Crime News

ರಸ್ತೆತಡೆದು ವ್ಯಕ್ತಿ ಮೇಲೆ ಹಲ್ಲೆ:

ಸುಂಟಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ಕಂಬಿಬಾಣೆ ಗ್ರಾಮದ ಬಿ.ಎಂ. ರಶೀದ್ ಎಂಬವರು ದಿನಾಂಕ 14-7-2019 ರಂದು ತಮ್ಮ ಬಾಪ್ತು ಸ್ಕೂಟಿಯಲ್ಲಿ ಅಂದಗೋವೆ ಬಸ್‍ನಿಲ್ದಾಣದ ಹತ್ತಿರ ಹೋಗುತ್ತಿದ್ದಾಗ ಮಳೂರು ನಿವಾಸಿ ಮೋನಿ ಹಾಗು ಆತನ ಸ್ನೇಹಿತ ಸೇರಿ ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದು ಬಿ.ಎಂ. ರಶೀದ್‍ರವರನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಜಗಳ ಮಾಡಿ ಹಲ್ಲೆ ಮಾಡಿ ನೊವನ್ನುಂಟುಮಾಡಿರುತ್ತಾರೆಂದು ನೀಡಿರುವ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿನಾಕಾರಣ ವ್ಯಕ್ತಿ ಮೇಲೆ ಹಲ್ಲೆ:

ಸೋಮವಾರಪೇಟೆ ತಾಲೋಕು ತಣ್ಣೀರಳ್ಳ ಗ್ರಾಮದ ವಾಸಿ ಟಿ.ಎನ್. ದೀಪು ಎಂಬವರು ದಿನಾಂಕ 14-7-2019 ರಂದು ಸಂಜೆ 8-45 ಗಂಟೆ ಸಮಯದಲ್ಲಿ ಸೋಮವಾರಪೇಟೆ ನಗರದ ದರ್ಗದ ಹತ್ತಿರ ಅವರ ಸ್ನೇಹಿತರೊಂದಿಗೆ  ಮಾತನಾಡಿಕೊಂಡಿದ್ದು, ಯಾವುದೋ ವಿಚಾರದಲ್ಲಿ ಆರೋಪಿಗಳಾದ ಸತ್ತಾರ್‍ ಮತ್ತು ಇತರೆ 5 ಜನರು ಸೇರಿ ಟಿ.ಎನ್. ದೀಪುರವರ ಮೇಲೆ ಕೈಗಳಿಂದ ಹಾಗು ದೊಣ್ಣೆಯಿಂದ ಹಲ್ಲೆ ನಡೆಸಿ ನೋವನ್ನುಂಟುಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ದಾರಿ ತಡೆದು ಹಲ್ಲೆ:

ಸೋಮವಾರಪೇಟೆ ತಾಲೋಕು ಕಲ್ಕಂದೂರು ಗ್ರಾಮದ ವಾಸಿ ಕೆ.ಎ. ಅಜ್ಮಲ್ ಎಂಬವರು ದಿನಾಂಕ 14-7-2019 ರಂದು ಸಂಜೆ 8-45 ಗಂಟೆ ಸಮಯದಲ್ಲಿ ಸೋಮವಾರಪೇಟೆ ನಗರದ ದರ್ಗದ ಹತ್ತಿರವಿರುವ ಕಬಾಬ್ ಅಂಗಡಿಗೆ ಮರಳುತ್ತಿರುವಾಗ ದೀಪು ಎಂಬವರು ಅವರನ್ನು ದಾರಿಯಲ್ಲಿ ತಡೆದು ಹಲ್ಲೆ ನಡೆಸಿರುತ್ತಾರೆಂದು ಆರೋಪಿಸಿ  ನೀಡಿದ ದೂರಿನ ಮೇರೆಗೆ  ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.