Crime News

ಅಕ್ರಮ ಮರಳು ಸಂಗ್ರಹ

           ದಿನಾಂಕ 12-07-2019 ರಂದು ವಿರಾಜಪೇಟೆ ತಾಲೋಕಿನ ನಾಲ್ಕೇರಿ ಗ್ರಾಮದ ರಾಮತೀರ್ಥ ಹೊಳೆಯಿಂದ ಚಿಮ್ಮಣಮಾಡ ರವೀಂದ್ರ ಎಂಬುವವರು ಅಕ್ರಮವಾಗಿ ಮರಳು ತೆಗೆದು ಶೇಖರಣೆ ಮಾಡಿದ್ದನ್ನು ಕುಟ್ಟ ಪೊಲೀಸರು ಪತ್ತೆ ಹಚ್ಚಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಅಪಘಾತ ಪ್ರಕರಣ

          ದಿನಾಂಕ 12-07-2019 ರಂದು ಮಡಿಕೇರಿಯ ನಿವಾಸಿ ಸುನಿಲ್ ಎಂಬುವವರು ಸೋವಾರಪೇಟೆಯ ಕುಂದಳ್ಳಿ ಗ್ರಾಮಕ್ಕೆ ಕಾರಿನಲ್ಲಿ ಹೋಗಿದ್ದವರು ವಾಪಾಸ್ಸು ಮಡಿಕೇರಿಗೆ ಬರುತ್ತಿರುವಾಗ ಶಾಂತಳ್ಳಿ ಗ್ರಾಮದ ಬಸವನ ಕಟ್ಟೆ ಎಂಬಲ್ಲಿಗೆ ತಲುಪುವಾಗ ಎದುರಿನಿಂದ ಬಂದ ಬಸ್ಸನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಸುನಿಲ್ ರವರಿಗೆ ಗಾಯವಾಗಿದ್ದು, ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.