Crime News

ಸುಲಿಗೆ ಪ್ರಕರಣ

ದಿನಾಂಕ 21/03/2019ರಂದು ಮುಸ್ಸಂಜೆ ವೇಳೆಯಲ್ಲಿ ಕೇರಳದ ಮರ ವ್ಯಾಪಾರಿ ನೂರೂದ್ದೀನ್ ಎಂಬವರು ಅವರ ಕಾರಿನಲ್ಲಿ ಮರ ವ್ಯಾಪಾರದ ಬಗ್ಗೆ ಗೋಣಿಕೊಪ್ಪಕ್ಕೆ ಬರುತ್ತಿರುವಾಗ ಅರುವತೊಕ್ಲು ಗ್ರಾಮದ ಬಳಿ ಮುಜೀಬ್‌ ಎಂಬಾತನು ರಶೀದ್ ಎಂಬವನೊಂದಿಗೆ ಕಾರಿನಲ್ಲಿ ಬಂದು ನೂರುದ್ದೀನ್‌ರವರ ಕಾರನ್ನು ತಡೆದು ಅವರನ್ನು ಕಾರಿನಿಂದ ಇಳಿಸಿ ನೂರುದ್ದೀನ್‌ರವರ ಮೇಲೆ ಹಲ್ಲೆ ಮಾಡಿ ಅವರ ಕತ್ತಿನಲ್ಲಿದ್ದ ಚಿನ್ನದ ಸರ ಮತ್ತು ರೇಡೋ ವಾಚನ್ನು ಸುಲಿಗೆ ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 27/06/2019ರ ನಡುರಾತ್ರಿ ವೇಳೆ ಗೋಣಿಕೊಪ್ಪ ನಿವಾಸಿ ಮಂಜು ನಾಯಕ್ ಎಂಬವರು ಅವರ ಆಟೋ ರಿಕ್ಷಾದಲ್ಲಿ ಇಬ್ಬರು ಮಹಿಳೆಯರನ್ನು ಕರೆದುಕೊಂಡು ಬಾಡಿಗೆ ಆಧಾರದ ಮೇಲೆ ಅವರನ್ನು ಮೂರ್ನಾಡು ಬಳಿಯ ಬಲಮುರಿ ಗ್ರಾಮದ ಬಳಿ ಬಿಡಲು ಕರೆದುಕೊಂಡು ಹೋದಾಗ ಅಲ್ಲಿ ನಾಲ್ಕು ಮಂದಿ ಅಪರಿಚಿತರು ರಿಕ್ಷಾವನ್ನು ತಡೆದು ಮಂಜುನಾಯಕ್‌ರವರನ್ನು ರಿಕ್ಷಾದಿಂದ ಹೊರಗೆ ಎಳೆದು ದೊಣ್ಣೆಯಿಂದ ಹಲ್ಲೆ ಮಾಡಿರುವುದಲ್ಲದೆ ರಿಕ್ಷಾದ ಗಾಜುಗಳಿಗೆ ದೊಣ್ಣೆಯಿಂದ ಹೊಡೆದು ಹಾನಿಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 27/06/2019ರಂದು ಕೋಪಟ್ಟಿ ನಿವಾಸಿ ವೆಂಕಟೇಶ್ ಎಂಬವರು ಚೇರಂಬಾಣೆಯಿಂದ ಕೋಪಟ್ಟಿ ಕಡೆಗೆ ಹೋಗುತ್ತಿರುವಾಗ ಕೋಪಟ್ಟಿ ಗ್ರಾಮದ ಗಾಳಿಮರದ ತಿರುವಿನ ಬಳಿ ಎದುರಿನಿಂದ ಮುತ್ತಪ್ಪ ಎಂಬವರು ಅವರ ಪಿಕ್‌ಅಪ್ ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ವೆಂಕಟೇಶ್‌ರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಅವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿಷ ಜಂತು ಕಚ್ಚಿ ವ್ಯಕ್ತಿ  ಸಾವು

ದಿನಾಂಕ 21/06/2019ರಂದು ಸಿದ್ದಾಪುರ ಬಳಿಯ ಅರೆಕಾಡು ಗ್ರಾಮದ ಟಾಟಾ ಸಂಸ್ತೆಯ ಬಳಂಜಿಗೆರೆ ತೋಟದಲ್ಲಿ ಕಾರ್ಮಿಕ ಸಿದ್ದಶೆಟ್ಟಿ ಎಂಬವರು ಕೆಲಸ ಮಾಡುತ್ತಿರುವಾಗ ಯಾವುದೋ ವಿಷ ಜಂತು ಕಚ್ಚಿ ಅಸ್ವಸ್ಥರಾದವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಶ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಿದ್ದಶೆಟ್ಟಿರವರು ದಿನಾಂಕ 27/06/2019ರಂದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಳವು ಪ್ರಕರಣ

ದಿನಾಂಕ 20/06/2019ರಂದು ಕುಶಾಲನಗರ ರಥಬೀದಿ ನಿವಾಸಿ ಗಣೇಶ್ ಡಿ.ಕೆ.ಎಂಬವರಿಗೆ ಸೇರಿದ ಲಾರಿಯನ್ನು ಚಾಲಕ ಕುಮಾರ್‌ ಎಂಬವರು ಗಣೇಶ್‌ರವರ ಮನೆಯ ಮುಂದೆ ನಿಲ್ಲಿಸಿದ್ದು ಮಾರನೆ ದಿನ ಬೆಳಿಗ್ಗೆ ಚಾಲಕ ಕುಮಾರರವರು ಬಂದು ಲಾರಿಯನ್ನು ಚಾಲಿಸಲು ನೋಡಿದಾಗ ಲಾರಿ ಚಾಲನೆಯಾಗದಿದ್ದು ಪರಿಶೀಲಿಸಿದಾಗ ಲಾರಿಯಲ್ಲಿದ್ದ ಸುಮಾರು ರೂ.9,000/- ಮೌಲ್ಯದ ಬ್ಯಾಟರಿಯನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿರುವುದಾಗಿ ನೀಡಿದ ದುರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.