Crime News

ವ್ಯಕ್ತಿಯ ಆತ್ಮಹತ್ಯೆ

           ಕುಶಾಲನಗರದ ಗೊಂದಿಬಸವನ ಹಳ್ಳಿಯ ನಿವಾಸಿಯಾದ ಅನೀಶ್ ಎಂಬುವವರು ದಿನಾಂಕ 23-07-2019 ರಂದು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಶಾಲಾ ಬಾಲಕಿಗೆ ಜೀಪು ಡಿಕ್ಕಿ

         ದಿನಾಂಕ 23-07-2019 ರಂದು ಸುಂಟಿಕೊಪ್ಪದ ಕಲ್ಲುಕೋರೆ ಗ್ರಾಮದ ನಿವಾಸಿಯಾದ ಜನಾರ್ಧನ ಎಂಬುವವರ ಮಗಳು ಶಾಲೆಯಿಂದ ವಾಪಾಸ್ಸು ಮನೆಗೆ ರಸ್ತೆ ಬದಿಯಲ್ಲಿ 7 ನೇ ಹೊಸಕೋಟೆ ಎಂಬಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಜೀಪನ್ನು ಅದರ ಚಾಲಕ ಸುಬ್ಬು ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ಗಾಯಗೊಂಡಿದ್ದು, ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

         ದಿನಾಂಕ 23-07-2019 ರಂದು ಕೆದಮುಳ್ಳೂರು ಗ್ರಾಮದ ನಿವಾಸಿಯಾದ ರಾಮಯ್ಯನವರು ಪಾಲಂಗಾಲ ಎಂಬಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹರೀಶ್ ರವರು  ಹಳೇ ದ್ವೇಷದಿಂದ ಹಲ್ಲೆ ನಡೆಸಿದ್ದು, ಈ ಬಗ್ಗೆ ರಾಮಯ್ಯನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.