Crime News

ಬೈಕ್ ಅಪಘಾತ ವ್ಯಕ್ತಿ ಸಾವು:

ಸೋಮವಾರಪೇಟೆ ತಾಲೋಕು ಸೀಗೆಹೊಸೂರು ಗ್ರಾಮದ ನಿವಾಸಿ ಶ್ರೀಮತಿ ಶೋಭಾ ಎಂಬವರ ಗಂಡ ಶಿವಕುಮಾರ ಎಂಬವರು ದಿನಾಂಕ 16-6-2019 ರಂದು ತನ್ನ ತಮ್ಮ ಮೂರ್ತಿ ಎಂಬವರ ಮೋಟಾರ್ ಸೈಕಲಿನಲ್ಲಿ  ಅವರ ಮನೆಯ ಕಡೆಗೆ ಹೋಗುತ್ತಿದ್ದಾಗ ಮೋಟಾರ್‍ ಸೈಕಲ್ ರಸ್ತೆಯ ಪಕ್ಕದಲ್ಲಿರುವ ಕಲ್ಲುಕಂಬಕ್ಕೆ  ಡಿಕ್ಕಿಯಾದ ಪರಿಣಾಮ ಶಿವಕುಮಾರ್‍ರವರ ತಲೆಗೆ ತೀವ್ರವಾದ ಗಾಯವಾಗಿದ್ದು  ಅವರನ್ನು ಮೈಸೂರಿನ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 17-7-2019 ರಂದು ಮೃತಪಟ್ಟಿದ್ದು ಈ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇವಾಲಯದ ಹುಂಡಿಯಿಂದ ಹಣ ಕಳವು:

ದಿನಾಂಕ 6-7-2019 ರಿಂದ 17-7-2019 ರ ನಡುವಿನ ಅವಧಿಯೊಳಗೆ ಶ್ರೀಮಂಗಲ ಪೊಲೀಸ್ ಠಾಣೆ ಸರಹದ್ದಿನ ಈಸ್ಟ್‍ನೆಮ್ಮಲೆ ಗ್ರಾಮದಲ್ಲಿರುವ ಶ್ರೀ ದುರ್ಗಾದೇವಾಲಯದ ದೇವರ ಹುಂಡಿಯ ಬೀಗವನ್ನು ಯಾರೋ ಕಳ್ಳರು ಒಡೆದು ಹುಂಡಿಯಲ್ಲಿದ್ದ 2500/- ರೂ.ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಸಂಬಂಧ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ:

ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಮೈತಾಡಿ ಗ್ರಾಮದಲ್ಲಿ ದಿನಾಂಕ 17-7-2019 ರಂದು ಎಂ.ಬಿ. ಅನಿಲ್ ಅಯ್ಯಪ್ಪ ಎಂಬವರು ಕೆಲಸದ ನಿಮಿತ್ತ ಹೋಗುತ್ತಿರುವಾಗೆ ಮೈತಾಡಿ ಗ್ರಾಮದ ಕಾವೇರಿ ಹೊಳೆಯಲ್ಲಿ ಒಬ್ಬ 40 ರಿಂದ 45 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯ ಮೃತದೇಹವು ತೇಲುತ್ತಿರುವುದು ಕಂಡು ಬಂದಿದ್ದು, ಈ ಸಂಬಂಧ ಸದರಿಯವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಜಾಗಕ್ಕೆ ಹಣ ಪಡೆದು ವಂಚನೆ:

ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ ಗುಹ್ಯ ಗ್ರಾಮದ ಎಂ.ಕೆ. ಬಾಲಕೃಷ್ಣ ಎಂಬವರಿಂದ  ಕೆ.ಎಸ್‍. ಸ್ಟಾನ್ಲಿ ಹಾಗು ಶ್ರೀಮತಿ ಬೀನಾ ಕೆ.ಎಸ್‍ ರವರು ಜಾಗವನ್ನು ಮಾರಾಟ ಮಾಡುವುದಾಗಿ 9,70,000/-ರೂ. ಹಣವನ್ನು ಪಡೆದುಕೊಂಡು ನೋಂದಣಿ ಮಾಡಿಕೊಡದೆ ವಂಚಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.