Crime News

ನಕಲಿ ಮೊಹರು, ವಂಚನೆ

 ಗುಜರಾತಿನಿಂದ ಸುಮಾರು 71 ಗಿರ್ ತಳಿಯ ಹಸುಗಳನ್ನು ರಾಜ್ಯಕ್ಕೆ ಸಾಗಿಸಲು ಕುಮಟಾ ತಾಲೂಕಿನ ಯೋಗ ಗ್ರಾಮದ ನಿವಾಸಿ ಡಾ. ಸತ್ಯಜಿತ್ ಎಂಬವರು ರಾಜ್ಯ ಡೈರಿ ಅಭಿವೃದ್ದಿ ನಿಗಮದ ಸಹಾಯಕ ನಿರ್ದೇಶಕರಾದ ಡಾ.ಎ.ಎನ್.ಪಾಟೀಲರು ಸಾರಿಗೆ ಅನುಮತಿ ಪತ್ರ ನೀಡಿದಂತೆ ನಕಲಿ ಮೊಹರನ್ನು ಬಳಸಿ ನಕಲಿ ಅನುಮತಿ ಪತ್ರವನ್ನು ತಯಾರಿಸಿರುವುದಾಗಿ ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿಗಳು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹಲ್ಲೆ ಪ್ರಕರಣ

ದಿನಾಂಕ 10/07/2019ರಂದು ಶ್ರೀಮಂಗಲ ಬಳಿಯ ತೂಚಮಕೇರಿ ನಿವಾಸಿ ವಿ.ವಿ.ಸರಸ್ವತಿ ಎಂಬವರ ಮಗ ವರುಣಾಚಲ ಎಂಬವರು ಸರಸ್ವತಿರವರ ಪತಿ ವೆಂಕಟಾಚಲರವರಿಗೆ ಬೈದು ಕತ್ತಿಯಿಂದ ಸರಸ್ವತಿ ಮತ್ತು ವೆಂಕಟಾಚರವರ ಮೇಲೆ ಕಡಿದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೂಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.