Crime News

ವ್ಯಕ್ತಿ ಆತ್ಮಹತ್ಯೆ

ದಿನಾಂಕ 07/07/2019ರಂದು ಸಿದ್ದಾಪುರ ಬಳಿಯ ಹಚ್ಚಿನಾಡು ನಿವಾಸಿ ಎರವರ ರವಿ ಎಂಬವರು ಯಾವುದೋ ವಿಚಾರಕ್ಕೆ ಜುಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮರ ಬಿದ್ದು ಮಹಿಳೆ ಸಾವು

ದಿನಾಂಕ 08/07/2019 ರಂದು ಮಕ್ಕಂದೂರು ನಿವಾಸಿ ಬೇಬಿ ಎಂಬ ಮಹಿಳೆಯು ತೀವ್ರತರವಾದ ಗಾಳಿ ಮಳೆಯಿಂದ ಮರ ಬಿದ್ದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ದಿನಾಂಕ 07/07/2019ರಂದು ರಾತ್ರಿ ವೇಳೆ ಪೊನ್ನಂಪೇಟೆ ಬಳಿಯ ಸುಳುಗೋಡು ನಿವಾಸಿ ಪಾರ್ವತಿ ಎಂಬವರ ಮಗ ಸಂದೀಪ್ ಎಂಬಾತನು ಅತೀವವಾಗಿ ಮದ್ಯಪಾನ ಮಾಡಿ ಮತ್ತಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಗಂಡಸು ಕಾಣೆ

ಗೋಣಿಕೊಪ್ಪ ನಗರದ ನಿವಾಸಿ ಮೀರಾ ಎಂಬವರ ಗಂಡ ಮೋಹನ ಎಂಬವರು ಕಳೆದ ಫೆಬ್ರವರಿ ತಿಂಗಳಲ್ಲಿ ಮನೆಯಿಂದ ಹೋದವರು ಇದುವರೆಗೂ ಮರಳಿ ಬಂದಿರುವುದಿಲ್ಲ ಎಂದು ಮೀರಾರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 08/07/2019ರಂದು ಸೋಮವಾರಪೇಟೆ ಬಳಿಯ ಬಾಣಾವಾರ ನಿವಾಸಿ ರಾಜೇಶ್ವರಿ ಎಂಬ ಮಹಿಳೆಯ ಮೇಲೆ ಹಾನಗಲ್ಲು ನಿವಾಸಿ ಬಾಬು ಯಾನೆ ರವಿ ಎಂಬವರು ಆಸ್ತಿ ವಿಚಾರದಲ್ಲಿ ಜಗಳವಾಡಿ ಕತ್ತಿಯಿಂದ ಕಡಿದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 08/07/2019ರಂದು ಸುಂಟಿಕೊಪ್ಪ ಬಳಿಯ ಗರಗಂದೂರು ನಿವಾಸಿ ಎಂ.ಹೆಚ್.ಉಮ್ಮರ್ ಖಾನ್ ಎಂಬವರಿಗೆ ಅದೇ ಗ್ರಾಮದ ನಿವಾಸಿಗಳಾದ ಲೋಕೇಶ್‌ ಮತ್ತು ಅರವಿಂದ್ ಎಂಬವರು ವಿನಾ ಕಾರಣ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.