Crime News

ಹಲ್ಲೆ, ಕೊಲೆ ಯತ್ನ

ದಿನಾಂಕ 29/06/2019ರಂದು ಸಿದ್ದಾಪುರ ಬಳಿಯ ಅರೆಕಾಡು ನಿವಾಸಿ ಬಿ.ವೈ.ಪ್ರಭುಶೇಖರ್ ಎಂಬವರು ರಾತ್ರಿ ಮನೆಯಲ್ಲಿ ನಿದ್ರಿಸುತ್ತಿರುವಾಗ ನಡು ರಾತ್ರಿ ವೇಳೆಯಲ್ಲಿ ಅಭ್ಯತ್‌ಮಂಗಲ ನಿವಾಸಿ ಯಶೋಧರ ಎಂಬವರು ಅವರ ಬೊಲೆರೋ ಜೀಪಿನಲ್ಲಿ ಬಂದು ಪ್ರಭುಶೇಖರರವರನ್ನು ಕೂಗಿ ಹೊರಗೆ ಕರೆದು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಜೀಪಿನಲ್ಲಿದ್ದ ಕತ್ತಿಯಿಂದ ಪ್ರಭುಶೇಖರ್‌ರವರ ಮೇಲೆ ಕಡಿದು ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 29/06/2019ರಂದು ಮಡಿಕೇರಿ ಬಳಿಯ ಮೇಕೇರಿ ನಿವಾಸಿ ಸಜೀನ್‌ ಎಂಬವರು ಅವರ ಸ್ನೇಹಿತ ರಂಜಿತ್‌ ಎಂಬವರೊಡನೆ ರಂಜಿತ್‌ರವರ ಮೋಟಾರು ಬೈಕಿನಲ್ಲಿ ಭಾಗಮಂಡಲದಿಂದ ಚೇರಂಬಾಣೆ ಕಡೆಗೆ ಬರುತ್ತಿರುವಾಗ ಭಾಗಮಂಡಲದ ಬಳಿಯ ಚೆದುಕಾರು ಸೇತುವೆಯ ಬಳಿ ಎದುರಿನಿಂದ ಒಂದು ಕಾರನ್ನು ಅದರ ಚಾಲಕ ಅಬ್ದುಲ್ ಸುಕೂರ್ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಂಜಿತ್‌ರವರು ಚಾಲಿಸುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕಿನಲ್ಲಿದ್ದ ಸಜೀನ್‌ ಮತ್ತು ರಂಜಿತ್‌ ಇಬ್ಬರೂ ಕೆಳಗೆ ಬಿದ್ದು ಇಬ್ಬರಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿಷ ಸೇವಿಸಿದ್ದ ವೃದ್ದೆ ಸಾವು

ದಿನಾಂಕ 22/06/2019ರಂದು ಭಾಗಮಂಡಲ ಬಳಿಯ ದೊಡ್ಡಪುಲಿಕೋಟು ಗ್ರಾಮದ ನಿವಾಸಿ 85 ವರ್ಷ ಪ್ರಾಯದ ವೃದ್ದೆ ಸೀತಮ್ಮ ಎಂಬವರು ಹೊಟ್ಟೆನೋವಿನ ಔಷಧಿ ಎಂದು ತಿಳಿದು ಯಾವುದೋ ವಿಷೌಷಧಿಯನ್ನು ಸೇವಿಸಿ ಅಸ್ವಸ್ಥರಾಗಿ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾ ಸ್ಪತ್ರೆಗೆ ದಾಖಲಿಸಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 29/06/2019ರಂದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಳವು ಪ್ರಕರಣ

ಮಡಿಕೇರಿ ನಗರದ ಕೊಹಿನೂರ್ ರಸ್ತೆ ನಿವಾಸಿ ಓ.ಎಸ್.ರತಿ ಎಂಬವರು ನಗರದ ತ್ಯಾಗರಾಜ ಕಾಲೋನಿಯ ತನತ್ ಸಂಸ್ಥೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದು ಸಂಸ್ಥೆಗೆ ಅಡುಗೆ ಕೆಲಸಕ್ಕೆ ಹೆಚ್ಚಿನ ಕೆಲಸಗಾಗರರು ಬೇಕೆಂಬ ಕಾರಣಕ್ಕೆ ರತಿರವರು ಅವರಿಗೆ ಪರಿಚಯವಿರುವ ಕೇರಳ ಮೂಲದ ಶೋಭನ ಜೋಸೆಫ್‌ ಎಂಬವರನ್ನು ಸಂಸ್ಥೆಗೆ ಪರಿಚಿಯಿಸಿದ್ದು ನಂತರ ಅಲ್ಲಿ ಕೆಲಸಕ್ಕೆ ಸೇರಿದ ಶೋಭನ ಜೋಸೆಫ್‌ರವರು ರತಿರವರ ಜೊತೆಗೆ ಮಲಗುತ್ತಿದ್ದು ರತಿರವರು ಇಲ್ಲದ ಸಮಯದಲ್ಲಿ ರತಿರವರಿಗೆ ಸೇರಿದ ಸುಮಾರು ರೂ. 35,000/- ಮೌಲ್ಯದ ಹಣ ಹಾಗೂ ಚಿನ್ನಾಭರಣಗಳನ್ನು ಕಳವು ಮಾಡಿದ್ದು ಶೋಭನ ಜೋಸೆಫ್ ಮತ್ತು ಅವರ ಮಗ ಅನೀಸ್‌ ಜೋಸೆಫ್‌ರವರು ತಲೆಮರೆಸಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.