Crime News

ಬೈಕ್ ಅಪಘಾತ, ವ್ಯಕ್ತಿಯ ಸಾವು

          ದಿನಾಂಕ 02-07-2019 ರಂದು ನೆಲ್ಲಿಹುದಿಕೇರಿಯ ನಾಡನ್ ರುಚಿ ಹೊಟೆಲ್ ನಲ್ಲಿ ಕೆಲಸ ಮಾಡುತ್ತಿರುವ ಪ್ರಾನ್ಸಿಸ್ ಎಂಬುವವರು ಅಂಗಡಿಯಿಂದ ಮೀನು ತೆಗೆದುಕೊಂಡು ರಸ್ತೆ ದಾಟುತ್ತಿರುವಾಗ ಗುಹ್ಯ ಗ್ರಾಮದ ಕಮರುದ್ದೀನ್ ಎಂಬುವವರು ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಸಿದ ಪರಿಣಾಮ ಪ್ರಾನ್ಸಿನ್ ರವರಿಗೆ ಗಾಯವಾಗಿದ್ದು, ಕಮರುದ್ದೀನ್ ರವರು ಕೆಳಗೆ ಬಿದ್ದು ತೀವ್ರ ತರಹದ ಗಾಯಗೊಂಡವರನ್ನು ಮಂಗಳೂರಿನ ಎನಪೋಯ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಕಮರುದ್ದೀನ್ ರವರು ಮೃತಪಟ್ಟಿದ್ದು, ಈ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮರಳು ಸಾಗಾಟ, ಟ್ರ್ಯಾಕ್ಟರ್ ವಶ

            ದಿನಾಂಕ 02-07-2019 ರಂದು ನಾಪೋಕ್ಲು ಠಾಣೆಯ ಪಿಎಸ್ಐ ರವರು ಗಸ್ತು ಕರ್ತವ್ಯದಲ್ಲಿರುವಾಗ ಚೆರಿಯಪರಂಬು ಕಾವೇರಿ ನದಿಯಿಂದ ಟ್ರ್ಯಾಕ್ಟರ್ ನಲ್ಲಿ ಮರಳು ತುಂಬಿಸಿ ತೆಗೆದುಕೊಂಡು ಹೋಗುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ ದಾಳಿ ಮಾಡಿ ಮರಳನ್ನು ಸಾಗಾಟ ಮಾಡುತ್ತಿದ್ದ ಚಾಲಕ ಖಾಲಿದ್ ಹಾಗೂ ಟ್ರ್ಯಾಕ್ಟರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಗುಮಾನಿ ಆಸಾಮಿಗಳ ಬಂಧನ

          ದಿನಾಂಕ 02-07-2019 ರಂದು ಕುಶಾಲನಗರ ಗ್ರಾಮಾಂತರ ಠಾಣೆಯ ಪಿಎಸ್ಐ ರವರಿಗೆ ಸಿಕ್ಕಿದ ಮಾಹಿತಿ ಮೇರೆಗೆ ಟಾಟಾ ಮ್ಯಾಜಿಕ್ ವಾಹನದಲ್ಲಿ ಕಳ್ಳತನದ ಪಂಪ್ ಸೆಟ್ ಮೋಟಾರುಗಳು ಮತ್ತು ಇತರೇ ವಸ್ತುಗಳನ್ನು ತುಂಬಿಸಿಕೊಂಡು ಕೊಣನೂರು ಕಡೆಯಿಂದ ಕುಶಾಲನಗರಕ್ಕೆ ಹೋಗುತ್ತಿರುವಾಗ ದಾಳಿ ಮಾಡಿ ಶ್ರೀನಿವಾಸ್ ಮತ್ತು ಮಾದಯ್ಯನವರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ವ್ಯಕ್ತಿಯ ಆತ್ಮಹತ್ಯೆ

             ದಿನಾಂಕ 02-07-2019 ರಂದು ಕೂಡುಮಂಗಳೂರು ಗ್ರಾಮದ ನಿವಾಸಿಯಾದ ಚಂದ್ರು ಎಂಬುವವರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಣ ಕಳವು

