Crime News

ವ್ಯಕ್ತಿ ಆತ್ಮಹತ್ಯೆ:

ಗೋಣಿಕೊಪ್ಪ ಠಾಣಾ ಸರಹದ್ದಿನ ಕುಂದಗ್ರಾಮದ ನಿವಾಸಿ ಶ್ರೀಮತಿ ಕಾವೇರಿ @ ಗೌರಿ ಎಂಬವರ ಮಗ  23 ವರ್ಷದ ಮನು ಎಂಬವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 21-07/2019 ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿಯ ಕೊಲೆಗೆ ಯತ್ನ:

ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಬಿಹಳ ಗ್ರಾಮದ ನಿವಾಸಿ ಶ್ರೀಮತಿ ಹರ್ಷಿತ ಮತ್ತು ಅವರ ಗಂಡ ಪವನ್ ರವರು ಮನೆಯಲ್ಲಿ ಇರುವಾಗ್ಗೆ ಆರೋಪಿಗಳಾದ ದೊಡ್ಡಬಿಹಳ ಗ್ರಾಮದ ಪುನೀತ್, ರಮೇಶ್ ಮತ್ತು ಸುನೀಲ್ ರವರುಗಳು ಜಮೀನಿನ ವಿಚಾರದಲ್ಲಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹಲ್ಲೆ ನಡೆಸಿ ಕೊಲೆ ಮಾಡುವ ಉದ್ದೇಶದಿಂದ ದೊಣ್ಣೆಯಿಂದ ಪವನ್‍ರವರ ತಲೆಗೆ ಹಲ್ಲೆ ಮಾಡಿ ತೀವ್ರವಾಗಿ ಗಾಯಗೊಳಿಸಿದ್ದು, ಈ ಸಂಬಂಧ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಜಮೀನಿನ ವಿಚಾರದಲ್ಲಿ ಕೊಲೆಗೆ ಯತ್ನ:

ಶನಿವಾರಸಂತೆ ಠಾಣೆ ಸರಹದ್ದಿನ  ದೊಡ್ಡಬಿಹಳ ಗ್ರಾಮದ ನಿವಾಸಿ ರಮೇಶ್ ಹಾಗು ಅವರ ಮಕ್ಕಳಾದ ಪುನೀತ್, ಸುನಿಲ್‍ ಮತ್ತು ಅದೇ ಗ್ರಾಮದ ಪವನ್‍ ರವರ ನಡುವೆ ಜಮೀನ ವಿಚಾರದಲ್ಲಿ ಜಗಳ ನಡೆದು ಪವನ್‍ರವರು ಕತ್ತಿಯಿಂದ  ಪುನೀತ್‍ ನ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಮಡಿದ್ದಾರೆ.