Crime News

ಹಾವು ಕಚ್ಚಿ ವ್ಯಕ್ತಿ ದುರ್ಮರಣ:

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಕೂಡಿಗೆ ಗ್ರಾಮದ ನಿವಾಸಿ ಶ್ರೀಮತಿ ಲಕ್ಷ್ಮಮ್ಮ ಎಂಬವರ ಪತಿ ಚನ್ನೇಗೌಡ ಎಂಬವರು ದಿನಾಂಕ 10-7-2019 ರಂದು     ಹಸುಗಳಿಗೆ ಹುಲ್ಲನ್ನು ತರಲೆಂದು ಹೋಗಿದ್ದ ಸಂದರ್ಭದಲ್ಲಿ ಯಾವುದೋ ಹಾವು ಕಚ್ಚಿ ಮೃತಪಟ್ಟಿದ್ದು, ಮೃತರ ಪತ್ನಿ ಲಕ್ಷ್ಮಮ್ಮನವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ತನ್ನ ಆಸ್ಪತ್ರೆಗೆ ಹೋಗಲು ತಡೆ, ಬೆದರಿಕೆ:

ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜೇಗೌಡ ಬಡಾವಣೆಯಲ್ಲಿ ಡಾ:ಯಜ್ಞನಾರವಿ ಎಂಬವರು ತಮ್ಮ ಮೆನಯಲ್ಲಿಲ ಈಶವ್ಯಾಸಂ ಎಂಬ ಆಸ್ಪತ್ರೆಯನ್ನು ನಡೆಸುತ್ತಿದ್ದು, ಸದರಿ ಆಸ್ಪತ್ರೆಯ ಬೀಗವನ್ನು ಅವರ ಗಂಡ ಶ್ಯಾಮ್ ಪ್ರಸಾದ್‍ ಹಾಗು ಅತ್ತೆ ವಾಸಂತಿ ಮತ್ತು ಗುರೂಜಿ ಎಂದು ಹೇಳುತ್ತಿರುವ ರಾಜಗಜೇಂದ್ರ ಎಂಬವರು ಸೇರಿ  ಒಡೆದು ಹಾಕಿ ಅವರೇ ಆಸ್ಪತ್ರೆಯನ್ನು ನಡೆಸುತ್ತಿದ್ದು ಡಾ: ಯಜ್ಞನಾರವಿ ರವರನ್ನು ಅಲ್ಲಿಗೆ ಹೋಗಲು ಅಡ್ಡಿಪಡಿಸಿ ಬೆದರಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಜಾನುವಾರು ಕಳವು:

ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ದೊಡ್ಡ ಬಿಹಳ ಗ್ರಾಮದ ಪೂರ್ಣತೇಜ ಎಂಬವರಿಗೆ ಸೇರಿದ ದನದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಒಂದು ಹಸು ಮತ್ತು ಒಂದು ಕರುವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಪೂರ್ಣತೇಜರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು  ಠಾಣೆಯಲ್ಲಿ ಪ್ರಕರಣ ದಾಖಲಿಸಿದ ತನಿಖೆ ಕೈಗೊಂಡಿದ್ದಾರೆ.