            ದಿನಾಂಕ 02-07-2019 ರಂದು ಪಿರಿಯಾಪಟ್ಟಣ ತಾಲೋಖಿನ ನಿವಾಸಿಯಾದ ಶಿವಕುಮಾರ ನಾಯಕ ಎಂಬುವವರು ಕುಶಾಲನಗರದ ಎಸ್.ಬಿ.ಐ ಬ್ಯಾಂಕಿನಿಂದ 3 ಲಕ್ಷ ಹಣವನ್ನು ತೆಗೆದುಕೊಂಡು ಹೊರಗೆ ಬಂದಾಗ ಮೋಟಾರು ಸೈಕಲ್ ಟಯರ್ ಪಂಚರಾಗಿದ್ದು, ಮೋಟಾರು ಸೈಕಲನ್ನು ತಳ್ಳಿಕೊಂಡು ಹೋಗಿ ಸ್ವಲ್ಪ ದೂರದಲ್ಲಿರುವ ವೆಂಕಟೇಶ್ವರ ಟಯರ್ ಶಾಪ್ ನ ಮುಂಭಾಗ ನಿಲ್ಲಿಸಿ ಹಣವನ್ನಿಟ್ಟಿದ್ದ ಪರ್ಸ್ ನ್ನು ಮೋಟಾರು ಸೈಕಲಿನಲ್ಲಿಟ್ಟು ಟಯರ್ ನ ಬೆಲೆ ಕೇಳಲು ಹೋಗಿ ವಾಪಾಸ್ಸು ಬಂದು ನೋಡುವಾಗ ಯಾರೋ ಹಣವಿದ್ದ ಪರ್ಸ್ ನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಶಿವಕುಮಾರ ನಾಯಕ ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕೊಲೆ ಬೆದರಿಕೆ

          ದಿನಾಂಕ 02-07-2019 ರಂದು ಸೋಮವಾರಪೇಟೆ ತಾಲೋಖಿನ ಮುಳ್ಳೂರು ಗ್ರಾಮದ ಸಣ್ಣಯ್ಯನವರ ಮನೆಗೆ ಬಡುವನ ಹಳ್ಳಿ ಗ್ರಾಮದ ನಿವಾಸಿಗಳಾದ ಗುರುವ, ನವೀನ, ವಿನಯ್, ಗುಂಡರವರು ಹೋಗಿ ಗೇಟು ಮತ್ತು ಬಾಗಿಲನ್ನು ಮುರಿದು, ಕೊಲೆ ಬೆದರಿಕೆ ಹಾಕಿದ್ದು, ಈ ಬಗ್ಗೆ ಸಣ್ಣಯ್ಯನವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

        ದಿನಾಂಕ 30-06-2019 ರಂದು ವಿರಾಜಪೇಟೆ ತಾಲೋಕಿನ ತೂಚಮಕೇರಿಯ ನಿವಾಸಿಯಾದ ಲಕ್ಷ್ಮಿಯವರ ಮಗಳಾದ 6 ವರ್ಷ ಪ್ರಾಯ ಸಂದ್ಯಾರವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ದೀಪು ಉತ್ತಪ್ಪನವರು ಕಾರನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ಸಂದ್ಯಾಳಿಗೆ ಗಾಯವಾಗಿದ್ದು, ಈ ಬಗ್ಗೆ ಲಕ್ಷ್ಮಿಯವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಗಾಂಜಾ ಸೇವನೆ, ಪ್ರಕರಣ ದಾಖಲು

           ದಿನಾಂಕ 02-07-2019 ರಂದು ಗೋಣೀಕೊಪ್ಪ ನಗರದ ಮುಕುಂದ ಬಡಾವಣೆಗೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಜಬ್ಬಾರ್ ಎಂಬುವವರು ಗಾಂಜಾ ಸೇವನೆ ಮಾಡುತ್ತಿರುವುದಾಗಿ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ಹೋಗಿ ಗಾಂಜಾ ಸೇವನೆ ಮಾಡುತ್ತಿದ್ದ ಗೋಣಿಕೊಪಪ್ ನಗರದ ನಿವಾಸಿ ಜಬ್ಬಾರ್ ರವರನ್ನು ವಶಕ್ಕೆ ಪಡೆದುಕೊಂಡು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ

ಅಪಘಾತ ಪ್ರಕರಣ

             ದಿನಾಂಕ 02-07-2019 ರಂದು ಹುಣಸೂರಿನ ನಿವಾಸಿಯಾದ ಇಮ್ರಾನ್ ಖಾನ್ ಎಂಬುವವರು ತನ್ನ ಸಂಸಾರದೊಂದಿಗೆ ಕೇರಳ ರಾಜ್ಯಕ್ಕೆ ಕಾರಿನಲ್ಲಿ ಹೋಗುತ್ತಿರುವಾಗ ಮಾಕುಟ್ಟ ರಸ್ತೆಯ ತಿರುವಿನಲ್ಲಿ ಎದುರಿನಿಂದ ಬಂದ ಕಾರನ್ನು ಅದರ ಚಾಲಕ ವಾಜೀದ್ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ಕಾರುಗಳು ಜಖಂಗೊಂಡಿದ್ದು, ಕಾರನ್ನು ಚಾಲನೆ ಮಾಡುತ್ತಿದ್ದ ಇಮ್ರಾನ್ ಖಾನ್ ರವರ ಮಾವ ಸಲಾವುದ್ದೀನ್ ರವರಿಗೆ ಗಾಯವಾಗಿದ್ದು, ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.