Crime News

ವ್ಯಕ್ತಿಯ ಆತ್ಮಹತ್ಯೆ
ವಿರಾಜಪೇಟೆ ತಾಲೋಕಿನ ಪಾಲಗಾಲದಲ್ಲಿರುವ ಕ್ಲಬ್ ಮಹೇಂದ್ರದಲ್ಲಿ ಕೆಲಸ ಮಾಡುತ್ತಿರುವ ಮಿಜೋರಾಂ ರಾಜ್ಯದವರಾದ ವ್ ಲಾಲ್ ರಿನೌಮ ಎಂಬುವವರು ವಿರಾಜಪೇಟೆ ನಗರದಲ್ಲಿರುವ ಕೂರ್ಗ್ ಕಾಂಟಿನೆಂಟಲ್ ಲಾಡ್ಜ್ ನಲ್ಲಿ ವಾಸವಿದ್ದು, ದಿನಾಂಕ 21-07-2019 ರಂದು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಗಾಂಜಾ ಗಿಡ ವಶ
ವಿರಾಜಪೇಟೆ ತಾಲೋಕಿನ ಬೆಸಗೂರು ಎಂಬಲ್ಲಿ ಕಿರಣ್ ಎಂಬುವವರು ಅಕ್ರಮವಾಗಿ ತೋಟದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿರುವುದಾಗಿ ಪೊನ್ನಂಪೇಟೆ ಠಾಣೆಯ ಪಿಎಸ್ಐ ರವರಿಗೆ ದೊರೆತ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ತೆರಳಿ ದಾಳಿ ಮಾಡಿ ಗಾಂಜಾ ಗಿಡವನ್ನು ವಶಪಡಿಸಿಕೊಂಡು ಕಿರಣ್ ರವರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಹಲ್ಲೆ ಪ್ರಕರಣ
ವಿರಾಜಪೇಟೆ ತಾಲೋಕಿನ ಪೊನ್ನಂಪೇಟೆ ನಗರದಲ್ಲಿ ಹುದೂರು ಗ್ರಾಮದ ನಿವಾಸಿಯಾದ ಕೃಷ್ಣ ಎಂಬುವವರಿಗೆ ಕಾಟ್ರಕೊಲ್ಲಿಯ ನಿವಾಸಿಯಾದ ನಂದ ಮತ್ತು ಸಿದ್ದಪ್ಪಾಜಿ ಎಂಬುವವರು ಹಣದ ವಿಚಾರದಲ್ಲಿ ಜಗಳ ತೆಗೆದು ಹಲ್ಲೆ ನಡೆಸಿದ್ದು, ಈ ಬಗ್ಗೆ ಕೃಷ್ಣರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕೇರಳ ಲಾಟರಿ ಟಿಕೆಟ್ ಮಾರಾಟಗಾರರ ಬಂಧನ
ದಿನಾಂಕ 22-07-2019 ರಂದು ಪಿರಿಯಾಪಟ್ಟಣ ತಾಲೋಕಿನ ರಾಜೇಗೌಡ ಎಂಬುವವರು ಸಿದ್ದಾಪುರ ನಗರದಲ್ಲಿ ಕೇರಳ ರಾಜ್ಯದ ಲಾಟರಿ ಟೆಕೆಟ್ ಗಳನ್ನು ಮಾರಾಟ ಮಾಡುತ್ತಿದ್ದವನನ್ನು ಸಿದ್ದಾಪುರ ಠಾಣೆಯ ಪಿಎಸ್ಐ ರವರು ದಸ್ತಗಿರಿ ಮಾಡಿ ಆತನಿಂದ 30 ರೂ ಮುಖ ಬೆಲೆಯ 81 ಲಾಟರಿ ಟಿಕೆಟ್ ಗಳನ್ನು ಹಾಗೂ ನಗದು ಹಣ 350 ರೂಗಳನ್ನು ವಶಕ್ಕೆ ಪಡೆದುಕೊಂಡು ಪ್ರಕಣ ದಾಖಲಿಸಿಕೊಂಡಿರುತ್ತಾರೆ.