Crime News

ಕ್ಷುಲ್ಲಕ ಕಾರಣ ವ್ಯಕ್ತಿ ಮೇಲೆ ಹಲ್ಲೆ:

ತೋಟದಲ್ಲಿದ್ದ ಮರದ ಕೊಂಬೆ ಕಡಿದ ವಿಚಾರದಲ್ಲಿ ಜಗಳ ಮಾಡಿ ವ್ಯಕ್ತಿ ಮೇಲೆ ಹಲ್ಲೆನಡೆಸಿದ ಘಟನೆ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೋಮವಾರಪೇಟೆ ತಾಲೋಕು ಚಿಕ್ಕತೊಳೂರು ಗ್ರಾಮದ ನಿವಾಸಿ ಸಿ.ಕೆ. ಚಂದ್ರಪ್ಪ ಎಂಬವರು ದಿನಾಂಕ 13-5-2018 ರಂದು ಬೆಳಗ್ಗೆ ತಮ್ಮ ಗದ್ದೆಯಲ್ಲಿ ಬೆಳೆದ ತರಕಾರಿಯನ್ನು ಸೋಮವಾರಪೇಟೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದಾಗ ಸಮಯ ಮಧ್ಯಾಹ್ನ 2-00 ಗಂಟೆ ಸಮಯದಲ್ಲಿ ಅವರ ಚಿಕ್ಕಪ್ಪನ ಮಗ ಆರೋಪಿ ಕಿರಣ್ ಎಂಬವರು ಅಲ್ಲಿಗೆ ಬಂದು ತೋಟದಲ್ಲಿದ್ದ ಸಿಲ್ವರ್ ಮರದ ಕೊಂಬೆಯನ್ನು ಕಡೆದ ವಿಚಾರವಾಗಿ ಜಗಳ ಮಾಡಿ ಕಲ್ಲಿನಿಂದ ಹಲ್ಲೆ ಮಾಡಿ ಗಾಯಪಡಿಸಿದ್ದು, ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹಣದ ವಿಚಾರದಲ್ಲಿ ವ್ಯಕ್ತಿ ಮೇಲೆ ಹಲ್ಲೆ:

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಹಚ್ಚಿನಾಡು ಗ್ರಾಮದಲ್ಲಿ ಟಿ.ಪಿ. ಮೇದಪ್ಪ ಎಂಬವರು ಅಂಗಡಿಯನ್ನು ನಡೆಸುತ್ತಿದ್ದು ದಿನಾಂಕ 13-5-2018 ರಂದು ಆರೋಪಿಗಳಾದ ತಂಬುಕುತ್ತೀರ ಈರಪ್ಪ, ತಂಬುಕುತ್ತೀರ ವಿಠಲ, ತಂಬುಕುತ್ತೀರ ವಿಜು ರವರು ಅಲ್ಲಿಗೆ ಬಂದು ವ್ಯಾಪಾರಕ್ಕೆ ಅಡ್ಡಿಪಡಿಸಿ, ಪ್ರತಿದಿನಕ್ಕೆ ಇಂತಿಷ್ಟು ಹಣವನ್ನು ನೀಡಬೇಕಂದು ತಾಕೀತು ಮಾಡಿ ಹಣ ನೀಡಲು ಸಾಧ್ಯವಿಲ್ಲವೆಂದು ಹೇಳಿದ ವಿಚಾರದಲ್ಲಿ ಜಗಳ ಮಾಡಿ ಟಿ.ಪಿ.ಮೇದಪ್ಪನವರ ಮೇಲೆ ಮೂವರು ಸೇರಿ ಹಲ್ಲೆ ನಡೆಸಿ ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published.