Crime News

ಸ್ಕೂಟಿಗೆ ಕಾರು ಡಿಕ್ಕಿ ಇಬ್ಬರಿಗೆ ಗಾಯ:

ಮಡಿಕೇರಿ ನಗರದ ಚಾಮುಂಡೇಶ್ವರಿ ನಗರದ ನಿವಾಸಿ ಕೆ.ಆರ್‍.ರವೀಶ್ ಎಂಬವರು ದಿನಾಂಕ 7-7-2019 ರಂದು ತಮ್ಮ ಬಾಪ್ತು ಸ್ಕೂಟಿಯಲ್ಲಿ  ತನ್ನ ಸ್ನೇಹಿತ ಅನಿಲ್‍ ಎಂಬವರೊಂದಿಗೆ ಸುಂಟಿಕೊಪ್ಪದ ಕಡೆಗೆ ಹೋಗುತ್ತಿದ್ದಾಗ ಕೆದಕಲ್ ಸಾರ್ವಜನಿಕ ರಸ್ತೆಯಲ್ಲಿ ಎದುರುಗಡೆಯಿಂದ ಯಶವಂತ್ ಎಂಬವರು ತಮ್ಮ ಕಾರನ್ನು ಅತೀ ವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕೆ.ಆರ್‍.ರವೀಶ್‍ರವರು ಚಾಲನೆ ಮಾಡುತ್ತಿದ್ದ ಸ್ಕೂಟಿಗೆ ಡಿಕ್ಕಿಪಡಿಸಿದ ಪರಿಣಾಮ ಕೆ.ಆರ್. ರವೀಶ್ ಹಾಗು ಅವರ ಸ್ನೇಹಿತ ಅನಿಲ್‍ರವರು ಗಾಯಗೊಂಡಿದ್ದು ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಮೇಲೆ ದೌರ್ಜನ್ಯ:

ಸುಂಟಿಕೊಪ್ಪ ಠಾಣಾ ಸರಹದ್ದಿನ 7ನೇ ಹೊಸಕೋಟೆ ಗ್ರಾಮದ ನಿವಾಸಿ ಶ್ರೀಮತಿ ಕೆ.ಸಿ. ಜಗದೀಶ್ವರಿ ಎಂಬವರು ದಿನಾಂಕ 7-7-2019 ರಂದು ಮಧ್ಯಾಹ್ನ 2-30 ಗಂಟೆಗೆ ಸುಂಟಿಕೊಪ್ಪದ ತೊಂಡೂರುಗೆ ಹೋಗಿ ಬರುತ್ತಿದ್ದಾಗ ತೊಂಡೂರಿನ ನಿವಾಸಿ ಕಬೀರ್‍ ಎಂಬ ವ್ಯಕ್ತಿ ಕೆ.ಸಿ. ಜಗದೀಶ್ವರಿಯವರ ಕುತ್ತಿಗೆಯನ್ನು ಹಿಡಿದು ಎಳೆದಾಡಿ ಬೀಳಿಸಿ ಗಾಯಪಡಿಸಿದ್ದು ಅಲ್ಲದೆ ಮಾನಭಂಗಕ್ಕೆ ಯತ್ನಿಸಿದ್ದಾರೆಂದು ಆರೋಪಿಸಿ ಶ್ರೀಮತಿ ಕೆ.ಸಿ. ಜಗದೀಶ್ವರಿರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಪಘಾತ, ಮೃತಪಟ್ಟ ಬೈಕ್ ಸವಾರ:

ವಿರಾಜಪೇಟೆ ತಾಲೋಕು ತಾವಳಗೇರಿ ಗ್ರಾಮದ ನಿವಾಸಿ ಮಚ್ಚಮಾಡ ಎಂ.ಉತ್ತಯ್ಯ ಎಂಬವರ ಮಗ ದೇವಯ್ಯ @ ಡ್ಯಾನಿ ಎಂಬವರು ದಿನಾಂಕ 7-7-2019 ರಂದು ಕುರ್ಚಿಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಮೋಟಾರ್ ಸೈಕಲಿನಲ್ಲಿ ಹೋಗುತ್ತಿದ್ದಾಗ ಅಪರಿಚಿತ ಕಾರೊಂದು ಡಿಕ್ಕಿಯಾಗಿ ಸ್ಥಳದಲ್ಲೇ ಅವರು ಸಾವನಪ್ಪಿದ್ದು, ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.