Crime News

ರಸ್ತೆ ಅಪಘಾತ

ದಿನಾಂಕ 10/07/2019ರಂದು ಸುಂಟಿಕೊಪ್ಪದ ನಿವಾಸಿ ಗೃಹ ರಕ್ಷಕ ದಳದಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿರುವ ಮಮತಾ ಎಂಬವರು ಕುಶಾಲನಗರದ ಫಾತಿಮಾ ಜಂಕ್ಷನ್ ಬಳಿ ಸಂಚಾರ ನಿಯಂತ್ರಣ ಕರ್ತವ್ಯ ನಿರ್ವಹಿಸಿಕೊಂಡಿರುವಾಗ ಕೆಎ-12-ಎ-7951 ಸಂಖ್ಯೆ ರಿಕ್ಷಾವನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕರ್ತವ್ಯನಿರತರಾಗಿದ್ದ ಮಮತಾರವರಿಗೆ ಡಿಕ್ಕಿಪಡಿಸಿದ ಪರಿಣಾಮ ಮಮತಾರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.