Crime News

ಮಹಿಳೆ ಮೇಲೆ ದೌರ್ಜನ್ಯ:

ಮಡಿಕೇರಿ ನಗರದ ತ್ಯಾಗರಾಜ ಕಾಲೋನಿಯ ನಿವಾಸಿ ಶ್ರೀಮತಿ ಸಾನಿಯಾ ಎಂಬವರ ಮೇಲೆ ಆಕೆಯ ಗಂಡ ಕೌಸರ್ ಮತ್ತು ಮನೆಯವರಾದ ಸಲೀಂ ಮೊಹಮ್ಮದ್, ನದೀಂ ಮೊಹಮ್ಮದ್, ಅಪ್ರಿನ್ ಜಾಜ್ ಹಾಗು ನಿಶಾ ರವರುಗಳು ಸೇರಿ ಹಣಕ್ಕಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ಹಿಂಸೆ ನೀಡುತ್ತಿರುವುದಾಗಿ ಶ್ರೀಮತಿ ಸಾನಿಯಾರವರು ದಿನಾಂಕ 3-7-2019 ರಂದು ಮಡಿಕೇರಿ ನಗರ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಾರು ಅಪಘಾತ:

ದಿನಾಂಕ 3-7-2019 ರಂದು ಪ್ರದೀಪ್ ಎಂ. ಪಾಟೀಲ್ ರವರು ತನ್ನ ಸ್ನೇಹಿತರೊಂದಿಗೆ ಕಾರಿಯಲ್ಲಿ ಬೆಂಗಳೂರಿನಿಂದ ಮಡಿಕೇರಿ ಕಡೆಗೆ ಬರುತ್ತಿದ್ದಾಗ ಕಾರು ಚಾಲಕ ಸಚಿನ್ ಸಿಂಗನಾಳ್ ರವರು ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಕಾರು ಸುಂಟಿಕೊಪ್ಪ ಠಾಣಾ ಸರಹದ್ದಿನ ಶಾಂತಗಿರಿ ಎಸ್ಟೇಟ್ ಬಳಿ ಸಾರ್ವಜನಿಕ ರಸ್ತೆಯಲ್ಲಿ ಮಗುಚಿ ಬಿದ್ದು ಕಾರು ಜಖಂ ಗೊಂಡಿದ್ದು, ಈ ಸಂಬಂಧ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.