Crime News

ಹಲ್ಲೆ ಪ್ರಕರಣ

ದಿನಾಂಕ 03/07/2019ರ ಸಂಜೆ ವೇಳೆಗೆ ಮಡಿಕೇರಿ ಬಳಿಯ ಅಪ್ಪಂಗಳ ನಿವಾಸಿ ಕವಿತಾ ಎಂಬವರು ಅವರ ತಂದೆಯೊಂದಿಗೆ ಮಡಿಕೇರಿ ನಗರದ ಟೋಲ್‌ಗೇಟ್‌ ಬಳಿ ರಿಕ್ಷಾ ಏರುತ್ತಿರುವಾಗ ಉಡೊತ್ ಮೊಟ್ಟೆ ನಿವಾಸಿ ರವೀಂದ್ರ ಎಂಬವರು ಬಂದು ಹಳೆ ದ್ವೇಷದಿಂದ ಜಗಳವಾಡಿ ಕವಿತಾರವರ ತಂದೆಯ ಕುತ್ತಿಗೆ ಹಿಚುಕಿ ಕೊಲ್ಲುವುದಾಗಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.