Crime News

ಮದ್ಯಪಾನ, ವ್ಯಕ್ತಿ ಸಾವು

ಅತೀವವಾಗಿ ಮದ್ಯಪಾನ ಮಾಡಿ ನಿತ್ರಾಣನಾಗಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 17/07/2019ರಂದು ಮಾಕುಟ್ಟ ನಿವಾಸಿ ಕೆ.ರವಿ ಎಂಬವರು ವಿರಾಜಪೇಟೆ ನಗರದ ಮೀನುಪೇಟೆ ಬಳಿ ಅತೀವ ಮದ್ಯಪಾನ ಮಾಡಿ ನಿತ್ರಾಣನಾಗಿ ಬಿದ್ದಿದ್ದು ಅವರನ್ನು ಯಾರೋ ಆಸ್ಪತ್ರೆಗೆ ದಾಖಲಿಸಿದ್ದು ಆಸ್ಪತ್ರೆಯಲ್ಲಿ ಮೃತರಾಗಿರುವುದಾಗಿ ರವಿವರವರ ಮಗ ಮನುರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 18/07/2019ರಂದು ತೊರೆನೂರು ಬಳಿಯ ಅರಸಿನಗುಪ್ಪೆ ಗ್ರಾಮದ ನಿವಾಸಿ ಎ.ಎಸನ್.ರವಿ ಎಂಬವರ ಮನೆಯಲ್ಲಿ ಅವರ ಅಣ್ಣ ಪ್ರದೀಪ್‌ ಎಂಬವರು ಆಸ್ತಿ ವಿಚಾರವಾಗಿ ಜಗಳವಾಡಿ ರವಿರವರಿಗೆ ಮತ್ತು ತಾಯಿ ಪಾರ್ವತಿಯವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಯುವಕ ಕಾಣೆ ಪ್ರಕರಣ

ದಿನಾಂಕ 17/07/2019ರಂದು ಸಿದ್ದಾಪುರ ಬಳಿಯ ಕರಡಿಗೋಡು ಗ್ರಾಮದಲ್ಲಿ ಚಿಕ್ಕನಳ್ಳಿ ತೋಟದ ಉಸ್ತುವಾರಿ ನೋಡಿಕೊಂಡಿದ್ದ ಸೆಂದಿಲ್‌ಕುಮಾರ್ ಎಂಬವರು ಊರಿಗೆ ಹೋಗಿ ಬರುವುದಾಗಿ ಹೇಳಿ ಇದುವರೆಗೂ ಮರಳಿ ಬಂದಿರುವುದಿಲ್ಲವೆಂದು ತೋಟದ ಮಾಲೀಕ ಸ್ವಾಮಿನಾಥನ್‌ರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.