Crime News

ಹೊಳೆಗೆ ಬಿದ್ದು ವ್ಯಕ್ತಿ ಸಾವು

ಸೋಮವಾರಪೇಟೆ ಬಳಿಯ ಅಬ್ಬೂರುಕಟ್ಟೆ ನಿವಾಸಿ ಮಂಜ ಎಂಬವರು ದಿನಾಂಕ 30/06/2019ರಂದು ಮನೆಯಿಂದ ಹೊರಗೆ ಹೋಗಿದ್ದು ಮರಳಿ ಬಾರದೇ ಇದ್ದು ದಿನಾಂಕ 01/07/2019ರಂದು ಅವರ ಮೃತದೇಹವು ಹಾರಂಗಿ ಗ್ರಾಮದಲ್ಲಿ ಹಾರಂಗಿ ಹೊಳೆಯಲ್ಲಿ ಪತ್ತೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಮಾರಾಟ

ದಿನಾಂಕ 01/07/2019ರಂದು ಸೋಮವಾರಪೇಟೆ ಬಳಿಯ ಕುಸುಬೂರು ಗ್ರಾಮದ ಕೆಂಚಮ್ಮನ ಬಾಣೆಯಲ್ಲಿ ಬಿ.ಸಿ.ದಿನೇಶ್‌ ಎಂಬವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ಸೋಮವಾರಪೇಟೆ ಠಾಣೆಯ ಪಿಎಸ್‌ಐ ಶಿವಶಂಕರ್‌ರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ನೋಡಿದಾಗ ಅಲ್ಲಿ ಬಿಸಿ.ದಿನೇಶ್‌ರವರು ಅವರ ಮನೆಯಲ್ಲಿ ಸುಮಾರು 29 ಟೆಟ್ರಾ ಪ್ಯಾಕ್‌ಗಳಲ್ಲಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದು ಪತ್ತೆಯಾಗಿದ್ದು ಮಾಲು ಸಮೇತ ಆರೋಪಿಯನ್ನು ವಶಪಡಿಸಿಕೊಂಡು ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 01/07/2019ರಂದು ಕೇರಳದ ತಲಚೇರಿ ನಿವಾಸಿ ಮೊಹಮದ್ ಶಾಫಿ ಎಂಬವರು ಅವರ ಕಾರಿನಲ್ಲಿ ವಿರಾಜಪೇಟೆ ಬಳಿಯ ಮಾಕುಟ್ಟ ಗ್ರಾಮದ ಆಂಜನೇಯ ದೇವಸ್ಥಾನದ ಬಳಿ ಬರುತ್ತಿರುವಾಗ ಎದುರಿನಿಂದ ಮದ್ದೂರು ನಿವಾಸಿ ಪ್ರದೀಪ್‌ ಕುಮಾರ್ ಎಂಬವರು ಒಂದು ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮಹಮದ್ ಶಾಫಿಯವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಮಹಮದ್ ಶಾಫಿಯವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ; ಸಾವು

ದಿನಾಂಕ 01/07/2019ರಂದು ವಿರಾಜಪೇಟೆ ನಗರದ ವಿಜಯನಗರದ ನಿವಾಸಿ ಮಹಮದ್ ರಫೀಕ್ ಎಂಬವರು ಅವರ ನೆರೆಮನೆಯ ಅಫ್ರೀದ್ ಎಂಬವರೊಂದಿಗೆ ಅಫ್ರೀದ್‌ರವರ ಸ್ಕೂಟರಿನಲ್ಲಿ ಬೆಂಗಳೂರಿಗೆ ಹೋಗುತ್ತಿರುವಾಗ ದೇವರಪುರ ಬಳಿ ಎದುರಿನಿಂದ ಸಿಬಿಲ್‌ ಲಾಲ್ ಎಂಬವರು ಅವರ ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಅಫ್ರೀದ್‌ರವರು ಚಾಲಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಸ್ಖುಟರಿನಲ್ಲಿದ್ದ ಅಫ್ರೀದ್‌ ಹಾಗೂ ಮಹಮದ್ ರಫೀಕ್‌ರವರಿಗೆ ಗಾಯಗಳಾಗಿದ್ದು ಗಂಭೀರ ಗಾಯಗೊಂಡ ಅಫ್ರೀದ್‌ರವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.