Crime News

ಪೇಟಿ ಎಂ ವಂಚನೆ, ಆರೋಪಿ ಬಂಧನ

          ಪೇಟಿಎಂ ಆಪ್ ಬಳಸಿ ಬೇರೆಯವರ ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸಿದ ದಾವಣಗೆರೆ ಮೂಲದ ಆರೋಪಿ ಭರತ್ ಎಂಬಾತನನ್ನು ಕೊಡಗು ಜಿಲ್ಲೆಯ ಸಿಇಎನ್ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಬಂಧಿಸಿರುತ್ತಾರೆ,

          ದುಬೈಯಲ್ಲಿ ಕೆಲಸ ಮಾಡಿಕೊಂಡಿದ್ದ ಕುಶಾಲನಗರ ವಾಸಿ ಜಿ.ಹೆಚ್ ಅಶ್ರಫ್ ಎಂಬುವರ ಬ್ಯಾಂಕ್ ಖಾತೆಯಿಂದ ಯಾರೋ ಎಟಿಎಂ ಕಾರ್ಡ್ ಅಶ್ರಫ್ ರವರ ಬಳಿ ಇದ್ದರೂ ಅವರ ಅರಿವಿಗೆ ಬಾರದೇ ದಿನಾಂಕ 10-6-2019 ರಿಂದ 14-6-2019 ರವರೆಗೆ ಮೋಸದಿಂದ ರೂ 79994/- ಹಣವನ್ನು ಡ್ರಾ ಮಾಡಿರುವ ಬಗ್ಗೆ ದಿನಾಂಕ 18-62019 ರಂದು ಕೊಡಗು ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

          ದುಬೈಯಲ್ಲಿ ಕೆಲಸ ಮಾಡಿಕೊಂಡಿದ್ದ ಕುಶಾಲನಗರ ವಾಸಿ ಜಿ.ಎಚ್ ಅಶ್ರಫ್ ರವರ ಕುಶಾಲನಗರ ಶಾಖೆಯ ಕೆನರಾ ಬ್ಯಾಂಕಿನ ಖಾತೆಗೆ ಹಣ ಜಮಾ ಆಗುತ್ತಿದ್ದ ಮೊಬೈಲ್ ಸಂದೇಶಗಳು ಆರೋಪಿ ಬಳಸುತ್ತಿದ್ದ ಮೊಬೈಲ್ ಸಂಖ್ಯೆಗೆ ಅಶ್ರಫ್ ರವರ ಗಮನಕ್ಕೆ ಬಾರದಂತೆ ಬರುತ್ತಿದ್ದು, ಇದನ್ನು ಆರೋಪಿ ಭರತ್ ತನ್ನ ಮೊಬೈಲ್ ನಲ್ಲಿ ಪೇಟಿಎಂ ಆಪ್ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಅಶ್ರಫ್ ರವರು ಈ ಹಿಂದೆ ಉಪಯೋಗಿಸುತ್ತಿದ್ದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ದೂರುದಾರರ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿ ಅದರಿಂದ ರೂ. 79,994/- ಹಣವನ್ನು ಮೋಸದಿಂದ ಆರೋಪಿಯ ಖಾತೆಗೆ ವರ್ಗಾಯಿಸಿರುವ ಬಗ್ಗೆ ಕೊಡಗು ಜಿಲ್ಲಾ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ರವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಹರೀಶ್ ಕುಮಾರ್ ಎಂ.ಎ ಮತ್ತು ಸಿಬ್ಬಂದಿಗಳಾದ ಪಿಎಸ್ಐ ಎಂ.ಡಿ ಅಪ್ಪಾಜಿ, ಕ್ಲೆಮೆಂಟ್ ಸಲ್ಡಾನ, ಪ್ರಕಾಶ್, ಕಾರ್ಯಪ್ಪ, ಮಧು ರವರು ಪತ್ತೆ ಕಾರ್ಯಾಚರಣೆ ಕೈಗೊಂಡು ಆರೋಪಿ ದಾವಣಗೆರೆ ಮೂಲದ ಭರತ್ ಎಂಬಾತನನ್ನು ಬಂಧಿಸಿ ಆತನಿಂದ ಪ್ರಕರಣದಲ್ಲಿ ಲಪಟಾಯಿಸಿದ ಹಣವನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಯು ನ್ಯಾಯಾಂಗ ಬಂಧನದಲ್ಲಿರುತ್ತಾನೆ.

