Crime News

ವ್ಯಕ್ತಿ ಕಾಣೆ ಪ್ರಕರಣ

ಭಾಗಮಂಡಲ ವ್ಯಾಪ್ತಿಯ ಕರಿಕೆ ಗ್ರಾಮದ ತೋಟಂ ಎಂಬಲ್ಲಿನ ನಿವಾಸಿ ವಿನು ಎಂಬವರು ದಿನಾಂಕ 13/07/2019ರಂದು ಪಾಣತ್ತೂರಿಗೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ಬಟ್ಟೆಬರೆಗಳೊಂದಿಗೆ ಹೊರಟು ಹೋಗಿದ್ದು ಇದುವರೆಗೂ ಮರಳಿ ಬಂದಿರುವುದಿಲ್ಲ ಎಂಬುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಸಾವು

ಮಡಿಕೇರಿ ನಗರದ ಮಂಗಳಾದೇವಿ ನಗರದ ನಿವಾಸಿ ಅಶೋಕ ಎಂಬವರು ದಿನಾಂಕ 15/07/2019ರಂದು ಮಡಿಕೇರಿ ನಗರದ ಮೂರ್ನಾಡು ರಸ್ತೆಯ ನಗರ ಸಭೆಯ ಶೌಚಾಲಯದ ಬಳಿ ಕುಸಿದು ಬಿದ್ದು ಮೃತರಾಗಿದ್ದು ಅಶೋಕರವರು ಅತೀವ ಮದ್ಯವ್ಯಸನಿಯಾಗಿದ್ದು ಆರೋಗ್ಯವನ್ನು ನೋಡಿಕೊಳ್ಳದ ಕಾರಣದಿಂದ ಮೃತರಾಗಿರಬಹುದಾಗಿ ಮೃತ ಅಶೋಕರವರ ಪತ್ನಿ ಸುಮಿತ್ರರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.