನದ ಬಳಿ ಕುಮಾರರವರು ವ್ಯಾನನ್ನು  ಅತಿ ಬೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ವ್ಯಾನು ಮಗುಚಿಕೊಂಡು ತೇಜಾವತಿರವರಿಗೆ ಹಾಗೂ ಕುಮಾರರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕರ್ತವ್ಯಕ್ಕೆ ಅಡ್ಡಿ ; ಬೆದರಿಕೆ

ದಿನಾಂಕ 23/06/2019ರಂದು ರಾತ್ರಿ ನಾಪೋಕ್ಲು ಬಳಿಯ ಯವಕಪಾಡಿ ಗ್ರಾಮದಲ್ಲಿ ಅರಣ್ಯ ಇಲಾಖೆಯ ವೀಕ್ಷಕ ಪ್ರವೀಣ್‌ ಕುಮಾರ್ ಎಂಬವರು ತಡಿಯಂಡಮೋಳು ಬೆಟ್ಟದ ಚಾರಣದ ತಪಾಸಣಾ ಚೆಕ್‌ ಪೋಸ್ಟ್ ಬಳಿ ಕರ್ತವ್ಯ ನಿರ್ವಹಿಸುತ್ತಿರುವಾಗ ಅಲ್ಲಿಗೆ ಒಂದು ಜೀಪಿನಲ್ಲಿ ಯವಕಪಾಡಿ ನಿವಾಸಿ ಅರೆಯಡ ಪೂವಣ್ಣ ಹಾಗೂ ಕುಂಜಿಲ ನಿವಾಸಿ ಉದಿಯಂಡ ಭೀಮಯ್ಯ ಎಂಬವರು ಸುಮಾರು 5 ಜನರನ್ನು ಕರೆದುಕೊಂಡು ಬಂದಿದ್ದು ಆಗ ಪ್ರವೀಣ್‌ ಕುಮಾರ್ ಹಾಗೂ ಅವರ ಅಧೀನ ಸಿಬ್ಬಂದಿ ರಂಜು ಎಂಬವರು ತಡಿಯಂಡಮೋಳ್ ಪ್ರದೇಶಕ್ಕೆ ಪ್ರವೇಶ ನಿಷೇಧವಿರುವುದಾಗಿ ಹೇಳಿದ ಕಾರಣಕ್ಕೆ ಅರೆಯಡ ಪೂವಣ್ಣ ಮತ್ತು ಉದಿಯಂಡ ಭೀಮಯ್ಯರವರು ಅಶ್ಲೀಲ ಶಬ್ದಗಳಿಂದ ಬೈದು ಕರ್ತವ್ಯ ನಿರತ ಪ್ರವೀಣ್‌ ಕುಮಾರ್‌ ಮತ್ತು ರಂಜುರವರ ಮೇಲೆ ಜೀಪು ಹತ್ತಿಸಲು ಪ್ರಯತ್ನಿಸಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.