          ಪ್ರಕರಣದಲ್ಲಿ ದೂರುದಾರರು ಸುಮಾರು 2 ವರ್ಷಗಳ ಹಿಂದೆ ಕೆನರಾ ಬ್ಯಾಂಕಿನ ಖಾತೆಗೆ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿದ್ದು, ಆ ನಂಬರನ್ನು ತಾನು ಉಪಯೋಗಿಸದೆ ಇದ್ದುದರಿಂದ ಆ ನಂಬರನ್ನು ಏರ್ ಟೆಲ್ ಕಂಪನಿಯವರು ಅದೇ ನಂಬರನ್ನು ಪುನಃ ಮತ್ತೊಬ್ಬ ಗ್ರಾಹಕರಿಗೆ ನೀಡಿದ್ದನ್ನು ಆರೋಪಿಯು ಪಡೆದುಕೊಂಡು ಅಶ್ರಫ್ ರವರ ಬ್ಯಾಂಕ್ ಖಾತೆಯಿಂದ ಆರೋಪಿಯು ಬಳಸುತ್ತಿದ್ದ ಮೊಬೈಲ್ ಸಂಖೆಗೆ ಸಂದೇಶಗಳು ಬರುತ್ತಿದ್ದು ಅದರಿಂದ ಆರೋಪಿಯು ಪೇಟಿಎಂ ಆಪ್ ಡೌನ್ಲೋಡ್ ಮಾಡಿಕೊಂಡು ಹಣವನ್ನು ತನ್ನ ಖಾತೆಗೆ ಮೋಸದಿಂದ ವರ್ಗಾಯಿಸಿಕೊಂಡಿರುವುದಾಗಿ ತಿಳಿಸಿರುತ್ತಾನೆ.  ಆದ್ದರಿಂದ ಗ್ರಾಹಕರು ತಮ್ಮ ಖಾತೆಗೆ ಲಿಂಕ್ ಮಾಡಿರುವ ಮೊಬೈಲ್ ಸಂಖ್ಯೆಗಳನ್ನು ಆಗಿಂದಾಗ್ಗೆ ಪರಿಶೀಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿರುತ್ತಾರೆ.     

ಬ್ಯಾಟರಿ ಕಳವು ಪ್ರಕರಣದ ಆರೋಪಿಗಳ ಬಂಧನ

             ದಿನಾಂಕ 24-06-2019 ರಂದು ಕುಶಾಲನಗರದ ವಿವಿಧ ಕಡೆಗಳಲ್ಲಿ ರಾತ್ರಿ ನಿಲ್ಲಿಸಿದ್ದ ನಾಲ್ಕು ಲಾರಿಗಳಿಂದ ಬ್ಯಾಟರಿಗಳನ್ನು ಕಳವು ಮಾಡಿದ ಆರೋಪಿಗಳಾದ 1) ತೌಸೀಪ್‌ ಎಂ.ಎಸ್‌, ತಂದೆ ಸಫೀಯುಲ್ಲಾ, ಪ್ರಾಯ 19 ವರ್ಷ, ಬೈಕ್‌ ಮೆಕಾನಿಕ್‌, ವಾಸ ಮದರಸ ಹಿಂಬಾಗ ರಸ್ತೆ, ಇಂದಿರಾ ಬಡಾವಣೆ, ಕುಶಾಲನಗರ, 2) ಸಮೀರ್, ತಂದೆ ಪೌತಿ ಸಮೀಯುಲ್ಲಾ, ಪ್ರಾಯ 19 ವರ್ಷ, ಬೈಕ್‌ ಮೆಕಾನಿಕ್‌, ಅಥಿತಿ ಹೊಟೇಲ್ ಮುಂಭಾಗ, ವಾಸ 3ನೇ ಬ್ಲಾಕ್‌, ಜಿ.ಎಂ.ಪಿ ಶಾಲೆಯ ಗೇಟ್ ಹತ್ತಿರ ಬಾಪೂಜಿ ಬಡಾವಣೆ, ಕುಶಾಲನಗರ, 3) ಮೊಹ್ಮದ್‌ ಬಶೀರ್, ತಂದೆ ಪೌತಿ ಜಫಿವುಲ್ಲಾ, ಪ್ರಾಯ 19 ವರ್ಷ, ಕಡ್ಲೆಕಾಯಿ ವ್ಯಾಪಾರಿ, ವಾಸ ಇಂದಿರಾ ಬಡಾವಣೆ ಮಸೀದಿ ಹತ್ತಿರ, 1ನೇ ಬ್ಲಾಕ್‌, ಕುಶಾಲನಗರ, 4) ಎಂ.ಗುಣಶೇಖರ, ತಂದೆ ಮಹಾಲಿಂಗಂ, ಪ್ರಾಯ 51ವರ್ಷ, ಗುಜರಿ ವ್ಯಾಪಾರಿ, ವಾಸ ಮಾರ್ಕೆಟ್‌ ರಸ್ತೆ, ಕುಶಾಲನಗರ ಇವರನ್ನು ಬಂಧಿಸಿ ಅವರಿಂದ 60,000 ರೂ ಬೆಲೆ ಬಾಳುವ ಬ್ಯಾಟರಿಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.

