Crime News

ವ್ಯಕ್ತಿಯ ಕೊಲೆಗೆ ಯತ್ನ:

ದಿನಾಂಕ 18-7-2019 ರಂದು ಸೋಮವಾರಪೇಟೆ ಠಾಣಾ ಸರಹದ್ದಿನ ಐಗೂರು ಗ್ರಾಮದ ನಿವಾಸಿ ಎಸ್‍.ಕೆ. ಜೋಯಪ್ಪ ಎಂಬವರನ್ನು  ಅವರ ಅಣ್ಣನ ಮಗನಾದ ರಂಜನ್ ಸೋಮಯ್ಯ ಎಂಬವರು ಕಾರಿನಲ್ಲಿ ಬಲತ್ಕಾರವಾಗಿ ಕರೆದುಕೊಂಡು ಹೋಗಿ ರಾತ್ರಿಯಿಡಿ ತಮ್ಮ ಮನೆಯಲ್ಲಿ ಇಟ್ಟುಕೊಂಡು ಮಾರನೇ ದಿನ ಕಾರಿನಲ್ಲಿ ಕರೆದುಕೊಂಡು ಹೋಗಿ ದಾರಿ ಮದ್ಯೆಯಲ್ಲಿ ಇಳಿಸಿ ಕೊಲೆ ಮಾಡುವ ಉದ್ದೇಶದಿಂದ ದೊಣ್ಣೆಯಿಂದ ಹಲ್ಲೆ ಮಾಡಿ ಕಣ್ಣಿನ ಭಾಗಕ್ಕೆ ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬೈಕಿಗೆ ಕಾರು ಡಿಕ್ಕಿ:

ದಿನಾಂಕ 18-07-2019 ರಂದು  ಕೊಡಗರಹಳ್ಳಿ ಗ್ರಾಮದ ಜೀವನ್ ಕುಮಾರ್ ಮತ್ತು ಬಾಲಕೃಷ್ಣ ರವರು ತಮ್ಮ ಬಾಪ್ತು ಮೋಟಾರ್‍ ಸೈಕಲಿನಲ್ಲಿ ಕುಶಾಲನಗರದ ಕಡೆಗೆ ಹೋಗುತ್ತಿದ್ದಾಗ  ಕುಶಾಲನಗರ ಕಡೆಯಿಂದ ಕೆ ಎ 51 ಎಂಡಿ 1866 ರ ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಜೀವನ್ ಕುಮಾರ್ ಚಾಲನೆ ಮಾಡುತ್ತಿದ್ದ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಇಬ್ಬರೂ ರಸ್ತೆಗೆ ಬಿದ್ದು ಕುತ್ತಿಗೆ , ಕೈ, ಕಾಲು ಮತ್ತು ಇತರ ಬಾಗಗಳಿಗೆ ಪೆಟ್ಟಾಗಿದ್ದು, ಡಿಕ್ಕಿ ಪಡಿಸಿದ ಕಾರಿನ ಚಾಲಕ ಕಾರನ್ನು ನಿಲ್ಲಿಸದೆ ಹೊರಟು ಹೋಗಿದ್ದು, ಈ ಬಗ್ಗೆ ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೆಂಕಿಹಚ್ಚಿಕೊಂದು ವ್ಯಕ್ತಿ ಆತ್ಮಹತ್ಯೆ:

ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕಡಗದಾಳು ಗ್ರಾಮದ ಎಂ.ಎ. ಹಮೀದ್ ಎಂಬವರ ತಂದೆ ಅಜೀಜ್ ಎಂಬವರು ಹೃಧಯ ಸಂಬಂಧಿ ಕಾಯಿಲೆಯಿಂದ ನರಳು‍ತ್ತಿದ್ದು ಇದರಿಂದ ಜಿಗುಪ್ಸೆಗೊಂಡ ಅವರು ದಿನಾಂಕ 18-7-2019 ರಂದು ಸೀಮೆಣ್ಣೆ ಮೈಮೇಲೆ ಸುರಿದುಕೊಂಡು ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಎಂ.ಎ. ಹಮೀದ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮದುವೆ ವಿಚಾರದಲ್ಲಿ ವ್ಯಕ್ತಿಗೆ ಕೊಲೆ ಬೆದರಿಕೆ:

ಮಡಿಕೇರಿ ನಗರ ಠಾಣಾ ಸರಹದ್ದಿನ ಐ.ಟಿ.ಐ. ಹಿಂಭಾಗದಲ್ಲಿ ವಾಸವಾಗಿರುವ ಸಿ.ಕೆ. ಅಪ್ಪಾಜಿ ಎಂಬವರ ಮನೆಗೆ ದಿನಾಂಕ 19-7-2019 ರಂದು ಮಡಿಕೇರಿ ನಗರದ ನಿವಾಸಿಗಳಾದ ಗುರು ಹಾಗು ಮೋನಿಷ್ ರವರುಗಳು ಅಕ್ರಮ ಪ್ರವೇಶ ಮಾಡಿ ಮದುವೆ ವಿಚಾರದಲ್ಲಿ ಜಗಳ ಮಾಡಿ ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ಸಿ.ಕೆ. ಅಪ್ಪಾಜಿಯವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.