Crime News

ಗಾಂಜಾ ಸೇವನೆ, ಪ್ರಕರಣ ದಾಖಲು

             ದಿನಾಂಕ 16-07-2019 ರಂದು ಪೊನ್ನಂಪೇಟೆಯ ಹಳ್ಳಿಗಟ್ಟು ಎಂಬಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಸಾದಲಿ ಎಂಬುವವರನ್ನು ವಶಕ್ಕೆ ತೆಗೆದುಕೊಂಡು ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಅಪಘಾತ ಪ್ರಕರಣ

            ದಿನಾಂಕ 15-07-2019 ರಂದು ಕಂಬಿಬಾಣೆಯ ನಿವಾಸಿಯಾದ ಮರಿಯಪ್ಪ ಎಂಬುವವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಚಿಕ್ಲಿಹೊಳೆ ಕಡೆಯಿಂದ ಬಂದ ಮೋಟಾರು ಸೈಕಲ್ ಮರಿಯಪ್ಪರವರಿಗೆ ಡಿಕ್ಕಿಯಾಗಿ ಗಾಯಗೊಂಡಿದ್ದು, ಡಿಕ್ಕಿಪಡಿಸಿದ ಮೋಟಾರು ಸೈಕಲನ್ನು ಚಾಲಕ ನಿಲ್ಲಿಸದೇ ಹೋಗಿದ್ದು, ಈ ಬಗ್ಗೆ ಶುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕೇರಳ ಲಾಟರಿ ಟಿಕೆಟ್ ಮಾರಾಟಗಾರರ ಬಂಧನ

            ದಿನಾಂಕ 22-05-2019 ರಂದು ಸಿದ್ದಾಪುರದ ನಿವಾಸಿಯಾದ ಸಾದಿಕ್ ಎಂಬುವವರು ಸಿದ್ದಾಪುರದಲ್ಲಿ ಕೇರಳ ರಾಜ್ಯದ ಲಾಟರಿ ಟೆಕೆಟ್ ಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದವನನ್ನು ಸಿದ್ದಾಪುರ ಠಾಣೆಯ ಪಿಎಸ್ಐ ರವರು ದಸ್ತಗಿರಿ ಮಾಡಿ ಟಿಕೆಟ್ ಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಅಪಘಾತ ಪ್ರಕರಣ

           ದಿನಾಂಕ 16-07-2019 ರಂದು ಪಾಲಿಬೆಟ್ಟದ ನಿವಾಸಿಯಾದ ಮಣಿಯವರು ತನ್ನ ಆಟೋರಿಕ್ಷಾದಲ್ಲಿ ಚೊಟ್ಟೆಪಾರೆ ನಿವಾಸಿ ಚಂದ್ರಾವತಿಯವನ್ನು ಕರೆದುಕೊಂಡು ಪಾಲಿಬೆಟ್ಟದಿಂದ ಚೊಟ್ಟೆಪಾರೆಗೆ ಹೋಗುತ್ತಿರುವಾಗ ಎದುರಿನಿಂದ ಬಂದ ಮಾರುತಿ 800 ಕಾರನ್ನು ಅದರ ಚಾಲಕ ಇಬ್ರಾಹಿಂ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಆಟೋ ರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ಮಣಿ ಹಾಗೂ ಚಂದ್ರಾವತಿಯವರಿಗೆ ಗಾಯವಾಗಿದ್ದು, ಈ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

           ದಿನಾಂಕ 16-07-2019 ರಂದು ಮಡಿಕೇರಿ ತಾಲೋಕಿನ ಕುಂಜಿಲ ಗ್ರಾಮದ ನಿವಾಸಿ ನೌಫಲ್, ಸಾದಲಿ, ಸಫಿಯಾರವರಿಗೆ ಮತ್ತು ಸಲಾವುದ್ದೀನ್, ಸಮೀರ್ ರವರಿಗೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿಕೊಂಡಿದ್ದು ಎರಡೂ ಕಡೆಯವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣ ದಾಖಲಾಗಿರುತ್ತದೆ.

ಕೊಲೆ ಯತ್ನ

          ದಿನಾಂಕ 16-07-2019 ರಂದು ಅಭ್ಯ ತ್ ಮಂಗಲ ಗ್ರಾಮದ ನಿವಾಸಿಗಳಾದ ರಘು ಮತ್ತು ಚಂದ್ರ ರವರು ಅಣ್ಣನ ಮಗಳನ್ನು ಚುಡಾಯಿಸುತ್ತಿದ್ದ ಮವಿನ್ ಮತ್ತು ಕಿರಣ್ ರವರನ್ನು ವಿಚಾರಿಸಿದಾಗ ಅವರು ಚಾಕುವಿನಿಂದ ತಿವಿಯಲು ಪ್ರಯತ್ನಿಸಿದ್ದು, ಈ ಬಗ್ಗೆ ರಘುರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.