               ಈ ಪ್ರಕರಣದಲ್ಲಿ ಡಾ: ಸುಮನ್‌ ಡಿ.ಪಿ, ಮಾನ್ಯ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆರವರ ಮಾರ್ಗದರ್ಶನದಲ್ಲಿ ಪಿ.ಕೆ.ಮುರುಳಿಧರ್, ಡಿ.ಎಸ್‌.ಪಿ ಸೋಮವಾರಪೇಟೆ ಉಪ ವಿಭಾಗ, ಕುಶಾಲನಗರ ಮತ್ತು ಬಿ.ಎಸ್‌. ದಿನೇಶ್‌ ಕುಮಾರ್, ಸಿಪಿಐ ಕುಶಾಲನಗರ ಇವರ ನೇತ್ರೃತ್ವದಲ್ಲಿ ಪಿ. ಜಗದೀಶ್‌, ಪಿಎಸ್‌ಐ, ಕುಶಾಲನಗರ ಟೌನ್ ಪೊಲೀಸ್ ಠಾಣೆ, ಮತ್ತು ಎಂ.ಕೆ.ಸದಾಶಿವ, ಪಿ.ಎಸ್‌ಐ (ಅಪರಾಧ) ಕುಶಾಲನಗರ ಟೌನ್ ಪೊಲೀಸ್ ಠಾಣೆ, ಮತ್ತು ಅಪರಾಧ ಪತ್ತೆ ದಳದ ಸಿಬ್ಬಂದಿಗಳಾದ ಎಂ. ರವಿಂದ್ರ, ಅರುಣ್‌ಕುಮಾರ್, ಸುಧೀಶ್‌ಕುಮಾರ್, ಸುನಿಲ್‌ ಮತ್ತು ಚಾಲಕರಾದ ಪ್ರವೀಣ್‌ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಆರೋಪಿಯನ್ನು ಪತ್ತೆ ಹಚ್ಚಿದ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯ ವೈಖರಿಯನ್ನು ಶ್ಲಾಘಿಸಿ ಮಾನ್ಯ ಪೊಲೀಸ್ ಅಧೀಕ್ಷಕರು ಅಭಿನಂದಿಸಿರುತ್ತಾರೆ.

ಮರ ಕಳವು, ಆರೋಪಿಗಳ ಬಂಧನ

         ಮಡಿಕೇರಿ ತಾಲೋಕಿನ ಬೆಟ್ಟಗೇರಿ ಗ್ರಾಮದಿಂದ ಮರಗಳನ್ನು ಕಳವು ಮಾಡುತ್ತಿದ್ದ ಆರೋಪಿಗಳನ್ನು ಮಾಲು ಸಮೇತ ಬಂಧಿಸುವಲ್ಲಿ ಕೊಡಗು ಜಿಲ್ಲಾ ಡಿಸಿಐಬಿ ತಂಡ ಯಶಸ್ವಿಯಾಗಿದೆ. ದಿನಾಂಕ 29-06-2019 ರಂದು ಬೆಳಗಿನ ಜಾವ ಡಿಸಿಐಬಿ ತಂಡ ಗಸ್ತಿನಲ್ಲಿರುವಾಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಟ್ಟಗೇರಿ ಗ್ರಾಮದಲ್ಲಿ ಅಕ್ರಮವಾಗಿ ಮರಗಳನ್ನು ಕಡಿದು ಸಾಗಿಸುತ್ತಿರುವುದಾಗಿ ದೊರೆತ ಖಚಿತ ವರ್ತಮಾನದ ಮೇರೆಗೆ ಸದರಿ ಮಾಹಿತಿಯನ್ನು ಪರಿಶೀಲಿಸಲಾಗಿ ಕಕ್ಕಬ್ಬೆ ಗ್ರಾಮದ  ಆರೋಪಿಗಳು ಬೆಟ್ಟಗೇರಿ ಗ್ರಾಮದ ತೋಟದಿಂದ ಹಲಸು ಹಾಗೂ ಹೆಬ್ಬಲಸು ಮರಗಳ ಸುಮಾರು 22 ನಾಟಾಗಳನ್ನು ಕಳವು ಮಾಡಿ ಲಾರಿ ಸಂಖ್ಯೆ ಕೆಎ-46-6956 ರಲ್ಲಿ ತುಂಬಿಕೊಂಡು ಸಾಗಿಸಲು ಪ್ರಯತ್ನಿಸುತ್ತಿದ್ದವರನ್ನು ಮಾಲು ಸಮೇತ ಹಿಡಿದು ವಿಚಾರಣೆಗೊಳಪಡಿಸಿದಾಗ ಅವರು ಮಾಡಿದ ಕೃತ್ಯವನ್ನು ಒಪ್ಪಿಕೊಂಡಿರುತ್ತಾರೆ.

          ಈ ಕೃತ್ಯಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಮೊ.ಸಂ. 117/2019 ಕಲಂ. 144, 165 ಕೆ.ಎಫ್ ರೂಲ್ಸ್ ಮತ್ತು 379 ಐಪಿಸಿ ರೀತಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ದಸ್ತಗಿರಿ ಮಾಡಲಾದ ಆರೋಪಿಯ ವಿವರ ಈ ಕೆಳಕಂಡಂತಿರುತ್ತದೆ:

1)        ಅಶ್ರಫ್ ತಂದೆ ದಾವೂದ್, 31 ವರ್ಷ, ಮೊಬೈಲ್ ಸ್ಪೇರ್ಸ್ ವ್ಯಾಪಾರ, ವಾಸ: ಕಕ್ಕಬ್ಬೆ, ಕೊಡಗು ಜಿಲ್ಲೆ., 2)       ರಿಯಾಜ್ ತಂದೆ ಮೂಸ, 31 ವರ್ಷ, ಮೊಬೈಲ್ ಸ್ಪೇರ್ಸ್ ವ್ಯಾಪಾರ, ವಾಸ: ಕಕ್ಕಬ್ಬೆ, ಕೊಡಗು ಜಿಲ್ಲೆ. 3)       ಅಬ್ದುಲ್ ರಹೀಂ ತಂದೆ ಅಬ್ದುಲ್ಲಾ, 30 ವರ್ಷ, ಕೂಲಿ ಕೆಲಸ, ವಾಸ: ಪಾಲೂರು, ಕೊಡಗು ಜಿಲ್ಲೆ.       4)  ಆರಿಸ್ ತಂದೆ ಇಸ್ಮಾಯಿಲ್, 26 ವರ್ಷ, ಲಾರಿ ಚಾಲಕ, ವಾಸ: ಪುತ್ತೂರು, ಮಂಗಳೂರು. 5)       ರಿಯಾಸ್ ತಂದೆ ಅಬ್ಬಾಸ್, 25 ವರ್ಷ, ಲಾರಿ ಕ್ಲೀನರ್, ವಾಸ: ಪುತ್ತೂರು, ಮಂಗಳೂರು.

ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಸ್ವತ್ತುಗಳ ವಿವರ ಈ ಕೆಳಕಂಡಂತಿದೆ:

1)        ಒಂದು ಲಾರಿ ಸಂಖ್ಯೆ: ಕೆಎ-46-6956. 2)       22 ಹಲಸು ಹಾಗೂ ಹೆಬ್ಬಲಸು ಮರದ ನಾಟಾಗಳು. 3)       ಲಾರಿಗೆ ಬೆಂಗಾವಲಿಗೆ ಉಪಯೋಗಿಸಿದ ಒಂದು ಸ್ವಿಫ್ಟ್ ಕಾರ್ ನಂ. ಕೆಎ-12-ಜೆಡ್-3113. 4)       ಲಾರಿಗೆ ಬೆಂಗಾವಲಿಗೆ ಉಪಯೋಗಿಸಿದ ಒಂದು ಝೆನ್ ಕಾರ್ ನಂ. ಕೆಎ-20-ಎನ್-1117. 5)       15 ಸಾವಿರ ನಗದು ಹಣ. ಆರೋಪಿಗಳಿಂದ ವಶಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ ಸುಮಾರು 15,00,000/-

             ಈ ಕಾರ್ಯಾಚರಣೆಯನ್ನು ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ|| ಸುಮನ್.ಡಿ. ಪೆನ್ನೇಕರ್, ಐಪಿಎಸ್ ರವರ ನೇತೃತ್ವದಲ್ಲಿ, ಮಡಿಕೇರಿ ಉಪವಿಭಾಗದ ಡಿವೈಎಸ್ ಪಿ, ಸುಂದರ್ ರಾಜ್ ರವರ ಮಾರ್ಗದರ್ಶನದಲ್ಲಿ  ಡಿಸಿಐಬಿ ಪೊಲೀಸ್ ನಿರೀಕ್ಷಕರಾದ ಎಂ. ಮಹೇಶ್, ಎಎಸ್ಐ ಕೆ. ವೈ. ಹಮೀದ್, ಸಿಬ್ಬಂದಿಗಳಾದ  ಯೋಗೇಶ್ ಕುಮಾರ್,  ನಿರಂಜನ್, ಅನಿಲ್ ಕುಮಾರ್, ವಸಂತ, ವೆಂಕಟೇಶ್, ಚಾಲಕರಾದ ಶಶಿಕುಮಾರ್ ಗ್ರ್ರಾಮಾಂತರ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ಚೇತನ್, ಪ್ರೊಬೆಷನರಿ ಪಿಎಸ್ಐ ಶೇಷಾದ್ರಿ ಕುಮಾರ್, ಸಿಬ್ಬಂದಿಯವರಾದ ತೀರ್ಥಕುಮಾರ್, ಕಲ್ಲಪ್ಪ ಹಿಟ್ನಾಳ್ ರವರುಗಳು ನಡೆಸಿರುವುದಾಗಿದೆ. ಈ ಪ್ರಕರಣದಲ್ಲಿ ಆರೋಪಿ ಹಾಗೂ ಮಾಲನ್ನು ಪತ್ತೆಹಚ್ಚಿದ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಿ ನಗದು ಬಹುಮಾನವನ್ನು ಘೋಷಿಸಿರುತ್ತಾರೆ.                          

ಕಳವು ಪ್ರಕರಣ

              ವಿರಾಜಪೇಟೆ ತಾಲೋಕಿನ ಬಾಡಗ ಗ್ರಾಮದ ಪಲ್ಲೇರಿಯ ನಿವಾಸಿಯಾದ ಕೊಟ್ಟಂಗಡ ಸಿ ಪೊನ್ನಪ್ಪನವರು ಬೆಂಗಳೂರಿನಲ್ಲಿ ವಾಸವಿದ್ದು ಪಲ್ಲೇರಿಯಲ್ಲಿರುವ ಅವರ ಮನೆಯ ಬಾಗಿಲನ್ನು ಮುರಿದು ಒಳನುಗ್ಗಿ ಮಲಗುವ ಕೋಣೆಯಲ್ಲಿಟ್ಟಿದ್ದ ಆಸ್ತಿಗೆ ಸಂಬಂಧಿಸಿದ ಆರ್.ಟಿ.ಸಿ ಹಾಗೂ ಕುಟುಂಬದ ಹಳೆಯ ದಾಖಲಾತಿಗಳನ್ನು ಕಳವು ಮಾಡಿಕೊಂಡು ಹೋಗಿದ್ದು,ಈ ಬಗ್ಗೆ ಪೊನ್ನಪ್ಪನವರು ನೀಡಿದ ದೂರಿನ ಮೇರೆಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.